ಗದಗ : ರಥದ ಚಕ್ರದ ಅಡಿ ಸಿಲುಕಿ ಇಬ್ಬರು ಧಾರಣವಾಗಿ ಸಾವನ್ನಪ್ಪಿರುವಾಗ ಘಟನೆ ರೋಣ ಪಟ್ಟಣದ ಶ್ರೀ ವೀರಭದ್ರೇಶ್ವರ ರಥೋತ್ಸವದ ವೇಳೆ ಈ ಒಂದು ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.ವೀರಭದ್ರೇಶ್ವರ ರಥೋತ್ಸವದ ವೇಳೆ ಈ ಒಂದು ಅವಘಡ ಸಂಭವಿಸಿದೆ.
ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ಭಕ್ತರು ರಥವನ್ನು ಎಳೆಯುತ್ತಿರುವಾಗ ಉತ್ತತ್ತಿ ಹಾರಿಸುತ್ತಿದ್ದರು. ಈ ವೇಳೆ ಉತ್ತತ್ತಿ ಅರಿಸುವಾಗ ನೂಕು ನುಗ್ಗಲು ಉಂಟಾಗಿದೆ. ಇದೆ ಸಂದರ್ಭದಲ್ಲಿ ಇಬ್ಬರು ರಥದ ಚಕ್ರದಡಿ ಸಿಲುಕಿ ಸಾವನ್ನಪ್ಪಿದ್ದರೆ. ಮೃತ ಪಟ್ಟವರ ಪೈಕಿ ಮಲ್ಲಪ್ಪ (55) ಎಂದು ಗುರುತಿಸಲಾಗಿದ್ದು ಮತ್ತೊಬ್ಬರ ಗುರುತು ಪತ್ತೆಯಾಗಿಲ್ಲ. ಘಟನೆ ಕುರಿತಂತೆ ರೋಣ ತಾಲೂಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.