Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಎಕ್ಸಲೆನ್ಸ್ ಇನ್ ಸಸ್ಟೈನಬಲ್ ಅರ್ಬನ್ ಡ್ರಿಂಕಿಂಗ್ ವಾಟರ್: ತೀರ್ಥಹಳ್ಳಿಯ ‘ನಿರಂತರ ಕುಡಿಯುವ ನೀರು’ ಯೋಜನೆಗೆ ರಾಷ್ಟ್ರಮಟ್ಟದಲ್ಲಿ ಮೊದಲನೇ ಸ್ಥಾನ

25/03/2026 2:52 PM

BREAKING : ‘LPG ಬುಕಿಂಗ್ ಸಮಯ ಬದಲಾಗಿಲ್ಲ’ : ಕೇಂದ್ರ ಸರ್ಕಾರ ಸ್ಪಷ್ಟನೆ!

25/03/2026 2:48 PM

1 ವರ್ಷದ ಒಳಗೆ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಶೇ 80ರಷ್ಟು ಸಿಬ್ಬಂದಿಯನ್ನು ನೇಮಿಸಿ: ಶಾಸಕ ದರ್ಶನ್‌ ಪುಟ್ಟಣ್ಣಯ್ಯ

25/03/2026 2:48 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲಿ ಸರ್ಕಾರಿ ಸಭೆಗಳಿಗೆ `ಜನಪ್ರತಿನಿಧಿ’ ಗಳ ಆಹ್ವಾನದ ವೇಳೆ ಈ ನಿಯಮ ಪಾಲನೆ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ
KARNATAKA

ರಾಜ್ಯದಲ್ಲಿ ಸರ್ಕಾರಿ ಸಭೆಗಳಿಗೆ `ಜನಪ್ರತಿನಿಧಿ’ ಗಳ ಆಹ್ವಾನದ ವೇಳೆ ಈ ನಿಯಮ ಪಾಲನೆ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

By kannadanewsnow0909/02/2026 5:41 AM

ಬೆಂಗಳೂರು: ರಾಜ್ಯದಲ್ಲಿ ಸರ್ಕಾರದ ಸಭೆ ಮತ್ತು ಸಮಾರಂಭಗಳಿಗೆ ಜನಪ್ರತಿನಿಧಿಗಳನ್ನು ಆಹ್ವಾನಿಸುವ ಬಗ್ಗೆ ಅನುಸರಿಸಬೇಕಾದಂತ ಶಿಷ್ಟಾಚಾರದ ಮಾರ್ಗಸೂಚಿಗಳನ್ನು ಸರ್ಕಾರ ಹೊರಡಿಸಿದೆ. ಆ ನಿಯಮಗಳ ಅನುಸಾರವಾಗಿಯೇ ಜನಪ್ರತಿನಿಧಿಗಳನ್ನು ಸರ್ಕಾರದ ಸಭೆ, ಸಮಾರಂಭಗಳಿಗೆ ಆಹ್ವಾನಿಸುವಂತೆ ಖಡಕ್ ಸೂಚನೆ ನೀಡಿದೆ.

ಈ ಕುರಿತಂತೆ ರಾಜ್ಯ ಸರ್ಕಾರದಿಂದ ಪರಿಷ್ಕೃತ ಅಧಿಸೂಚನೆ ಹೊರಡಿಸಿದ್ದು, ಸರ್ಕಾರದ ಸಭೆ ಮತ್ತು ಸಮಾರಂಭಗಳಿಗೆ ಜನಪ್ರತಿನಿಧಿಗಳನ್ನು ಆಹ್ವಾನಿಸುವ ಬಗ್ಗೆ ಅನುಸರಿಸಬೇಕಾದ ಶಿಷ್ಟಾಚಾರದ ಕುರಿತು ಸಮಗ್ರವಾದ ಸೂಚನೆಗಳನ್ನು ಈಗಾಗಲೇ ಸರ್ಕಾರದ ಸುತ್ತೋಲೆ ಸಂಖ್ಯೆ: ಸಿಆಸುಇ 34 ಹೆಚ್ ಪಿಎ 2018, ದಿನಾಂಕ:16.04.2019ರಲ್ಲಿ ಸುತ್ತೋಲೆಯನ್ನು ಹೊರಡಿಸಲಾಗಿರುತ್ತದೆ ಎಂದಿದ್ದಾರೆ.

ಸಾರ್ವಜನಿಕ ಸರ್ಕಾರಿ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಗಳಲ್ಲಿ ಆಹಾನಿತರ ಹಾಜರಾಗುವಿಕೆಯನ್ನು ಖಚಿತಪಡಿಸಿಕೊಳ್ಳದೇ ಮುದ್ರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಆಹ್ವಾನಿತರ ಸಂಖ್ಯೆಯು ಹೆಚ್ಚಾಗುತ್ತಿದ್ದು ಶಿಷ್ಟಾಚಾರದನ್ವಯ ಆಸನ ವ್ಯವಸ್ಥೆಯನ್ನು ಏರ್ಪಡಿಸುವಲ್ಲಿ ಗೊಂದಲವಾಗುತ್ತಿರುವುದರಿಂದ ಸರ್ಕಾರಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಹಾಗೂ ಸರ್ಕಾರಿ ಸಾರ್ವಜನಿಕ ಕಾರ್ಯಕ್ರಮಗಳನ್ನು ಸುಗಮವಾಗಿ ಮತ್ತು ಘನತೆಯಿಂದ ನಡೆಸಲು ಅನುವಾಗುವಂತೆ ದಿನಾಂಕ:16.04.2019ರ ಸುತ್ತೋಲೆಯನ್ನು ಸಮಗ್ರವಾಗಿ ಮಾರ್ಪಡಿಸಿ ದಿನಾಂಕ: 15.10.2025 ರಂದು ಸುತ್ತೋಲೆ ಸಂಖ್ಯೆ: ಸಿಆಸುಇ 39 ಹೆಚ್‌ಪಿಎ 2025 ಅನ್ನು ಹೊರಡಿಸಲಾಗಿದ್ದು, ಸದರಿ ಮಾರ್ಗಸೂಚಿಗಳನ್ನು ಭಾಗಶ: ಮಾರ್ಪಡಿಸಿ ಈ ಕೆಳಕಂಡಂತೆ ಅಧಿಸೂಚಿಸಲಾಗಿದೆ.

1. ಸರ್ಕಾರಿ ಕಾರ್ಯಕ್ರಮಗಳನ್ನು ಈ ಕೆಳಕಂಡಂತೆ ವರ್ಗೀಕರಿಸಿದೆ:-

(a) ರಾಜ್ಯ ಮಟ್ಟದ ಕಾರ್ಯಕ್ರಮಗಳು, ಈ ಕಾರ್ಯಕ್ರಮಗಳು ರಾಜ್ಯ ಸರ್ಕಾರದ ಒಂದು ಇಲಾಖೆಯು ಪ್ರತ್ಯೇಕವಾಗಿ ಅಥವಾ ಇನ್ನೊಂದು ಇಲಾಖೆಯ ಅಂಗಸಂಸ್ಥೆಗಳು / ಸ್ವಯಂ ಸೇವಾ ಹಾಗೂ ಇತರೆ ಸಂಸ್ಥೆಗಳ ಸಹಯೋಗದೊಂದಿಗೆ ಒಂದು ಜಿಲ್ಲೆಗಿಂತ ಹೆಚ್ಚಿನ ಜಿಲ್ಲೆಗಳಿಗೆ ಸಂಬಂಧಿಸಿದ ಯೋಜನೆಗಳು ಅಥವಾ ಕಾರ್ಯಕ್ರಮಗಳ ಕುರಿತು ಆಯೋಜಿಸಲಾಗುತ್ತದೆ.

(b) ಇಲಾಖೆಗಳು ಆಯೋಜಿಸುವ ಜಿಲ್ಲಾ ಮಟ್ಟದ ಕಾರ್ಯಕ್ರಮಗಳು:- ಕಾರ್ಯಕ್ರಮಗಳು ರಾಜ್ಯ ಸರ್ಕಾರದ ಒಂದು ಇಲಾಖೆಯು ಪ್ರತ್ಯೇಕವಾಗಿ ಅಥವಾ ಇನ್ನೊಂದು ಇಲಾಖೆ/ ಅಂಗಸಂಸ್ಥೆಗಳು / ಸ್ವಯಂ ಸೇವಾ / ಇತರೆ ಸಂಸ್ಥೆಗಳ ಸಹಯೋಗದೊಂದಿಗೆ ಒಂದುಜಿಲ್ಲೆಗೆ ಸಂಬಂಧಿಸಿದ ಯೋಜನೆಗಳು ಅಥವಾ ಕಾರ್ಯಕ್ರಮಗಳ ಕುರಿತು ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಅಥವಾ ಜಿಲ್ಲೆಯ ಇತರ ಭಾಗದಲ್ಲಿ ಆಯೋಜಿಸಲಾಗುತ್ತದೆ.

(c) ಜಿಲ್ಲಾಡಳಿತವು ಆಯೋಜಿಸುವ ಜಿಲ್ಲಾ ಮಟ್ಟದ ಕಾರ್ಯಕ್ರಮಗಳು:- ಈ ಕಾರ್ಯಕ್ರಮಗಳು ಜಿಲ್ಲಾಡಳಿತವು ಆಯಾ ಜಿಲ್ಲೆಗಳ ಯೋಜನೆಗಳಿಗೆ/ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಅಥವಾ ಜಿಲ್ಲೆಯ ಇತರೆ ಭಾಗದಲ್ಲಿ ಆಯೋಜಿಸಲಾಗುತ್ತದೆ.

(d) ತಾಲ್ಲೂಕು ಮಟ್ಟದ ಕಾರ್ಯಕ್ರಮಗಳು:- ಈ ಕಾರ್ಯಕ್ರಮಗಳು ಜಿಲ್ಲಾಡಳಿತ ಅಥವಾ ತಾಲ್ಲೂಕು ಆಡಳಿತವು ಒಂದು ತಾಲ್ಲೂಕಿಗೆ ಸಂಬಂಧಿಸಿದ ಯೋಜನೆಗಳು ಅಥವಾ ಕಾರ್ಯಕ್ರಮಗಳ ಕುರಿತು ತಾಲ್ಲೂಕಿನ ಕೇಂದ್ರ ಸ್ಥಾನದಲ್ಲಿ ಅಥವಾ ತಾಲ್ಲೂಕಿನ ಇತರೆ ಭಾಗದಲ್ಲಿ ಆಯೋಜಿಸಲಾಗುತ್ತದೆ.

(e) ರಾಜ್ಯದಲ್ಲಿ ಆಯೋಜಿಸುವ ಕೇಂದ್ರ ಪುರಸ್ಕೃತ/ ಪ್ರಾಯೋಜಿತ/ ಬೆಂಬಲಿತ ಕಾರ್ಯಕ್ರಮಗಳು, ಈ ಕಾರ್ಯಕ್ರಮಗಳು ರಾಜ್ಯಕ್ಕೆ ಸಂಬಂಧಿಸಿದ ಕೇಂದ್ರ ಪುರಸ್ಕೃತ/ ಪ್ರಾಯೋಜಿತ/ ಬೆಂಬಲಿತ ಯೋಜನೆಗಳು ಅಥವಾ ಕಾರ್ಯಕ್ರಮಗಳ ಕುರಿತು ರಾಜ್ಯದ ಸಹಯೋಗದೊಂದಿಗೆ ರಾಜ್ಯದ ಕೇಂದ್ರ ಸ್ಥಾನ ಅಥವಾ ಇತರೆ ಭಾಗದಲ್ಲಿ ಆಯೋಜಿಸಲಾಗುತ್ತದೆ. 2. ರಾಜ್ಯ ಮಟ್ಟದಲ್ಲಿ ಆಯೋಜಿಸುವ ಕಾರ್ಯಕ್ರಮಗಳ ಮಾರ್ಗಸೂಚಿಗಳು:-

(a) ಉದ್ಘಾಟನೆ. ರಾಜ್ಯ ಮಟ್ಟದ ಕಾರ್ಯಕ್ರಮಗಳನ್ನು ಈ ಕೆಳಕಂಡ ಗಣ್ಯರು ಉದ್ಘಾಟಿಸುತ್ತಾರೆ:-

ಮಾನ್ಯ ಮುಖ್ಯ ಮಂತ್ರಿಗಳು / ಮಾನ್ಯ ಉಪ ಮುಖ್ಯ ಮಂತ್ರಿಗಳು / ಸಂಬಂಧಪಟ್ಟ ಇಲಾಖಾ ಸಚಿವರು/ಇಲಾಖಾ ಸಚಿವರು ಸೂಚಿಸುವ ಯಾವುದೇ ಗಣ್ಯರು.

(b) ಅಧ್ಯಕ್ಷತೆ:- ಕಾರ್ಯಕ್ರಮ ನಡೆಯುವ ಸ್ಥಳದ ಸ್ಥಳೀಯ ಶಾಸಕರು ಅಧ್ಯಕ್ಷತೆ ವಹಿಸುತ್ತಾರೆ.

(c) ಮುಖ್ಯ ಅತಿಥಿಗಳು/ಗೌರವಾನ್ವಿತ ಅತಿಥಿಗಳು:-

(i) ಇಲಾಖಾ ಸಚಿವರು ಆಹ್ವಾನ ಪತ್ರಿಕೆ ಹಾಗೂ ವೇದಿಕೆಯ ಮೇಲೆ ಆಸೀನರಾಗುವ ಗಣ್ಯರ ಹೆಸರುಗಳನ್ನು ಅನುಬಂಧದಲ್ಲಿರುವ ಪಟ್ಟಿಯಿಂದ ಒಂಬತ್ತು ಸಂಖ್ಯೆಗಳಿಗೆ ಮೀರದಂತೆ ಹಾಗೂ ಅನಿವಾರ್ಯ ಸಂದರ್ಭದಲ್ಲಿ ಗಣ್ಯರ ಸಂಖ್ಯೆಯನ್ನು 13 ಕ್ಕೆ ಮೀರದಂತೆ ಆಯ್ಕೆ ಮಾಡುವುದು.

ಹೀಗಿದೆ ಸರ್ಕಾರಿ ಸಭೆ, ಸಮಾರಂಭಗಳಲ್ಲಿ ಜನಪ್ರತಿನಿಧಿ ಆಹ್ವಾನದ ಪಾಲಿಸಬೇಕಾದಂತ ಶಿಷ್ಟಾಚಾರ ನಿಯಮಗಳು

BIG Alert: ನೀವು ರೀಲ್ಸ್ ಮಾಡ್ತೀರಾ? ಹಾಗಾದ್ರೆ ಅದಕ್ಕೂ ಮುನ್ನಾ ಈ ಸುದ್ದಿ ಓದಿ!

Share. Facebook Twitter LinkedIn WhatsApp Email

Related Posts

ಎಕ್ಸಲೆನ್ಸ್ ಇನ್ ಸಸ್ಟೈನಬಲ್ ಅರ್ಬನ್ ಡ್ರಿಂಕಿಂಗ್ ವಾಟರ್: ತೀರ್ಥಹಳ್ಳಿಯ ‘ನಿರಂತರ ಕುಡಿಯುವ ನೀರು’ ಯೋಜನೆಗೆ ರಾಷ್ಟ್ರಮಟ್ಟದಲ್ಲಿ ಮೊದಲನೇ ಸ್ಥಾನ

25/03/2026 2:52 PM2 Mins Read

1 ವರ್ಷದ ಒಳಗೆ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಶೇ 80ರಷ್ಟು ಸಿಬ್ಬಂದಿಯನ್ನು ನೇಮಿಸಿ: ಶಾಸಕ ದರ್ಶನ್‌ ಪುಟ್ಟಣ್ಣಯ್ಯ

25/03/2026 2:48 PM1 Min Read

ಗುಣಮಟ್ಟವಿಲ್ಲದ ಸ್ಟೆತೋಸ್ಕೋಪ್ ಕೊಟ್ಟ ಅಮೇಜಾನ್ ಗೆ ಶಾಕ್: 15,000 ಪರಿಹಾರಕ್ಕೆ ಆಯೋಗ ಆದೇಶ

25/03/2026 2:14 PM2 Mins Read
Recent News

ಎಕ್ಸಲೆನ್ಸ್ ಇನ್ ಸಸ್ಟೈನಬಲ್ ಅರ್ಬನ್ ಡ್ರಿಂಕಿಂಗ್ ವಾಟರ್: ತೀರ್ಥಹಳ್ಳಿಯ ‘ನಿರಂತರ ಕುಡಿಯುವ ನೀರು’ ಯೋಜನೆಗೆ ರಾಷ್ಟ್ರಮಟ್ಟದಲ್ಲಿ ಮೊದಲನೇ ಸ್ಥಾನ

25/03/2026 2:52 PM

BREAKING : ‘LPG ಬುಕಿಂಗ್ ಸಮಯ ಬದಲಾಗಿಲ್ಲ’ : ಕೇಂದ್ರ ಸರ್ಕಾರ ಸ್ಪಷ್ಟನೆ!

25/03/2026 2:48 PM

1 ವರ್ಷದ ಒಳಗೆ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಶೇ 80ರಷ್ಟು ಸಿಬ್ಬಂದಿಯನ್ನು ನೇಮಿಸಿ: ಶಾಸಕ ದರ್ಶನ್‌ ಪುಟ್ಟಣ್ಣಯ್ಯ

25/03/2026 2:48 PM

BREAKING : PNG ಸಂಪರ್ಕ ಲಭ್ಯವಿದ್ದರೂ ನಿರಾಕರಿಸಿದ್ರೆ LPG ಪೂರೈಕೆ ಕಡಿತಗೊಳಿಸಲಾಗುವುದು : ಕೇಂದ್ರ ಸರ್ಕಾರ ಎಚ್ಚರಿಕೆ!

25/03/2026 2:40 PM
State News
KARNATAKA

ಎಕ್ಸಲೆನ್ಸ್ ಇನ್ ಸಸ್ಟೈನಬಲ್ ಅರ್ಬನ್ ಡ್ರಿಂಕಿಂಗ್ ವಾಟರ್: ತೀರ್ಥಹಳ್ಳಿಯ ‘ನಿರಂತರ ಕುಡಿಯುವ ನೀರು’ ಯೋಜನೆಗೆ ರಾಷ್ಟ್ರಮಟ್ಟದಲ್ಲಿ ಮೊದಲನೇ ಸ್ಥಾನ

By kannadanewsnow0925/03/2026 2:52 PM KARNATAKA 2 Mins Read

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದ 24 x 7 ಕುಡಿಯುವ ನೀರು ಸರಬರಾಜು ಯೋಜನೆಯು ಅತ್ಯಂತ ಯಶಸ್ವಿಯಾಗಿದ್ದು, ಅರ್ಥ್…

1 ವರ್ಷದ ಒಳಗೆ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಶೇ 80ರಷ್ಟು ಸಿಬ್ಬಂದಿಯನ್ನು ನೇಮಿಸಿ: ಶಾಸಕ ದರ್ಶನ್‌ ಪುಟ್ಟಣ್ಣಯ್ಯ

25/03/2026 2:48 PM

ಗುಣಮಟ್ಟವಿಲ್ಲದ ಸ್ಟೆತೋಸ್ಕೋಪ್ ಕೊಟ್ಟ ಅಮೇಜಾನ್ ಗೆ ಶಾಕ್: 15,000 ಪರಿಹಾರಕ್ಕೆ ಆಯೋಗ ಆದೇಶ

25/03/2026 2:14 PM

ಜಸ್ಟ್ 1 ರೂ.ಖರ್ಚಿನಿಂದ ನಿಮ್ಮ ಮನೆಯಲ್ಲಿರುವ `ಜಿರಳೆ, ಹಲ್ಲಿ, ಇರುವೆ’ಗಳನ್ನು ಓಡಿಸಬಹುದು !

25/03/2026 2:00 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.