ಬೆಂಗಳೂರು : ಹೋಟೆಲ್ ಗಳಿಗೆ ಹೆಚ್ಚುವರಿ ಅಡುಗೆ ಅನಿಲ ನೀಡುವ ಬಗ್ಗೆ ಮಂಗಳವಾರ ಸಭೆ ನಡೆಯಲಿದೆ ಎಂದು ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ಖಾತೆ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದ್ದಾರೆ.
ಅಡುಗೆ ಅನೀಲ ಅಭಾವದಿಂದ ಹೋಟೆಲ್ಗಳು ಬಂದ್ ಆಗ್ತಿರುವ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, 20% ಅಡುಗೆ ಅನಿಲ ಹೋಟೆಲ್ ಗೆ ಕೊಡ್ತಾ ಇದ್ದೀವಿ. ಹಾಸ್ಪಿಟಲ್ಗಳಿಗೆ 100% ಕೊಡ್ತಿದ್ದೇವೆ. ನಿನ್ನೆ ನರೇಂದ್ರ ಮೋದಿ ಹಾಗೂ ಪೆಟ್ರೋಲಿಯಂ ಸಚಿವರೊಂದಿಗೆ ಸಭೆ ಆಗಿದೆ. ಮಂಗಳವಾದಿಂದ ಇಂಪ್ಲಿಮೆಂಟ್ ಆದ್ರೆ ಹೋಟೆಲ್ಗಳಿಗೆ ಇನ್ನೂ ಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಸಾಧ್ಯವಾದಷ್ಟು ಹೋಟೆಲ್ ಗಳಿಗೆ ಹೆಚ್ಚುವರಿ ಸಿಲಿಂಡರ್ ಕೊಡೋಕೆ ಹೇಳಿದ್ದೇವೆ. ಮಂಗಳವಾರ ಮತ್ತೊಂದು ಸುತ್ತಿನ ಸಭೆಯಿದೆ. ಆ ದಿನ ಇನ್ನೂ ಹೆಚ್ಚುವರಿ ಸಿಲಿಂಡರ್ ಕೊಡುವ ಬಗ್ಗೆ ನಿರ್ಧಾರ ಮಾಡ್ತೀವಿ. ವಿನಾಃಕಾರಣ ಜನ ಆತಂಕಕ್ಕೆ ಒಳಗಾಗೋದು ಬೇಡ ಡೊಮೆಸ್ಟಿಕ್ ಅವರಿಗೆ ನಗರದಲ್ಲಿ 25 ದಿನಕ್ಕೆ 1 ಸಿಲಿಂಡರ್ (LPG Cylinder) ಕೊಡ್ತಿದ್ದೀವಿ. ಹಳ್ಳಿಗಳಲ್ಲಿ 45 ದಿನಕ್ಕೆ 1 ಸಿಲಿಂಡರ್ ಕೊಡ್ತಿದ್ದೇವೆ. ವಾಣಿಜ್ಯ ಸಿಲಿಂಡರ್ ಸಮಸ್ಯೆ ಸರಿಪಡಿಸೋಕೆ ಹೇಳಿದ್ದೇವೆ ಎಂದರು.








