ಮಂಗಳೂರು : ಉಡುಪಿಗೆ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ನೀಡುತ್ತಿದ್ದೂ, ಇದೀಗ ನವದೆಹಲಿಯಿಂದ ಮೋದಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮೀಸಿದ್ದಾರೆ. ಅಲ್ಲಿಂದ ಹೇಳಿಕ್ಯಾಪ್ಟರ್ ನಲ್ಲಿ ಉಡುಪಿಗೆ ತೆರಳಲಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಪ್ರಧಾನಿ ಮೋದಿಯವರನ್ನು ಸ್ವಾಗತಿಸಿದರು.
ಪ್ರಧಾನಿ ಕಾರ್ಯಕ್ರಮದ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ ಮಾಡಲಾಗಿದ್ದು, ನಿಗದಿಗಿಂತಲೂ 40 ನಿಮಿಷ ಮುಂಚಿತವಾಗಿ ಅಂದರೆ, ಬೆಳಗ್ಗೆ 11.40ರ ಬದಲಿಗೆ 11 ಗಂಟೆಗೇ ಅವರು ಉಡುಪಿ ತಲುಪಲಿದ್ದಾರೆ. ಅವರ ಎಲ್ಲಾ ಕಾರ್ಯಕ್ರಮಗಳೂ 40 ನಿಮಿಷ ಮುಂಚಿತವಾಗಿ ನಡೆಯಲಿವೆ.
ಮಂಗಳೂರಿಗೆ ವಿಶೇಷ ವಿಮಾನದಲ್ಲಿ ಮತ್ತು ಅಲ್ಲಿಂದ ಉಡುಪಿಗೆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಲಿರುವ ಪ್ರಧಾನಿ, ಉಡುಪಿ ಹೆಲಿಪ್ಯಾಡ್ ನಿಂದ 20 ನಿಮಿಷಗಳ ರೋಡ್ ಶೋ ಮೂಲಕ ಶ್ರೀಕೃಷ್ಣ ಮಠಕ್ಕೆ ತಲುಪಲಿದ್ದಾರೆ. ಅಲ್ಲಿ ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಪಡೆಯಲಿದ್ದಾರೆ ಮತ್ತು ‘ಸುವರ್ಣ ಕನಕನ ಕಿಂಡಿ’ ಉದ್ಘಾಟಿಸಲಿದ್ದಾರೆ. ಬಳಿಕ ಶ್ರೀಕೃಷ್ಣನ ದರ್ಶನ ದರ್ಶನ ಮಾಡಲಿದ್ದಾರೆ.








