ಬೆಂಗಳೂರು: ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999ರ ಕಲಂ- 2ರಡಿ ವ್ಯಾಖ್ಯಾನಿಸಲಾದ ಎಲ್ಲಾ ಸಂಗ್ರಹಣಾ ಪ್ರಾಧಿಕಾರಿಗಳಿಗೆ ಕಾಂಟ್ರಕ್ಟ್ ಮ್ಯಾನೇಜೆಂಟ್ ಮಾಡ್ಯೂಲ್ (Contract Management Module) ಮೂಲಕ ಕಾಮಗಾರಿ ವೆಚ್ಚದ ಬಿಲ್ಲುಗಳನ್ನು ಆನ್‌ಲೈನ್‌ನಲ್ಲಿ ಖಜಾನೆಗೆ ಸಲ್ಲಿಸುವುದನ್ನು ಕಡ್ಡಾಯಗೊಳಿಸಿ ಸರ್ಕಾರ ಆದೇಶಿಸಿದೆ.
ಈ ಬಗ್ಗೆ ಆರ್ಥಿಕ ಇಲಾಖೆಯ ಸರ್ಕಾರದ ಜಂಟಿ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999ರ ಕಲಂ 2ರಡಿ ವ್ಯಾಖ್ಯಾನಿಸಲಾದ ಎಲ್ಲಾ ಸಂಗ್ರಹಣಾ ಪ್ರಾಧಿಕಾರಿಗಳಿಗೆ ದಿನಾಂಕ 01.08.2024 ರಿಂದ ಅನ್ವಯಿಸುವಂತ ಕಾಂಟ್ರಾಕ್ಟ್ ಮ್ಯಾನೇಜೆಂಟ್ ಮಾಡ್ಯೂಲ್ ಅನ್ನು (Contract Management Module) ಜಾರಿಗೆ ತರಲಾಗಿದೆ. ಸದರಿ ಮಾಡ್ಯೂಲ್ ಅನ್ನು ಖಜಾನೆ 2ರ ವೆಚ್ಚ ಅನುಸರಣೆ ಮಾಡ್ಯೂಲ್ (Expenditure Tracking Module) ರೊಂದಿಗೆ ಸಂಯೋಜಿಸಲಾಗಿದೆ ಎಂದಿದ್ದಾರೆ.
ಪ್ರಮಾಣೀಕೃತ ಕಾರ್ಯಾಚರಣೆ ವಿಧಾನ (SOP) ದಲ್ಲಿನ ನಿಬಂಧನೆಗಳಂತೆ, ಕಾಮಗಾರಿ ವೆಚ್ಚದ ಬಿಲ್ಲುಗಳನ್ನು ಭೌತಿಕ ಹಾಗೂ ಡಿಜಿಟಲ್ ರೂಪ ಎರಡೂ ವಿಧಾನಗಳಲ್ಲಿ ಸಲ್ಲಿಸಬಹುದಾಗಿದೆ ಎಂದು ಮಹಾಲೇಖಪಾಲರು ಅವರ ಪತ್ರ ಸಂ. TM/VLC/2025-20256/05-06 ದಿನಾಂಕ: 21.08.2025 ರಲ್ಲಿ ತಿಳಿಸಿರುವುದರಿಂದ, ಮೇಲೆ (1) ರಲ್ಲಿ ಓದಲಾದ ಸರ್ಕಾರದ ಆದೇಶದಲ್ಲಿನ ಸೂಚನೆಗಳಿಗೆ ಒಳಪಟ್ಟು, ಅಕ್ಟೋಬರ್ 2025 ರಿಂದ ಮೂರು ತಿಂಗಳವರೆಗೆ, ಕಾಂಟ್ರಾಕ್ಟ್ ಮ್ಯಾನೇಜ್‌ಮೆಂಟ್ ಮಾಡ್ಯೂಲ್ ಮೂಲಕ ತಯಾರಾದ ಎಲ್ಲಾ ಕಾಮಗಾರಿ ವೆಚ್ಚದ ಬಿಲ್ಲುಗಳನ್ನು (Work Expenditure Bills) ಸಮಾನಂತರವಾಗಿ, ಆನ್‌ಲೈನ್ ಹಾಗೂ ಭೌತಿಕವಾಗಿ ಖಜಾನೆಗೆ ಸಲ್ಲಿಸುವಂತೆ. ಜನವರಿ 2026 ರಿಂದ ಆನ್‌ಲೈನ್ ಮೂಲಕ ಮಾತ್ರ ಖಜಾನೆಗೆ ಸಲ್ಲಿಸುವಂತೆ. ಸೂಕ್ತ ಆದೇಶವನ್ನು ಹೊರಡಿಸಲು, ಮೇಲೆ ಕ್ರಮ ಸಂಖ್ಯೆ (2) ರಲ್ಲಿ ಓದಲಾದ ಕಡತದಲ್ಲಿ ಖಜಾನ ಆಯುಕ್ತರು ಕೋರಿರುತ್ತಾರೆ ಎಂದು ಹೇಳಿದ್ದಾರೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999ರ ಕಲಂ 2ರಡಿ ವ್ಯಾಖ್ಯಾನಿಸಲಾದ ಎಲ್ಲಾ ಸಂಗ್ರಹಣಾ ಪ್ರಾಧಿಕಾರಿಗಳು, ಈ ಆದೇಶ ಹೊರಡಿಸಿದ ದಿನಾಂಕದಿಂದ ಖಜಾನೆಗೆ ಸಲ್ಲಿಸುವ ಎಲ್ಲಾ ಕಾಮಗಾರಿ ವೆಚ್ಚದ ಬಿಲ್ಲುಗಳನ್ನು ಕಡ್ಡಾಯವಾಗಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಪೋರ್ಟಲ್ ನ (KPPP) Contract Management Module ಮುಖಾಂತರ ಖಜಾನೆಗೆ ಸಲ್ಲಿಸತಕ್ಕದು. ಅಕ್ಟೋಬರ್ 2025 ರಿಂದ ಮೂರು ತಿಂಗಳವರೆಗೆ ಸಮಾನಂತರವಾಗಿ, ಆನ್‌ಲೈನ್ ಹಾಗೂ ಭೌತಿಕವಾಗಿ ಖಜಾನೆಗಳಿಗೆ ಸಲ್ಲಿಸಿವುದು ಮತ್ತು ಜನವರಿ 2026 ರಿಂದ ಆನ್‌ಲೈನ್ ಮೂಲಕ ಮಾತ್ರ ಸಲ್ಲಿಸಲು ಆದೇಶಿಸಿದ್ದಾರೆ.
BREAKING: ಬೆಂಗಳೂರಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಕೇಸ್: ಇಬ್ಬರು ಆರೋಪಿಗಳು ಅರೆಸ್ಟ್
ರಾಜ್ಯ ಸರ್ಕಾರದಿಂದ ‘ಸರ್ಕಾರಿ ನೌಕರ’ರಿಗೆ ಪ್ರಯಾಣ ಭತ್ಯೆ, ಭವಿಷ್ಯ ನಿಧಿ ಮುಂಗಡದ ಬಗ್ಗೆ ಮಹತ್ವದ ಆದೇಶ