ಗದಗ : ಭಜನಾ ಮಂಡಳಿಯಿಂದ ಹೇಳದೆ ಕೇಳದೆ ತೆಗೆದಿದ್ದಕ್ಕೆ ಆಕ್ರೋಶಗೊಂಡ ವ್ಯಕ್ತಿ ಒಬ್ಬ ಸಂಘದ ಪ್ರಮುಖನ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಇರಿದಿರುವ ಘಟನೆ ಗದಗ ನಗರದ ಟಾಂಗಾಕೂಟ ಬಳಿ ಈ ಒಂದು ದುರ್ಘಟನೆ ಸಂಭವಿಸಿದೆ.
ಹೌದು ಚಾಕುವಿನಿಂದ ಇರಿದು ಗೋವಿಂದರಾಜ ಶಿರಹಟ್ಟಿ ಎಂಬುವವರ ಮೇಲೆ ಹಲ್ಲೆ ನಡೆಸಲಾಗಿದೆ. ಭಜನಾ ಮಂಡಳಿಗೆ ಸೇರಿಸಿಕೊಳ್ಳದಿದ್ದಕ್ಕೆ ವಿನಾಯಕ್ ಕಬಾಡಿ ಇಂದ ಹಲ್ಲೆ ನಡೆಸಲಾಗಿದೆ. ಇಸ್ಕಾನ್ ಕೀರ್ತನೆ ಸಂಘದಿಂದ ಗೋವಿಂದರಾಜ ವಿನಾಯಕ್ನನ್ನು ತೆಗೆದಿದ್ದ ಎನ್ನಲಾಗಿದೆ. ಇಸ್ಕಾನ್ ಕೀರ್ತನೆ ಸಂಘವನ್ನು ಗೋವಿಂದರಾಜ ಶಿರಹಟ್ಟಿ ನಡೆಸುತ್ತಿದ್ದ.
ಕಳೆದ ಒಂದು ವರ್ಷದಿಂದ ಕೀರ್ತನ ಸಂಘದಿಂದ ದೂರ ಇಟ್ಟಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ವಿನಾಯಕ್, 2018 ರಿಂದ 2023ರ ವರೆಗೆ ಕೀರ್ತನ ಸಂಘದಿಂದ ದೂರವಿಟ್ಟಿದ್ದರು. ಕಾರಣ ತಿಳಿಸಿದೆ ಸಂಘದಿಂದ ತೆಗೆದಿದ್ದಕ್ಕೆ ವಿನಾಯಕ್ ಸಹಜವಾಗಿ ಆಕ್ರೋಶಗೊಂಡಿದ್ದ ಎನ್ನಲಾಗಿದೆ. ಇದೇ ವಿಚಾರಕ್ಕೆ ಒಂದು ವರ್ಷದಿಂದ ಗೋವಿಂದರಾದ ಜೊತೆಗೆ ವಿನಾಯಕ್ ಗಲಾಟೆ ಮಾಡುತ್ತಿದ್ದ.
ಇಂದು ಅಂಗಡಿಯಲ್ಲಿ ಕೂತಿದ್ದಾಗ ಗೋವಿಂದರಾಜ ಶಿರಹಟ್ಟಿ ಮೇಲೆ ವಿನಾಯಕ್ ಹಲ್ಲೆ ನಡೆಸಿದ್ದಾನೆ.ಗದಗ ನಗರದ ಟಾಂಗಾಕುಟ್ ಬಳಿ ಇರುವ ಜಗನ್ನಾಥ ಕಿರಾಣಿ ಅಂಗಡಿಗೆ ಹೋಗಿ ಅಲ್ಲೇ ನಡೆಸಿದ್ದಾನೆ. ಆರೋಪಿ ವಿನಾಯಕನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.ಗದಗ ಶಹರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.