Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತದ ತಪ್ಪು ನಕ್ಷೆ ತೋರಿಸಿದ್ಕೆ ಇಸ್ರೇಲ್ ಮೇಲೆ ನೆಟ್ಟಿಗರ ಮುನಿಸು ; “ತಪ್ಪಾಗಿದೆ ಕ್ಷಮಿಸಿ” ಎಂದು ಪೋಸ್ಟ್

14/06/2025 4:46 PM

BREAKING: ಜು.1ರಿಂದ ‘ಆರೋಗ್ಯ ಇಲಾಖೆಯ ನೌಕರ’ರಿಗೆ ‘ಮೊಬೈಲ್ ಆಧಾರಿತ ಹಾಜರಾತಿ’ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

14/06/2025 4:40 PM

BREAKING : ಧಾರವಾಡದಲ್ಲಿ ಭೀಕರ ಅಪಘಾತ : ಅಪರ ಜಿಲ್ಲಾಧಿಕಾರಿ ಕಾರಿಗೆ ಸಿಲಿಂಡರ್ ತುಂಬಿದ ಕ್ಯಾಂಟರ್ ಡಿಕ್ಕಿ!

14/06/2025 4:33 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಜು.1ರಿಂದ ‘ಆರೋಗ್ಯ ಇಲಾಖೆಯ ನೌಕರ’ರಿಗೆ ‘ಮೊಬೈಲ್ ಆಧಾರಿತ ಹಾಜರಾತಿ’ ಕಡ್ಡಾಯ: ರಾಜ್ಯ ಸರ್ಕಾರ ಆದೇಶ
KARNATAKA

BREAKING: ಜು.1ರಿಂದ ‘ಆರೋಗ್ಯ ಇಲಾಖೆಯ ನೌಕರ’ರಿಗೆ ‘ಮೊಬೈಲ್ ಆಧಾರಿತ ಹಾಜರಾತಿ’ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

By kannadanewsnow0914/06/2025 4:40 PM

ಬೆಂಗಳೂರು: ಜುಲೈ.1, 2025ರಿಂದ ಆರೋಗ್ಯ ಸಂಸ್ಥೆಗಳನ್ನು ಒಳಗೊಂಡು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಾದ್ಯಂತ ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿ ಹೊರಡಿಸಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಪ್ರಸ್ತುತ ಬಳಸಲ್ಪಡುತ್ತಿರುವ ಹಾಜರಾತಿ ನಿರ್ವಹಣಾ ವ್ಯವಸ್ಥೆಯು ಮೀಸಲಾದ ಹಾರ್ಡ್‌ವೇ‌ ಸಾಧನಗಳ ಮೂಲಕ ಆಧಾರ್ ಆಧಾರಿತ ಬಯೋಮೆಟ್ರಿಕ್ ಪ್ರಮಾಣೀಕರಣವನ್ನು ಅವಲಂಭಿಸಿದೆ. ಹಾರ್ಡ್‌‌ ಸಾಧನಗಳಿಗೆ ಆಗಾಗ್ಗೆ ನಿರ್ವಹಣೆ, ದುರಸ್ತಿ ಮತ್ತು ಆವರ್ತಕ ಬದಲಾವಣೆಗಳ ಅಗತ್ಯವಿದ್ದು, ಇದು ಇಲಾಖೆಗೆ ಗಣನೀಯ ಪುನರಾವರ್ತಿತ ವೆಚ್ಚಗಳಿಗೆ ಕಾರಣವಾಗಿದೆ. ಬಯೋಮೆಟ್ರಿಕ್ ಸಾಧನಗಳ ಸ್ಥಿರ ಸ್ವರೂಪದಿಂದಾಗಿ ಹಾಜರಾತಿ ಗುರುತಿಸುವಿಕೆಯನ್ನು ನಿರ್ದಿಷ್ಟ ಸ್ಥಳಗಳಿಗೆ ಸೀಮಿತಗೊಳಿಸಿದೆ. ಕ್ಷೇತ್ರ ಸಿಬ್ಬಂದಿ ಮತ್ತು ದೂರದ ಪ್ರದೇಶಗಳಲ್ಲಿ ಕೆಲಸ ಮಾಡುವವರಿಗೆ ಅಸಮರ್ಥತೆಗಳನ್ನು ಸೃಷ್ಟಿಸುತ್ತದೆ. ಈ ವ್ಯವಸ್ಥೆಯ ಸೀಮಿತ ವಿಸ್ತರಣೆ, ಅಂದರೆ ಹೊಸ ಸೌಲಭ್ಯಗಳಿಗೆ ವಿಸ್ತರಿಸಲು ಹಾರ್ಡ್‌‌ ಹೂಡಿಕೆಗಳು ಮತ್ತು ಭೌತಿಕ ಸ್ಥಾಪನಾ ಪ್ರಕ್ರಿಯೆಗಳ ಅಗತ್ಯವಿದೆ. ಇದಲ್ಲದೆ, ಹಾರ್ಡ್‌ವೇರ್ ವೈಫಲ್ಯಗಳು ಮತ್ತು ಸಂಪರ್ಕ ಸಮಸ್ಯೆಗಳು ಆಗಾಗ್ಗೆ ವ್ಯವಸ್ಥೆಯ ಡೌನ್‌ಟೈಮ್‌ಗೆ ಕಾರಣವಾಗುತ್ತದೆ ಎಂದಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ, 2025-26ನೇ ಸಾಲಿನ ಬಜೆಟ್ ಭಾಷಣದ ಕಂಡಿಕೆ-152(ii)ರಲ್ಲಿ “ಮೊಬೈಲ್ ತಂತ್ರಾಂಶದ ಮೂಲಕ ಹಾಜರಾತಿ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು” ಎಂದು ಘೋಷಿಸಲಾಗಿದೆ. ಅದರಂತೆ ಕರ್ನಾಟಕದ ಎಲ್ಲಾ 12000 ಆರೋಗ್ಯ ಸಂಸ್ಥೆಗಳನ್ನು ಒಳಗೊಂಡು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಾದ್ಯಂತ ಕರ್ನಾಟಕ ಹಾಜರಾತಿ ನಿರ್ವಹಣಾ ವ್ಯವಸ್ಥೆ (KAMS) ಅನುಷ್ಠಾನಗೊಳಿಸುವುದನ್ನು ಪುಸ್ತಾಪಿಸಲಾಗಿದ್ದು, ವ್ಯವಸ್ಥೆಯು ಆಧಾರ್ ಆಧಾರಿತ ಮುಖ ಪ್ರಮಾಣೀಕರಣ, ಭೌಗೋಳಿಕ ನಿರ್ದಿಷ್ಟಾಂಕಗಳೊಳಗೆ ಕ್ಷೇತ್ರದಲ್ಲಿ ಹಾಜರಾತಿ ಗುರುತಿಸಲು ಸೌಲಭ್ಯವನ್ನು ನೀಡುತ್ತದೆ. ಮೊಬೈಲ್ ಆಧಾರಿತ ಪರಿಹಾರವು ಹಾರ್ಡ್‌ವೇರ್‌ನ ಅಗತ್ಯವನ್ನು ತೆಗೆದುಹಾಕುತ್ತದೆ ಮತ್ತು ಕಾರ್ಯಾಚರಣೆಯ ವೆಚ್ಚಗಳನ್ನು ಕಡಿಮೆ ಮಾಡಲಿದೆ. ಹಾಜರಾತಿ ಮೇಲ್ವಿಚಾರಣೆ ಮತ್ತು ಕಾರ್ಯಬಲ ನಿರ್ವಹಣೆಯನ್ನು ಸುಧಾರಿಸಲಿದೆ ಎಂದು, ಆದ್ದರಿಂದ ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವ ಕುರಿತಂತೆ ಕೋರಲಾಗಿದೆ.

ಈ ಯೋಜನೆಯು ಸ್ವತಂತ್ರವಾಗಿ ಇ-ಆಡಳಿತ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸಲಿದ್ದು, ಆದ್ದರಿಂದ ಕರ್ನಾಟಕದ ಎಲ್ಲಾ ಆರೋಗ್ಯ ಸಂಸ್ಥೆಗಳನ್ನೊಳಗೊಂಡಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಾದ್ಯಂತ ಮೊಬೈಲ್‌ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಪುಸ್ತಾವನೆಯಲ್ಲಿ ವಿವರಿಸಲಾದ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕದ ಎಲ್ಲಾ ಆರೋಗ್ಯ ಸಂಸ್ಥೆಗಳನ್ನು ಒಳಗೊಂಡು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಾದ್ಯಂತ ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ದಿನಾಂಕ : 01/07/2025 ರಿಂದ ಕಡ್ಡಾಯವಾಗಿ ಜಾರಿಗೊಳಿಸಿ ಆದೇಶಿಸಿದ್ದಾರೆ.

ಈ ಆದೇಶವನ್ನು ಆರ್ಥಿಕ ಇಲಾಖೆಯು ಟಿಪ್ಪಣಿ ಸಂಖ್ಯೆ : ಆಇ 411 ವೆಚ್ಚ -5/2025, ದಿನಾಂಕ : 21/05/2025ರಲ್ಲಿ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯು ಟಿಪ್ಪಣಿ ಸಂಖ್ಯೆ : PDS-HDD/100/2025, ದಿನಾಂಕ : 02/06/2025ರಲ್ಲಿ ನೀಡಿರುವ ಸಹಮತಿ ಹಾಗೂ ಸಚಿವ ಸಂಪುಟವು ಪ್ರಕರಣ ಸಂಖ್ಯೆ /441/2025, ದಿನಾಂಕ : 05/06/20250 ನೀಡಿರುವ ಅನುಮೋದನೆಯೊಂದಿಗೆ ಹೊರಡಿಸಿದೆ.

ರೈಲ್ವೆ ಟ್ರ್ಯಾಕ್ ಕಾಮಗಾರಿ ಹಿನ್ನಲೆ: ಮೈಸೂರು ವಿಭಾಗದ ಈ ರೈಲುಗಳ ಸಂಚಾರ ಮಾರ್ಗಮಧ್ಯ ನಿಯಂತ್ರಣ

BIG NEWS: ರಾಜ್ಯ ಸರ್ಕಾರದಿಂದ ‘ಆಶಾ ಮೆಂಟರ್ಸ್’ಗಳಿಗೆ ಬಿಗ್ ಶಾಕ್: ‘ಕರ್ತವ್ಯದಿಂದ ಮುಕ್ತ’ಗೊಳಿಸಿ ಆದೇಶ

Share. Facebook Twitter LinkedIn WhatsApp Email

Related Posts

BREAKING : ಧಾರವಾಡದಲ್ಲಿ ಭೀಕರ ಅಪಘಾತ : ಅಪರ ಜಿಲ್ಲಾಧಿಕಾರಿ ಕಾರಿಗೆ ಸಿಲಿಂಡರ್ ತುಂಬಿದ ಕ್ಯಾಂಟರ್ ಡಿಕ್ಕಿ!

14/06/2025 4:33 PM1 Min Read

ರೈಲ್ವೆ ಟ್ರ್ಯಾಕ್ ಕಾಮಗಾರಿ ಹಿನ್ನಲೆ: ಮೈಸೂರು ವಿಭಾಗದ ಈ ರೈಲುಗಳ ಸಂಚಾರ ಮಾರ್ಗಮಧ್ಯ ನಿಯಂತ್ರಣ

14/06/2025 4:27 PM1 Min Read

BIG NEWS: ‘ಆಶಾ ಮೆಂಟರ್ಸ್’ ಕರ್ತವ್ಯದಿಂದ ಬಿಡುಗಡೆ ಆದೇಶ ಹಿಂಪಡೆಯದಿದ್ದರೇ ಕಾನೂನು ಹೋರಾಟ: ಶ್ರೀಕಾಂತ್ ಸ್ವಾಮಿ ಎಚ್ಚರಿಕೆ

14/06/2025 4:04 PM2 Mins Read
Recent News

ಭಾರತದ ತಪ್ಪು ನಕ್ಷೆ ತೋರಿಸಿದ್ಕೆ ಇಸ್ರೇಲ್ ಮೇಲೆ ನೆಟ್ಟಿಗರ ಮುನಿಸು ; “ತಪ್ಪಾಗಿದೆ ಕ್ಷಮಿಸಿ” ಎಂದು ಪೋಸ್ಟ್

14/06/2025 4:46 PM

BREAKING: ಜು.1ರಿಂದ ‘ಆರೋಗ್ಯ ಇಲಾಖೆಯ ನೌಕರ’ರಿಗೆ ‘ಮೊಬೈಲ್ ಆಧಾರಿತ ಹಾಜರಾತಿ’ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

14/06/2025 4:40 PM

BREAKING : ಧಾರವಾಡದಲ್ಲಿ ಭೀಕರ ಅಪಘಾತ : ಅಪರ ಜಿಲ್ಲಾಧಿಕಾರಿ ಕಾರಿಗೆ ಸಿಲಿಂಡರ್ ತುಂಬಿದ ಕ್ಯಾಂಟರ್ ಡಿಕ್ಕಿ!

14/06/2025 4:33 PM

ರೈಲ್ವೆ ಟ್ರ್ಯಾಕ್ ಕಾಮಗಾರಿ ಹಿನ್ನಲೆ: ಮೈಸೂರು ವಿಭಾಗದ ಈ ರೈಲುಗಳ ಸಂಚಾರ ಮಾರ್ಗಮಧ್ಯ ನಿಯಂತ್ರಣ

14/06/2025 4:27 PM
State News
KARNATAKA

BREAKING: ಜು.1ರಿಂದ ‘ಆರೋಗ್ಯ ಇಲಾಖೆಯ ನೌಕರ’ರಿಗೆ ‘ಮೊಬೈಲ್ ಆಧಾರಿತ ಹಾಜರಾತಿ’ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

By kannadanewsnow0914/06/2025 4:40 PM KARNATAKA 2 Mins Read

ಬೆಂಗಳೂರು: ಜುಲೈ.1, 2025ರಿಂದ ಆರೋಗ್ಯ ಸಂಸ್ಥೆಗಳನ್ನು ಒಳಗೊಂಡು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಾದ್ಯಂತ ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆ…

BREAKING : ಧಾರವಾಡದಲ್ಲಿ ಭೀಕರ ಅಪಘಾತ : ಅಪರ ಜಿಲ್ಲಾಧಿಕಾರಿ ಕಾರಿಗೆ ಸಿಲಿಂಡರ್ ತುಂಬಿದ ಕ್ಯಾಂಟರ್ ಡಿಕ್ಕಿ!

14/06/2025 4:33 PM

ರೈಲ್ವೆ ಟ್ರ್ಯಾಕ್ ಕಾಮಗಾರಿ ಹಿನ್ನಲೆ: ಮೈಸೂರು ವಿಭಾಗದ ಈ ರೈಲುಗಳ ಸಂಚಾರ ಮಾರ್ಗಮಧ್ಯ ನಿಯಂತ್ರಣ

14/06/2025 4:27 PM

BIG NEWS: ‘ಆಶಾ ಮೆಂಟರ್ಸ್’ ಕರ್ತವ್ಯದಿಂದ ಬಿಡುಗಡೆ ಆದೇಶ ಹಿಂಪಡೆಯದಿದ್ದರೇ ಕಾನೂನು ಹೋರಾಟ: ಶ್ರೀಕಾಂತ್ ಸ್ವಾಮಿ ಎಚ್ಚರಿಕೆ

14/06/2025 4:04 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.