ಬೆಂಗಳೂರು: ನಗರದಲ್ಲಿ ನಾಳೆ 4ನೇ ದಿನದ ಗಣೇಶ ಮೂರ್ತಿ ವಿಸರ್ಜನೆ ಮಾಡಲಾಗುತ್ತಿದೆ. ಪ್ರಮುಖ ಕೆರೆ, ಕಲ್ಯಾಣಿಗಳನಲ್ಲಿ ಗಣೇಶ ಮೂರ್ತಿಯನ್ನು ಬಿಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ನಾಳೆ ಬೆಂಗಳೂರು ಜಿಲ್ಲೆಯಾಧ್ಯಂತ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಈ ಕುರಿತಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್.ಜಿ ಅವರು ಆದೇಶ ಹೊರಡಿಸಿದ್ದು, ಪೊಲೀಸ್ ಅಧೀಕ್ಷಕರು, ಬೆಂಗಳೂರು ಜಿಲ್ಲೆ ರವರು ಉಲ್ಲೇಖ (1) ರಂತೆ ಪತ್ರ ಸಲ್ಲಿಸಿ, ದಿನಾಂಕ 31-08-2025 ರಂದು ಆನೇಕಲ್ ತಾಲ್ಲೂಕು ವ್ಯಾಪ್ತಿಯಲ್ಲಿ ಹೆಚ್ಚಿನ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಕಾರ್ಯಕ್ರಮಗಳು ನಡೆಯಲಿರುವುದರಿಂದ ಹಾಗೂ ದಿನಾಂಕ 31-08-2025 ರಂದು ಭಾನುವಾರ ರಜಾ ದಿನ ಆಗಿರುವುದರಿಂದ ಗಣೇಶ ಮೂರ್ತಿಗಳ ವಿಸರ್ಜನ ಮೆರವಣಿಗೆ ಕಾರ್ಯಕ್ರಮದಲ್ಲಿ ಹೆಚ್ಚಿನ ಜನರು ಭಾಗವಹಿಸುವ ಸಾಧ್ಯತೆ ಇರುವುದರಿಂದ ಕೆಲವರು ಮದ್ಯಪಾನ ಮಾಡಿ ಅನುಚಿತ ವರ್ತನೆ ಮಾಡುವ ಸಾಧ್ಯತೆ ಇರುತ್ತದೆಂದು ಮುಂಜಾಗ್ರತಾ ಕ್ರಮವಾಗಿ ಆನೇಕಲ್ ತಾಲ್ಲೂಕಿನಲ್ಲಿರುವ ಎಲ್ಲಾ ಬಾರ್ ಗಳನ್ನು ದಿನಾಂಕ 31-08-2025 ರಂದು ಮುಚ್ಚಿಸಬೇಕೆಂದು ಕೋರಿರುತ್ತಾರೆ.
ಅದರಂತೆ ಅಬಕಾರಿ ಉಪ ಆಯುಕ್ತರು (ಬಿಯುಡಿ-8) ರವರು ಉಲ್ಲೇಖ (2) ರಂತೆ ಪತ್ರ ಸಲ್ಲಿಸಿ ದಿನಾಂಕ: 31.08.2025 ರಂದು ಬೆಳಗ್ಗೆ 06.00 ಗಂಟೆಯಿಂದ ದಿನಾಂಕ: 01.09.2025 ರ ಬೆಳಿಗ್ಗೆ 06.00 ಗಂಟೆಯವರೆಗೆ ಮದ್ಯ ಮಾರಾಟವನ್ನು ನಿಷೇಧಿಸಿ ಅದೇಶ ಹೊರಡಿಸಬುದೆಂದು ತಿಳಿಸಿರುತ್ತಾರೆ.
ಆದ್ದರಿಂದ ಬೆಂಗಳೂರು ನಗರ ಜಿಲ್ಲೆಯಾದ್ಯಂತ ಹೆಚ್ಚಿನ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಕಾರ್ಯಕ್ರಮಗಳು ನಡೆಯಲಿರುವುದರಿಂದ ಈ ಕೆಳಕಂಡಂತೆ ಆದೇಶ ಹೊರಡಿಸಿದೆ.
ಪ್ರಸ್ತಾವನೆಯ ಅಂಶಗಳನ್ವಯ ಜಗದೀಶ.ಜಿ ಭಾ.ಆ.ಸೇ. ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ ಬೆಂಗಳೂರು ಆದ ನಾನು, ಕರ್ನಾಟಕ ಅಬಕಾರಿ ಸನ್ನದುಗಳು ಸಾಮಾನ್ಯ ಷರತ್ತುಗಳು) ನಿಯಮಗಳು 1967ರ ನಿಯಮ-10 (ಬಿ) ರಂತೆ ಪದತವಾದ ಅಧಿಕಾರವನ್ನು ಚಲಾಯಿಸಿ ದಿನಾಂಕ: 31.08.2025 ರಂದು ಬೆಳೆಗ್ಗೆ 06.00 ಗಂಟೆಯಿಂದ ದಿನಾಂಕ: 01.09.2025 ರ ಬೆಳಿಗ್ಗೆ 06.00 ಗಂಟೆಯವರೆಗೆ ಬೆಂಗಳೂರು ನಗರ ಜಿಲ್ಲೆಯಾದ್ಯಂತ (ಪೊಲೀಸ್ ಕಮಿಷನರೇಟ್ ವ್ಯಾಪ್ತಿ ಹೊರತುಪಡಿಸಿ) ಪಾನ ನಿರೋಧ ಜಾರಿಗೊಳಿಸಿ ಎಲ್ಲಾ ರೀತಿಯ ಮದ್ಯ ಉತ್ಪಾದನೆ, ಮಾರಾಟ, ಹಂಚಿಕೆ, ಸಾಗಾಣಿಕೆ, ಶೇಖರಣೆ ಇತ್ಯಾದಿಗಳನ್ನು ನಿಷೇಧಿಸಿ ಒಣದಿನ’ (Dry Days) ಗಳೆಂದು ಘೋಷಿಸಿ ಆದೇಶಿಸಿದ್ದಾರೆ.
ಬಾನು ಮುಷ್ತಾಕ್ ಅವರಿಂದಲೇ ಮೈಸೂರು ದಸರಾ ಉದ್ಘಾಟನೆ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
‘ಹೊಸ ಆನ್ಲೈನ್ ಗೇಮಿಂಗ್ ಕಾಯ್ದೆಗೆ ನ್ಯಾಯಾಲಯಗಳು ಅಡ್ಡಿಯಾಗಲು ಸಾಧ್ಯವಿಲ್ಲ’: ಕರ್ನಾಟಕ ಹೈಕೋರ್ಟ್ ಗೆ ಕೇಂದ್ರ ಸರ್ಕಾರ