ನವದೆಹಲಿ : ಆಪರೇಷನ್ ಸಿಂದೂರ್ ಮೂಲಕ ಭಾರತ ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದೆ. ಈ ವಿಚಾರವಾಗಿ ಇಂದು ವಿದೇಶಾಂಗ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, ಇನ್ಮುಂದೆ ಪಾಕಿಸ್ತಾನದ ಗುಂಡುಗಳಿಗೆ ನಾವು ಸಹ ಗುಂಡುಗಳಿಂದಲೇ ಉತ್ತರಿಸುತ್ತೇವೆ ಎಂದು ರಣಧೀರ ಜೈಸ್ವಾಲ್ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದರು.
ಆಪರೇಷನ್ ಸಿಂಧೂರದಿಂದ ಪಾಕಿಸ್ತಾನಕ್ಕೆ ಸಾಕಷ್ಟು ಹಾನಿಯಾಗಿದೆ. ಪಾಕಿಸ್ತಾನದ ಗುಂಡುಗಳಿಗೆ ನಾವು ಗುಂಡುಗಳಿಂದಲೇ ಉತ್ತರಿಸುತ್ತೇವೆ ಪಾಕಿಸ್ತಾನ ದಾಳಿ ನಿಲ್ಲಿಸಿದರೆ ಭಾರತ ಕೂಡ ದಾಳಿ ನಿಲ್ಲಿಸಲಿದೆ. ಪಾಕಿಸ್ತಾನ ಇದನ್ನು ಬೇಗ ಅರ್ಥ ಮಾಡಿಕೊಂಡಷ್ಟು ಅದಕ್ಕೆ ಒಳ್ಳೆಯದು. ಸೋಲಿನ ಬಳಿಕ ಗೆಲುವಿನ ಡ್ರಮ್ ಬಾರಿಸುವುದು ಹಳೆ ಮನೋಭಾವ ಎಂದರು.
ಸೋಲಿನ ಬಳಿಕವೂ ಪಾಕಿಸ್ತಾನ ಸಂಭ್ರಮಾಚರಣೆ ಮಾಡುತ್ತಿದೆ. ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ. ಭಯೋತ್ಪಾದನೆಯನ್ನು ಭಾರತ ಸಹಿಸಿಕೊಳ್ಳುವುದಿಲ್ಲ. ಪಾಕಿಸ್ತಾನದ ಉಗ್ರರು ಬಹಳ ಬಿಟ್ಟರೆ ಭಾರತ ತಕ್ಕ ಪಾಠ ಕಲಿಸಲಿದೆ ಎಂದು ದೆಹಲಿಯಲ್ಲಿ ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ ಜೈಸ್ವಾಲ್ ಹೇಳಿಕೆ ನೀಡಿದರು.
ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯವಾಗಿ ಪರಿಹರಿಸಬೇಕು ಎಂಬುದು ನಮ್ಮ ದೀರ್ಘಕಾಲದ ರಾಷ್ಟ್ರೀಯ ನಿಲುವು. ಆ ನೀತಿ ಬದಲಾಗಿಲ್ಲ. ಬಾಕಿ ಉಳಿದಿರುವ ವಿಷಯವೆಂದರೆ ಪಾಕಿಸ್ತಾನ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಭಾರತೀಯ ಪ್ರದೇಶವನ್ನು ತೆರವುಗೊಳಿಸುವುದು ಎಂದು ಜೈಸ್ವಾಲ್ ಹೇಳಿದರು.
ಪಂಜಾಬ್‌ನ ಅದಮ್‌ಪುರ ವಾಯುನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉಗ್ರ ಭಾಷಣ ಮಾಡಿದ ಕೆಲವೇ ಗಂಟೆಗಳ ನಂತರ ವಿದೇಶಾಂಗ ಸಚಿವಾಲಯದ ಹೇಳಿಕೆ ಬಂದಿತು. ಭಾರತದ ಸಾರ್ವಭೌಮತ್ವಕ್ಕೆ ಬೆದರಿಕೆ ಹಾಕಲು ಧೈರ್ಯ ಮಾಡುವ ಯಾವುದೇ ಘಟಕಕ್ಕೆ ವಿನಾಶಕಾರಿ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದರು. ಆಪರೇಷನ್ ಸಿಂಧೂರ್ ಅನ್ನು ಉಲ್ಲೇಖಿಸಿ, ಪ್ರಧಾನಿ ಮೋದಿ ಅವರು 100 ಕ್ಕೂ ಹೆಚ್ಚು ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿದ್ದಕ್ಕಾಗಿ ಮತ್ತು ಒಂಬತ್ತು ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿದ್ದಕ್ಕಾಗಿ ಭಾರತೀಯ ಸಶಸ್ತ್ರ ಪಡೆಗಳನ್ನು ಶ್ಲಾಘಿಸಿದರು, ಇದು ಭಯೋತ್ಪಾದನೆಯ ಬಗ್ಗೆ ಭಾರತದ ಶೂನ್ಯ-ಸಹಿಷ್ಣುತೆಯ ವಿಧಾನವನ್ನು ಒತ್ತಿಹೇಳಿತು.