ನವದೆಹಲಿ: ಇಂದಿನಿಂದ ಗೂಗಲ್ ಪೇ, ಪೋನ್ ಪೇ ಮೂಲಕ ನೀವು ಮತ್ತಷ್ಟು ವೇಗವಾಗಿ ಹಣವನ್ನು ಕಳುಹಿಸಬಹುದಾಗಿದೆ. ಹಾಗಾದ್ರೇ ಏನೆಲ್ಲಾ ಬದಲಾವಣೆ ಎನ್ನುವ ಬಗ್ಗೆ ಮುಂದೆ ಓದಿ.
ಭಾರತೀಯ ರಾಷ್ಟ್ರೀಯ ಪಾವತಿ ನಿಗಮ( NPCI) ಸಿಸ್ಟಮ್ ಅಪ್ ಗ್ರೇಡ್ ಮಾಡಲು ಆರಂಭಿಸಿದೆ. ಹೀಗಾಗಿ ಯುಪಿಐ ವಹಿವಾಟುಗಳನ್ನು ಪೂರ್ಣಗೊಳಿಸಲು ತೆಗೆದುಕೊಳ್ಳುವ ಸಮಯ ಇಂದಿನಿಂದ ಕಡಿಮೆಗೊಳಿಸಲಾಗಿದೆ.
ಈ ಹಿಂದೆ ಏಪ್ರಿಲ್ 26, 2025ರಂದೇ ಸುತ್ತೋಲೆಯಲ್ಲಿ ಎಲ್ಲ ಸದಸ್ಯ ಬ್ಯಾಂಕ್, ಪೋನ್ ಪೇ, ಗೂಗಲ್ ಪೇ ಹಾಗೂ ಪೇಟಿಯಂ ಪ್ಲಾಟ್ ಫಾರ್ಮ್ ಗಳಿಗೆ ತಮ್ಮ ಸಿಸ್ಟಮ್ ಅಪ್ ಗ್ರೇಡ್ ಗೆ ಸೂಚಿಸಲಾಗಿತ್ತು. ಅದರಂತೆ ಮಾಡಲಾಗಿದ್ದು, ಹಣ ವರ್ಗಾವಣೆ, ಪರಿಶೀಲನೆ ಮತ್ತು ರಿವರ್ಸಲ್ ಗಳು ಸೇರಿದಂತೆ ವಿವಿಧ ವಹಿವಾಟಿಗೆ 30 ಸೆಕೆಂಡ್ ತೆಗೆದುಕೊಳ್ಳುತ್ತಿದ್ದಂತ ಸಮಯವು ಈಗ 10 ರಿಂದ 15 ಸೆಕೆಂಡುಗಳಲ್ಲಿ ಮುಗಿಯಲಿದೆ.
ಇನ್ನೂ ಮೊಬೈಲ್ ಸಂಖ್ಯೆ ಅಥವಾ ಯುಪಿಐ ಐಡಿಗಳನ್ನು 10 ಸೆಕೆಂಡ್ ಗಳಲ್ಲಿ ಪರಿಶೀಲಿಸಬಹುದು. ಅದೇಗೆಂದರೇ ನೀವು ಅಂಗಡಿಗೆ ಹೋಗಿ ವಸ್ತು ಖರೀದಿಸಿ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿಸೋದಕ್ಕೆ ತೆಗೆದುಕೊಳ್ಳುತ್ತಿದ್ದಂತ 30 ಸೆಕೆಂಡ್ ಕಾಲ, 10 ಸೆಕೆಂಡ್ ಗೆ ಇಳಿದಿದೆ.
BIG NEWS : ‘KUWS’ ಅಧ್ಯಕ್ಷ ಸ್ಥಾನದಿಂದ ಶಾಸಕ ವಿನಯ್ ಕುಲಕರ್ಣಿಯನ್ನು ತೆಗೆದುಹಾಕುವಂತೆ ಸಿಎಂಗೆ ಆಗ್ರಹ
BIG NEWS: ಸಾಗರದಲ್ಲಿ ‘ಸದಾನಂದ ಹತ್ಯೆ’ ಪ್ರಕರಣದಲ್ಲಿ ಮೂವರ ವಿರುದ್ಧ ಕೇಸ್ ದಾಖಲು: ‘FIR’ನಲ್ಲಿ ಏನಿದೆ?