ಭೋಪಾಲ್: ಕೇಂದ್ರ ಸರ್ಕಾರದ ಚೀತಾ ಪ್ರಾಜೆಕ್ಟ್ ಅಡಿಯಲ್ಲಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಕರೆತರಲಾಗಿರುವ ಐದು ವರ್ಷದ ಚೀತಾ, ಐದು ಮರಿಗಳಿಗೆ ಜನ್ಮ ನೀಡಿರುವ ಸುದ್ದಿಯನ್ನು ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಖಚಿತಪಡಿಸಿದ್ದಾರೆ.
ಕರ್ನಾಟಕದಲ್ಲಿ ‘ಗೋಬಿ ಮಂಚೂರಿ, ಕಾಟನ್ ಕ್ಯಾಂಡಿ’ ಬ್ಯಾನ್ : ಇಂದು ರಾಜ್ಯ ಸರ್ಕಾರದಿಂದ ಮಹತ್ವದ ತೀರ್ಮಾನ
ದಕ್ಷಿಣ ಆಫ್ರಿಕಾದ ಸ್ವಾಲು ಕಲಹರಿ ರಿಸರ್ವ್ ಫಾರೆಸ್ಟ್ನಿಂದ ಭಾರತಕ್ಕೆ ಕರೆತರಲಾದ ಗಮಿನಿ ಹೆಸರಿನ 5 ವರ್ಷದ ಹೆಣ್ಣು ಚೀತಾ ಐದು ಮರಿಗಳಿಗೆ ಜನ್ಮ ನೀಡಿದೆ. ಇದರಿಂದ ಭಾರತದಲ್ಲೇ ಜನಿಸಿದ ಚೀತಾ ಮರಿಗಳ ಸಂಖ್ಯೆ 13ಕ್ಕೇರಿದೆ. ಮರಿಗಳಿಗೆ ಜನ್ಮ ನೀಡಿದ ನಾಲ್ಕನೇ ಮತ್ತು ದಕ್ಷಿಣ ಆಫ್ರಿಕಾದಿಂದ ಕರೆತರಲಾದ ಮೊದಲನೇ ಚೀತಾ ಇದಾಗಿದೆ ಎಂದು ಯಾದವ್ ಅವರು ತಮ್ಮ ಎಕ್ಸ್ ಖಾತೆ ಮೂಲಕ ತಿಳಿಸಿದ್ದಾರೆ.
ಸಂವಿಧಾನ ತಿದ್ದುಪಡಿ, ನಾಶಕ್ಕೆ ಬಿಜೆಪಿ, ಆರೆಸ್ಸೆಸ್ ಸಂಚು : ಅನಂತಕುಮಾರ ಹೆಗಡೆ ಹೇಳಿಕೆ ವಿರುದ್ಧ ಕಾಂಗ್ರೆಸ್ ಅಕ್ರೋಶ
ಪ್ರಾಜೆಕ್ಟ್ ಚೀತಾದಡಿಯಲ್ಲಿ 2022 ರಲ್ಲಿ 8 ಚೀತಾಗಳನ್ನು ನಮೀಬಿಯಾದಿಂದಲೂ, 2023ರಲ್ಲಿ 12 ಚೀತಾಗಳನ್ನು ದ.ಆಫ್ರಿಕಾದಿಂದಲೂ ತರಲಾಗಿತ್ತು. ಈ ನಡುವೆ ಜ್ವಾಲಾ ಎಂಬ ಚೀತಾ 4 ಮರಿಗಳಿಗೆ ಜನ್ಮ ನೀಡಿತ್ತು. ಇದರಲ್ಲಿ 3 ಮರಿಗಳು ಸಾವನ್ನಪ್ಪಿದರೆ, 6 ದೊಡ್ಡಚೀತಾಗಳೂ ಸಾವನ್ನಪ್ಪಿದ್ದವು. ನಂತರ ಜ.3, 2024ರಂದು ಆಶಾ ಚಿರತೆ 3 ಮರಿಗಳಿಗೆ ಜನ್ಮ ನೀಡಿತ್ತು.
Oscar 2024: ಅತ್ಯುತ್ತಮ ‘ಕಾಸ್ಟ್ಯೂಮ್’ ಪ್ರಶಸ್ತಿ ನೀಡಲು ನಗ್ನವಾಗಿ ಹೋದ ಜಾನ್ ಸೆನಾ | Watch Video
ಬಳಿಕ ಶೌರ ಚೀತಾ ಸಾವನ್ನ ಪ್ಪಿದ್ದರಿಂದ ಭಾರತದಲ್ಲಿ 10 ಚೀತಾ ಸಾವನ್ನಪ್ಪಿದಂತಾಗಿತ್ತು. ಚೀತಾಗಳ ಸಂಖ್ಯೆ 18ಕ್ಕೆ ಕುಸಿದಿತ್ತು. ಬಳಿಕ ಜ.20ರಂದು ಜ್ವಾಲಾ ಎಂಬ ಚೀತಾ 3 ಮರಿಗಳಿಗೆ ಜನ್ಮ ನೀಡಿದಾಗ 21ಕ್ಕೇರಿತ್ತು. ಈಗ ಗಾಮಿನಿ 5 ಮರಿಗಳಿಗೆ ಜನ್ಮ ನೀಡುವುದ ರೊಂದಿಗೆ ಒಟ್ಟು ಚೀತಾಗಳ ಸಂಖ್ಯೆ 26ಕ್ಕೇರಿಕೆಯಾಗಿದೆ.
High Five, Kuno!
Female cheetah Gamini, age about 5 years, brought from Tswalu Kalahari Reserve, South Africa, has given birth to 5 cubs today.
This takes the tally of the Indian born cubs to 13. This is the fourth cheetah litter on Indian soil and the first litter of… pic.twitter.com/2II0QIc7LY
— Bhupender Yadav (मोदी का परिवार) (@byadavbjp) March 10, 2024