ಇಂಡೋನೇಷ್ಯಾ: ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯುವ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬಾಲಿ ತಲುಪಿದ್ದಾರೆ.
ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಸ್ವಾಗತಿಸಲಾಯಿತು. ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿದ ಮಹಿಳೆಯರು ವಿಶೇಷ ವಿಮಾನದ ಮೂಲಕ ಬಾಲಿಗೆ ಬಂದ ಮೋದಿಯನ್ನು ಸ್ವಾಗತಿಸಲು ಎರಡೂ ಬದಿಗಳಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದರು. ಈ ವೇಳೆ, ಮೋದಿ ಅವರು ಎಲ್ಲರಿಗೂ ಕೈಮುಗಿದು ಶುಭಾಶಯ ಸ್ವೀಕರಿಸಿದರು. ಪ್ರಧಾನಿ ಮೋದಿಯವರನ್ನು ಅಲ್ಲಿನ ಭಾರತೀಯ ಮೂಲದ ಜನರು ಕೂಡ ಅದ್ಧೂರಿಯಾಗಿ ಸ್ವಾಗತಿಸಿದರು.
#WATCH | Prime Minister Narendra Modi receives a warm welcome from Indians in Bali, Indonesia. pic.twitter.com/wKSlqoO8rT
— ANI (@ANI) November 14, 2022
Prime Minister Narendra Modi receives a traditional welcome as he arrived in Bali, Indonesia for the G20 Summit. pic.twitter.com/Msfvmn5Skt
— ANI (@ANI) November 14, 2022
#WATCH | Prime Minister Narendra Modi met people as he received a warm welcome in Bali, Indonesia. PM will attend the 17th #G20Summit in Bali.
(Source: DD) pic.twitter.com/Vaq1SI4Qcn
— ANI (@ANI) November 14, 2022
ಜಿ-20 ಶೃಂಗಸಭೆಗೆ ಹಲವು ದೇಶಗಳ ರಾಷ್ಟ್ರಗಳ ಮುಖ್ಯಸ್ಥರು ಮತ್ತು ಪ್ರಧಾನ ಮಂತ್ರಿಗಳು ಆಗಮಿಸುತ್ತಿರುವುದು ಗಮನಾರ್ಹವಾಗಿದೆ. ಜಿ-20 ಶೃಂಗಸಭೆಯಲ್ಲಿ ಭಾಗವಹಿಸಲು ಅಮೆರಿಕ ಅಧ್ಯಕ್ಷ ಜೋ ಬೈಡನ್, ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಕೂಡ ಆಗಮಿಸಿದ್ದಾರೆ.
BIG NEWS: ಗುಜರಾತ್ ಸರ್ಕಾರಿ ಕಚೇರಿಗಳಲ್ಲಿ ಪ್ರಧಾನಿ ʻಮೋದಿʼ ಫೋಟೋ ತೆಗೆದುಹಾಕಿ: ಚುನಾವಣಾ ಆಯೋಗಕ್ಕೆ ಎಎಪಿ ಮನವಿ
BIG NEWS: ನಮಗೆ ‘ಮೇಡ್ ಇನ್ ಇಂಡಿಯಾ’ ಬೇಕು, ಮೇಡ್ ಇನ್ ಚೀನಾ ಅಲ್ಲ: ರಾಹುಲ್ ಗಾಂಧಿ