ನವದೆಹಲಿ : ವಾಹನ ಸವಾರರಿಗೆ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಸಿಹಿ ಸುದ್ದಿ ನೀಡಿದ್ದು, ಆಗಸ್ಟ್ 15 ರಂದು ದೇಶದಲ್ಲಿ ವಾರ್ಷಿಕ ಟೋಲ್ ಪಾಸ್ ನಿಯಮ ಜಾರಿಯಾಗುತ್ತಿದೆ. ಹೆಚ್ಚಾಗಿ ಪ್ರಯಾಣ ಮಾಡುವರು ಅಥವಾ ತಿಂಗಳಲ್ಲಿ ಒಂದು ಬಾರಿ ಪ್ರಯಾಣ ಮಾಡುವರಿಗೂ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ತಂದಿರುವ ಹೊಸ ಟೋಲ್ ವಾರ್ಷಿಕ ಪಾಸ್ ಸಾವಿರಾರು ರೂಪಾಯಿ ಉಳಿತಾಯ ಮಾಡಲಿದೆ. ಹಾಗಾಗಿ ಮುಂದಿನ ಆಗಸ್ಟ್ 15 ರಿಂದ ದೇಶದಲ್ಲಿ ವಾರ್ಷಿಕ ಟೋಲ್ ಪಾಸ್ ನಿಯಮ ಜಾರಿಯಾಗುತ್ತಿದೆ.
ಹೌದು ಫಾಸ್ಟ್ಯಾಗ್ ಮೂಲಕ ಭಾರತದಲ್ಲಿ ಟೋಲ್ ಪಾವತಿ ವ್ಯವಸ್ಥೆ ಜಾರಿಯಲ್ಲಿದೆ. ಹೆಚ್ಚಿನ ಸಮಯ ವಿಳಂಬವಿಲ್ಲದೆ ಟೋಲ್ ಗೇಟ್‌ಗಳಲ್ಲಿ ಟೋಲ್ ಪಾವತಿ ಮಾತಿ ಪ್ರಯಾಣ ಮುಂದುವರಿಸಬಹುದು. ಹೆದ್ದಾರಿ ಸೇರಿಂತೆ ಟೋಲ್ ರಸ್ತೆಗಳಲ್ಲಿ ಸಂಚರಿಸುವ ವಾಹನಗಳು ಟೋಲ್ ಪಾವತಿ ಮಾಡಬೇಕು. ಹಾಗಾಗಿ ಹೆಚ್ಚಿನ ಹಣ ಉಳಿತಾಯಕ್ಕೆ ಅಗಸ್ಟ್ 15 ರಿಂದ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಟೂರ್ ಪಾಸ್ ಜಾರಿ ಮಾಡಲಿದೆ.
ವಾರ್ಷಿಕ ಟೋಲ್ ಪಾಸ್ ಬೆಲೆ ಎಷ್ಟು?
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಾರ್ಷಿಕ ಟೋಲ್ ಪಾಸ್ ದರ 3,000 ರೂಪಾಯಿ. ಒಮ್ಮೆ 3,000 ರೂಪಾಯಿ ಪಾವತಿ ಮಾಡಿ ಟೋಲ್ ಪಾಸ್ ಖರೀದಿ ಮಾಡಿದರೆ ಬಳಿಕ ಪದೇ ಪದೇ ಫಾಸ್ಟ್ಯಾಗ್ ರೀಚಾರ್ಚ್ ಮಾಡುವ ಅವಶ್ಯಕತೆ ಇಲ್ಲ. ಇಷ್ಟೇ ಅಲ್ಲ ಟ್ರಿಪ್ ಕುರಿತು ಚಿಂತೆ ಮಾಡಬೇಕಿಲ್ಲ.
ಇತ್ತೀಚಿಗೆ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಟೋಲ್ ದರ ಶೇಕಡಾ 50 ರಷ್ಟು ಕಡಿತ ಮಾಡಿದೆ. ರಾಷ್ಟ್ರೀಯ ಹೆದ್ದಾರಿ ಟೋಲ್ ದರ ಶೇಕಡಾ 50 ರಷ್ಟು ಕಡಿತ ಮಾಡಲಾಗಿದೆ. ಆದರೆ ಈ ಶೇಕಾಡ 50 ರಷ್ಟು ಕಡಿತದಲ್ಲಿ ಎಲ್ಲಾ ಟೋಲ್ ರಸ್ತೆ ಅನ್ವಯವಾಗುವುದಿಲ್ಲ. ಯಾವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುರಂಗ ಮಾರ್ಗ, ಫ್ಲೈ ಓವರ್, ಸೇತುವೆ ಸೇರಿದಂತೆ ಎಲಿವೇಟೆಡ್ ರಸ್ತೆಗಳ ರಚನೆ ಇದೆಯೋ ಈ ಟೋಲ್ ರಸ್ತೆಗಳ ದರ ಅರ್ಧದಷ್ಟು ಕಡಿತ ಮಾಡಲಾಗಿದೆ.
ರಾಷ್ಟ್ರೀಯ ಹೆದ್ದಾರಿಯ ಸೇತುವೆ,ಸುರಂಗ, ಫ್ಲೈಓವರ್ ಸೇರಿದಂತೆ ಎಲಿವೆಟೆಡ್ ರಸ್ತೆಗಳ ಟೋಲ್ ದರ ಪರಿಷ್ಕರಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಒಟ್ಟು ಉದ್ದದ ಐದುಪಟ್ಟು ಅಥವಾ ಎಲಿವೇಟೆಡ್ ಹೆದ್ದಾರಿ ಭಾಗದ ಒಟ್ಟು ಉದ್ದ ಇವೆಡರಲ್ಲಿ ಯಾವುದು ಕಡಿಮೆ ಆಗುತ್ತೋ ಅದರ ಪ್ರಕಾರ ಟೋಲ್ ಶುಲ್ಕ ವಿಧಿಸಲಾಗುತ್ತಿದೆ. ಇದು ಪರಿಷ್ಕೃತ ನಿಯಮವಾಗಿದೆ. ಇದರಿಂದ ಹೆದ್ದಾರಿಯ ಎಲಿವೇಟೆಡ್ ಟೋಲ್ ರಸ್ತೆಗಳ ಶುಲ್ಕ ಶೇಕಡಾ 50 ರಷ್ಟು ಕಡಿಮೆಯಾಗಲಿದೆ. ಇದರಿಂದ ವಾಹನ ಸವಾರರು ನಿರಾಳರಾಗಿದ್ದಾರೆ.