ಗದಗ : ಪತ್ನಿಯನ್ನು ಚುಡಾಯಿಸಿದ್ದಕ್ಕೆ ಯಾಕೆ ಚುಡಾಯಿಸಿದ್ದೀರಿ ಎಂದು ಪ್ರಶಸ್ತಿ ಹಾಗೂ ಆತನ ಕುಟುಂಬಸ್ಥರ ಬೆಲೆ ಕಿಟಿಗೇಡಿಗಳು ಮನಸೋ ಇಚ್ಛೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಾರೋಗೇರಿಯಲ್ಲಿ ನಡೆದಿದೆ.
ದೇವರಾಜ, ಭಾಗವ್ವ, ಚಂದ್ರವ್ವ, ಹಾಗೂ ದಾನಪ್ಪ ಹಲ್ಲೆಗೊಳಗಾದವರು ಎನ್ನಲಾಗಿದ್ದು, ಬಸವರಾಜ, ರವಿ, ಕೋಟೆಪ್ಪ ಹಾಗೂ ಮುತ್ತಪ್ಪ ಎನ್ನುವವರು ಹಲ್ಲೆ ನಡೆಸಿದ್ದಾರೆ. ಬೋವಿ ಸಮುದಾಯದ ದಲಿತ ಕುಟುಂಬದವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದ್ದು ಕುರುಬ ಸಮುದಾಯಕ್ಕೆ ಸೇರಿದ 6 ಜನರ ವಿರುದ್ಧ ಹಲ್ಲೆ ಆರೋಪ ಕೇಳಿ ಬಂದಿದೆ. ಇನ್ನು ಘಟನೆಯಲ್ಲಿ ಗಾಯಗೊಂಡ ಗಾಯಾಳುಗಳನ್ನ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಕಿಡಿಗೇಡಿಗಳು ತನ್ನ ಪತ್ನಿ ಶೋಭಾಳನ್ನು ಚುಡಾಯಿಸುತ್ತಿದ್ದಾರೆ ಎಂದು ಪ್ರಶ್ನೆ ಮಾಡಲು ಹೋದ ದೇವರಾಜ್ ಅವರನ್ನು ಹಾಗೂ ಕುಟುಂಬದವರಾದ ಚಂದ್ರಪ್ಪ, ದಾನಪ್ಪ, ಚಂದ್ರಮ್ಮ, ಭಾಗ್ಯಮ್ಮರ ಮೇಲೆ ಹಲ್ಲೆ ನಡೆಸಿದ್ದಾರೆ. ಬಸವರಾಜ, ರವಿ, ಕೋಟೆಪ್ಪ, ಮುತ್ತಪ್ಪ ಸೇರಿದಂತೆ 6 ಜನರ ವಿರದ್ಧ ಹಲ್ಲೆ ಆರೋಪ ಕೇಳಿ ಬಂದಿದೆ.
ಕುಟುಂಬದ ಆರು ಜನರು. ಏಕಾಏಕಿ ನಡೆದ ದಾಳಿಗೆ ತೀವ್ರ ಗಾಯಗೊಂಡು ರಸ್ತೆ ಮೇಲೆ ಬಿದ್ದು ಹೊರಳಾಡಿದ ದಲಿತ ಕುಟುಂಬ. ತೀವ್ರ ಗಾಯಗೊಂಡ ದಲಿತ ಕುಟುಂಬ. ಸದ್ಯ ಗಾಯಾಳುಗಳನ್ನ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ಸಂಬಂಧ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.