ಬೆಂಗಳೂರು: ದಿನೇ ದಿನೇ ಬೆಂಗಳೂರು ವಿಸ್ತಾರಗೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಒಂದೇ ಸಂಸ್ಥೆಯಿಂದ ನಿರ್ವಹಣೆ ಕಷ್ಟ ಎಂಬುದಾಗಿ ಸರ್ಕಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಮಾಡಿತ್ತು. ಈ ಬೆನ್ನಲ್ಲೇ ಐದು ಪಾಲಿಕೆಗಳಾಗಿ ವಿಂಗಡಣೆ ಮಾಡಿ, ಆಡಳಿತ ನಡೆಸೋದಕ್ಕೆ ಆದೇಶಿಸಿದೆ. ಸೆಪ್ಟೆಂಬರ್.2ರಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆಡಳಿತ ಜಾರಿಗೊಳ್ಳಲಿದೆ.
ರಾಜ್ಯ ಸರ್ಕಾರದಿಂದ ಬಿಬಿಎಂಪಿಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರವಾಗಿ ರಚನೆ ಮಾಡಲಾಗಿತ್ತು. ಈ ಪ್ರಾಧಿಕಾರದ ಆಡಳಿತ ಸೆಪ್ಟೆಂಬರ್.2ರಿಂದ ಜಾರಿಯಾಗಲಿದೆ. ಹೀಗಾಗಿ ಇನ್ಮುಂದೆ ಬಿಬಿಎಂಪಿ ಬದಲಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆಡಳಿತ ನಡೆಸಲಿದೆ.
ರಾಜ್ಯ ಸರ್ಕಾರದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಐದು ಪಾಲಿಕೆಯನ್ನಾಗಿ ಬೆಂಗಳೂರನ್ನು ವಿಂಗಡಿಸಲಾಗಿದೆ. ಐದು ಪಾಲಿಕೆಗಳ ಕಚೇರಿ ಎಲ್ಲೆಲ್ಲಿ ಬರಲಿವೆ ಎನ್ನುವ ಮಾಹಿತಿ ಬಿಡುಗಡೆ ಮಾಡಲಾಗಿದೆ. ಜೊತೆಗೆ ಆ ಐದು ಪಾಲಿಕೆಗೆ ಆಡಳಿತವನ್ನು ವಿಕೇಂದ್ರೀಕರಿಸಿ, ಅಧಿಕಾರಿ, ಸಿಬ್ಬಂದಿ ಹಂಚಿಕೆ ಮಾಡಿ ಆದೇಶಿಸಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿ 5 ಪಾಲಿಕೆಗಳಿಗೆ 10 ತಾತ್ಕಾಲಿಕ ಕಚೇರಿಗಳ ಗುರುತು
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಾರ್ಪೋರೇಷನ್ ಸರ್ಕಲ್ ಕೇಂದ್ರ ಕಚೇರಿ ಮುಖ್ಯ ಕಟ್ಟಡ ಅನೆಕ್ಸ್ 1 – ಅನೆಕ್ಸ್ 2
ಹಾಲಿ ಪೂರ್ವ ವಲಯ ಕಚೇರಿ
ಕೇಂದ್ರ ಕಚೇರಿ ಅನೆಕ್ಸ್ ಕಟ್ಟಡ
ಮಹಾದೇವಪುರ ವಲಯ ಕಚೇರಿ
ಕೆ.ಆರ್ ಪುರಂ ಕಚೇರಿ
3.ಪಶ್ಚಿಮ ವಲಯ
ಆರ್.ಆರ್ ನಗರ ವಲಯ ಕಚೇರಿ
ಹಾಲಿ ಪಾಲಿಕೆ ಸೌಧ ಚಂದ್ರ ಲೇಔಟ್
4.ಬೆಂಗಳೂರು ಉತ್ತರ ನಗರ ಪಾಲಿಕೆ
ಹಾಲಿ ಯಲಹಂಕ ವಲಯ ಕಚೇರಿ
ಹಾಲಿ ದಾಸರಹಳ್ಳಿ ವಲಯ ಕಚೇರಿ
5.ಬೆಂಗಳೂರು ದಕ್ಷಿಣ ನಗರ ಪಾಲಿಕೆ
ಹಾಲಿ ದಕ್ಷಿಣ ವಲಯ ಕಚೇರಿ
ಹಾಲಿ ಬೊಮ್ಮನಹಳ್ಳಿ ವಲಯ ಕಚೇರಿ
ರಾಜ್ಯ ಸರ್ಕಾರದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ 15 ಐಎಎಸ್, 20 ಕ್ಕೂ ಹೆಚ್ಚು ಕೆಎಎಸ್ ಹಾಗೂ ಇಬ್ಬರು ಐಪಿಎಸ್ ಅಧಿಕಾರಗಳ ಹುದ್ದೆಯನ್ನ ರಚನೆ ಮಾಡಿ ಆದೇಶಿಸಿದೆ. ಈ ಐದು ಪಾಲಿಕೆಗಳಿಗೂ 28 ವಿಧಾನಸಭಾ ಕ್ಷೇತ್ರಗಳನ್ನ ಹಂಚಿಕೆ ಮಾಡಿದೆ.
ಯಾವ್ಯಾವ ಪಾಲಿಕೆಗೆ ಎಷ್ಟೆಷ್ಟು ವಿಧಾನಸಭಾ ಕ್ಷೇತ್ರ ಹಂಚಿಕೆ?
- ಬೆಂಗಳೂರು ಪಶ್ಚಿಮ ನಗರ ಪಾಲಿಕೆ – 10 ವಿಧಾನಸಭಾ ಕ್ಷೇತ್ರ
- ಬೆಂಗಳೂರು ಕೇಂದ್ರ ನಗರ ಪಾಲಿಕೆ – 7 ವಿಧಾನಸಭಾ ಕ್ಷೇತ್ರ
- ಬೆಂಗಳೂರು ಪೂರ್ವ ನಗರ ಪಾಲಿಕೆ – 2 ವಿಧಾನಸಭಾ ಕ್ಷೇತ್ರ
- ಬೆಂಗಳೂರು ಉತ್ತರ ನಗರ ಪಾಲಿಕೆ – 7 ವಿಧಾನಸಭಾ ಕ್ಷೇತ್ರ
- ಬೆಂಗಳೂರು ದಕ್ಷಿಣ ನಗರ ಪಾಲಿಕೆ – 8 ವಿಧಾನಸಭಾ ಕ್ಷೇತ್ರ
ಜಾತ್ಯಾತೀತ, ಧರ್ಮಾತೀತವಾಗಿ ಕರ್ನಾಟಕ ಕಟ್ಟಿದ ಹಿರಿಮೆ ಅರಸು ಸಮುದಾಯದ್ದು: ಡಿಸಿಎಂ ಡಿಕೆಶಿ ಶ್ಲಾಘನೆ
BREAKING: ಸೆ.28ರಿಂದ ಕನ್ನಡದ ಬಿಗ್ ಬಾಸ್ ಸೀಸನ್ 12 ಆರಂಭ: ನಟ ಸುದೀಪ್ ಘೋಷಣೆ | Bigg Boss Kannada Season 12