ಕೋಲಾರ: ಜಿ.ಟಿ.ದೇವೇಗೌಡ ನಮ್ಮ ಪಕ್ಷದ ಹಿರಿಯ ಮುಖಂಡರು. ಹೀಗಾಗಿ ಅವರು ಬೇರೆ ಯಾವುದೆ ಪಕ್ಷಕ್ಕೆ ಹೋಗುವ ಮಾತೇ ಇಲ್ಲ. ನಾನು ಈಗಾಗಲೆ ಹಲವು ಬಾರಿ, ಭೇಟಿ ಮಾಡಿ ಮಾತನಾಡಿದ್ದೇನೆ ಎಂದು ಜೆಡಿಎಸ್ ಹಿರಿಯ ಶಾಸಕ ಸಾ.ರಾ.ಮಹೇಶ್ ಹೇಳಿದ್ದಾರೆ.
BIGG NEWS: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಮತ್ತೆ ಕೂಗಿದ ಸಚಿವ ಉಮೇಶ್ ಕತ್ತಿ…!
ನಗರದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಅವರ ನೇತೃತ್ವದಲ್ಲಿ ಜೆಡಿಎಸ್ ಸಭೆ ಮಾಡಿದ್ದೇವೆ. ಮೊನ್ನೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಮತದಾನ ಮಾಡಿದ್ದಾರೆ. ಪಕ್ಷ ಬಿಡುವ ವಿಚಾರ ಯಾವತ್ತು ಹೇಳಿಲ್ಲ. ಎಲ್ಲರೂ ಸೇರಿ ಪಕ್ಷ ಸಂಘಟನೆ ಮಾಡುವ ಕುರಿತು ಮಾತನಾಡಿದ್ದೇವೆ.ಅಣ್ಣ ತಮ್ಮಂದಿರಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತೆ.ಆದ್ರೆ ಪಕ್ಷ ಬಿಡುವ ವಿಚಾರ ಎಲ್ಲೂ ಮಾತನಾಡಿಲ್ಲ ಎಂದರು.ಇಡೀ ಜಿಲ್ಲೆಯ ನಾಯಕರು ದೇವೇಗೌಡ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲಿದ್ದೇವೆ. ಕುಮಾರಸ್ವಾಮಿ ಅವರನ್ನ ಮತ್ತೆ ಮುಖ್ಯಮಂತ್ರಿ ಮಾಡುವುದು ನಮ್ಮ ಗುರಿ ಆಗಿದೆ. ವಿಧಾನಸಭೆ ಚುನಾವಣೆ ಇನ್ನೂ 11 ತಿಂಗಳ ಬಳಿಕ ಬರಲಿದೆ. ಅದಕ್ಕಾಗಿಯೆ ನಿನ್ನೆ ಹೊಸದಾಗಿ ಬೋರ್ಡ್ ಜೇರ್ಮನ್ ಮಾಡಿದ್ದಾರೆ.
BIGG NEWS: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಮತ್ತೆ ಕೂಗಿದ ಸಚಿವ ಉಮೇಶ್ ಕತ್ತಿ…!
ಸಿದ್ದರಾಮೋತ್ಸವ, ಸಾಧನಾ ಸಮಾವೇಶ ಮಾಡುತ್ತಿದ್ದಾರೆ.ಆದ್ರೆ ಜೆಡಿಎಸ್ ಜನರ ಪರವಾದ ಯೋಜನೆ ಗಳ ಮೂಲಕ ಜನರ ಬಳಿ ತೆರಳಲಿದೆ.ಮುಖ್ಯಮಂತ್ರಿಗಳನ್ನ ಅಭಿವೃದ್ಧಿ, ವಿಶ್ವಾಸದ ಆಧಾರದ ಮೇಲೆ ಮಾಡುತ್ತಾರೆ.ಅವರು ನಮ್ಮ ಸ್ನೇಹಿತ್ರೆ, ಆದ್ರೆ ಜಮೀರ್ ಅಹ್ಮದ್ ಯಾಕೆ ಹಾಗೆ ಹೇಳಿದ್ರು ಗೊತ್ತಿಲ್ಲ. ವ್ಯಕ್ತಿ ಪೂಜೆ ಅಷ್ಟು ಒಳ್ಳಯದಲ್ಲ, ಬಹಳಷ್ಟು ಜನ ಕಾಂಗ್ರೆಸ್ ಗೆ ಸಹಕಾರ ಕೊಟ್ಟು ಪಕ್ಷ ಸಂಘಟನೆ ಮಾಡುತ್ತಿದ್ದಾರೆ.ಆದ್ರೆ ಜನ ಸಂಕಷ್ಟದಲ್ಲಿರುವಾಗ, ಸಮಸ್ಯೆಗಳಿರುವಾಗ ಈ ಉತ್ಸವ ಬೇಕಿತ್ತಾ. ನಿಜವಾದ ಒಕ್ಕಲಿಗ ನಾಯಕ ಯಾರು ಎಂಬ ಪ್ರಶ್ನೆಗೆ,ಕುಮಾರಸ್ವಾಮಿ ಈ ರಾಜ್ಯದ ಎಲ್ಲಾ ಸಮುದಾಯದ ಜನ ಸಾಮಾನ್ಯರು ಇಷ್ಟ ಪಡುತ್ತಾರೆ. ಸಿದ್ದರಾಮಯ್ಯ ಅವರು ನಮ್ಮ ಜಿಲ್ಲೆಯಲ್ಲಿ ಗೆದ್ದು ಮುಖ್ಯಮಂತ್ರಿ ಯಾದವರು.ನನಗೆ ಖುಷಿ ಇದೆ, ಆದ್ರೆ ಬೇಸರ ಕೂಡ ಇದೆ.ಆದ್ರೆ ಕ್ಷೇತ್ರ ಯಾವುದು ಅಂತಾ ಇದುವರೆಗೂ ಹೇಳುತ್ತಿಲ್ಲ ಎಂದು ಹೇಳಿದ್ದಾರೆ.