ಅಫ್ಘಾನಿಸ್ತಾನ: ಅಫ್ಘಾನಿಸ್ತಾನದ ಪರ್ವಾನ್ ಪ್ರಾಂತ್ಯದ ಸುರಂಗದಲ್ಲಿ ತೈಲ ಟ್ಯಾಂಕರ್ಗೆ ಬೆಂಕಿ ಹೊತ್ತಿಕೊಂಡಿದ್ದು, 19 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಐಎಎನ್ಎಸ್ ವರದಿ ಮಾಡಿದೆ.
ಸ್ಥಳೀಯ ಕಾಲಮಾನ ಶನಿವಾರ ರಾತ್ರಿ 09:00 ಗಂಟೆಗೆ ಸಲಾಂಗ್ ಸುರಂಗದೊಳಗೆ ಈ ಭೀಕರ ಘಟನೆ ನಡೆದಿದ್ದು, 19ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಇನ್ನು ರಕ್ಷಣಾ ತಂಡವು ಗಾಯಗೊಂಡ ಹಲವು ಮಂದಿಯನ್ನು ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಿದೆ ಎಂದು ಪ್ರಾಂತೀಯ ಆಡಳಿತದ ವಕ್ತಾರ ಹೆಕ್ಮತುಲ್ಲಾ ಶಮೀಮ್ ಕ್ಸಿನ್ಹುವಾಗೆ ಮಾಹಿತಿ ನೀಡಿದ್ದಾರೆ ಎಂದು ಐಎಎನ್ಎಸ್ ವರದಿ ಮಾಡಿದೆ.
ಸದ್ಯ ಬೆಂಕಿಯನ್ನು ನಂದಿಸಲಾಗಿದ್ದು, ಸುತ್ತಮುತ್ತಲಿನನ ಪ್ರದೇಶದಲ್ಲಿ ರಕ್ಷಣಾ ಕಾರ್ಯ ಮುಂದುವರೆದಿದೆ. ಹೆಲಿಕಾಪ್ಟರ್ಗಳಲ್ಲಿ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದರಿಂದ ಮಾರ್ಗವನ್ನು ಸಂಚಾರಕ್ಕೆ ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಲಾಂಗ್ ಪಾಸ್, ಸರಿಸುಮಾರು 3,650 ಮೀಟರ್ (12,000 ಅಡಿ) ವಿಶ್ವದ ಅತಿ ಎತ್ತರದ ಪರ್ವತ ರಸ್ತೆಗಳಲ್ಲಿ ಒಂದಾಗಿದೆ. ಇದನ್ನು 1950 ರ ದಶಕದಲ್ಲಿ ಸೋವಿಯತ್ ಯುಗದ ವೃತ್ತಿಪರರಿಂದ ನಿರ್ಮಿಸಲಾಗಿದ್ದು, 2.6 ಕಿಲೋಮೀಟರ್ ಸುರಂಗ ಮಾರ್ಗವನ್ನು ಒಳಗೊಂಡಿದೆ.
ಈ ಪಾಸ್ ಹಿಂದೂ ಕುಶ್ ಪರ್ವತ ಶ್ರೇಣಿಯ ಮೂಲಕ ಹಾದುಹೋಗುತ್ತದೆ. ಕಾಬೂಲ್ ಅನ್ನು ಉತ್ತರಕ್ಕೆ ಸಂಪರ್ಕಿಸುತ್ತದೆ.
2010 ರಲ್ಲಿ ಸಲಾಂಗ್ ಪಾಸ್ನಲ್ಲಿ ಹಿಮಪಾತ ಸಂಭವಿಸಿತ್ತು. ಘಟನೆಯಲ್ಲಿ 150 ಕ್ಕೂ ಹೆಚ್ಚು ಜನರನ್ನು ಸಾವನ್ನಪ್ಪಿದ್ದರು.
ಹರಿಯಾಣ ಹೆದ್ದಾರಿಯಲ್ಲಿ ದಟ್ಟ ಮಂಜಿನಿಂದ ಒಂದಕ್ಕೊಂದು ಡಿಕ್ಕಿ ಹೊಡೆದ ವಾಹನಗಳು ; ನಾಲ್ವರಿಗೆ ತೀವ್ರ ಗಾಯ