Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮೇ 1ರಿಂದ ಶಿವಮೊಗ್ಗದಲ್ಲಿ ಇಂಡಿಗೋ ವಿಮಾನ ಸೇವೆ ಸ್ಥಗಿತ? ಆತಂಕದಲ್ಲಿ ಪ್ರಯಾಣಿಕರು

14/03/2026 4:02 PM

BREAKING : ಹಾರ್ಮುಜ್ ಜಲಸಂಧಿಯ ಮೂಲಕ ‘ಭಾರತೀಯ ತೈಲ’ ಸಾಗಿಸಲು ಅನುಮತಿ ; ಇರಾನ್ ರಾಯಭಾರಿ

14/03/2026 3:57 PM

‘ಭಾರತವನ್ನ ಬೆದರಿಸಿದ್ದಾಯ್ತು, ಈಗ ಜಗತ್ತನ್ನೇ ಬೇಡಿಕೊಳ್ತಿದೆ’ : ರಷ್ಯಾದ ತೈಲದ ವಿಚಾರದಲ್ಲಿ ಟ್ರಂಪ್ ಕೆಣಕಿದ ಇರಾನ್

14/03/2026 3:42 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಏಪ್ರಿಲ್.1ರಿಂದ ಮೇ.31ರವರೆಗೆ ರಾಜ್ಯದಲ್ಲಿ ಮಳೆಯಿಂದ 71 ಮಂದಿ ಸಾವು, 15378.32 ಹೆಕ್ಟೇರ್ ಬೆಳೆಹಾನಿ
KARNATAKA

BREAKING: ಏಪ್ರಿಲ್.1ರಿಂದ ಮೇ.31ರವರೆಗೆ ರಾಜ್ಯದಲ್ಲಿ ಮಳೆಯಿಂದ 71 ಮಂದಿ ಸಾವು, 15378.32 ಹೆಕ್ಟೇರ್ ಬೆಳೆಹಾನಿ

By kannadanewsnow0931/05/2025 8:52 PM

ಬೆಂಗಳೂರು: ರಾಜ್ಯದಲ್ಲಿ ಏಪ್ರಿಲ್.1ರಿಂದ ಮೇ.31ರವರೆಗೆ ಸುರಿದಂತ ಪೂರ್ವ ಮುಂಗಾರು ಮಳೆಯಿಂದಾಗಿ 71 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ 15378.32 ಹೆಕ್ಟೇರ್ ಬೆಳೆಹಾನಿಯಾಗಿದೆ.

ಈ ಬಗ್ಗೆ ಸಿಎಂ ಸಿದ್ಧರಾಮಯ್ಯ ಅವರು ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಪೂರ್ವ ಮುಂಗಾರು ಹಂಗಾಮು 1901 ರಿಂದ ಇಲ್ಲಿಯವರೆಗಿನ ಮಳೆ ಅಂಕಿಅಂಶಗಳನ್ನು ಗಮನಿಸಿದಾಗ 2025ರ ಪೂರ್ವ ಮುಂಗಾರು ಅವಧಿಯಲ್ಲಿ ದಾಖಲೆ ಪ್ರಮಾಣದ ಮಳೆಯಾಗಿದ್ದು, ಕಳೆದ 125 ವರ್ಷಗಳಲ್ಲೇ ಪೂರ್ವ ಮುಂಗಾರು ಮತ್ತು ಮೇ ಮಾಹೆಯಲ್ಲಿ ಕಂಡುಬಂದ ಗರಿಷ್ಟ ಪ್ರಮಾಣದ ಮಳೆಯಾಗಿದೆ ಎಂದಿದ್ದಾರೆ.

  • ಪ್ರಮುಖವಾಗಿ ರಾಜ್ಯದಲ್ಲಿ 2025ರ ಮೇ ಮಾಹೆಗೆ ವಾಡಿಕೆಯಾಗಿ 74 ಮಿ.ಮೀ ಮಳೆಯಾಗಬೇಕಿದ್ದು, ವಾಸ್ತವಿಕ 219 ಮಿ.ಮೀ ಮಳೆಯಾಗಿದ್ದು ಸರಾಸರಿ ವಾಡಿಕೆ ಮಳೆಗೆ ಹೋಲಿಸಿದಾಗ ಶೇ.197ರಷ್ಟು ಅತ್ಯಧಿಕ ಮಳೆಯಾಗಿದೆ.
  • 2025ರ ಪೂರ್ವ ಮುಂಗಾರು (1ನೇ ಮಾರ್ಚ್‌ ರಿಂದ 31ನೇ ಮೇ) ಅವಧಿಯಲ್ಲಿ ವಾಡಿಕೆಯಾಗಿ 115ಮಿ.ಮೀ ಮಳೆಯಾಗಬೇಕಿದ್ದು, ವಾಸ್ತವಿಕ 286 ಮಿ.ಮೀ ಮಳೆಯಾಗಿದ್ದು, ಸರಾಸರಿ ವಾಡಿಕೆ ಮಳೆಗೆ ಹೋಲಿಸಿದಾಗ ಶೇ.149ರಷ್ಟು ಅತ್ಯಧಿಕ ಮಳೆಯಾಗಿದೆ.
  • ಒಟ್ಟಾರೆ, 2025ರ ಪೂರ್ವ ಮುಂಗಾರು (1ನೇ ಮಾರ್ಚ್‌ ರಿಂದ 31ನೇ ಮೇ) ಅವಧಿಯಲ್ಲಿ ರಾಜ್ಯದಾದ್ಯಂತ ಗುಡುಗು-ಸಿಡಿಲು ಮತ್ತು ಬಿರುಗಾಳಿ ಸಹಿತ, ಮಳೆಯಾಗಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅತ್ಯಧಿಕ ಮತ್ತು ಅಧಿಕ ಮಳೆಯಾಗಿರುವುದು ಕಂಡುಬಂದಿದೆ.
  1. 2025ರ ಮುಂಗಾರು ಮಳೆ ಮುನ್ಸೂಚನೆ :
  • ಭಾರತ ಹವಾಮಾನ ಇಲಾಖೆಯು, ಮೇ 27 ರಂದು ಪ್ರಕಟಿಸಲಾದ ಪರಿಷ್ಕೃತ 2025ರ ನೈರುತ್ಯ ಮುಂಗಾರು ಮಳೆ ಮುನ್ಸೂಚನೆ ಅನ್ವಯ, ರಾಜ್ಯದಾದ್ಯಂತ 2025ರ ನೈರುತ್ಯ ಮುಂಗಾರು (ಜೂನ್-ಸೆಪ್ಟೆಂಬರ್) ಅವಧಿಗೆ ವಾಡಿಕೆಗಿಂತಾ ಅಧಿಕ ಮಳೆಯಾಗುವ ಸಾಧ್ಯತೆಗಳಿದ್ದು, 2025ರ ಜೂನ್ ಮಾಹೆಯಲ್ಲಿ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ಜಿಲ್ಲೆಗಳಲ್ಲಿ ವಾಡಿಕೆ ಮತ್ತು ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿದೆ.
  1. ಜಲಾಶಯಗಳ ನೀರಿನ ಸಂಗ್ರಹಣೆ ಮಟ್ಟ
  • 2025ರ ಮೇ-31ರ ಅನ್ವಯ, ರಾಜ್ಯದ ಪ್ರಮುಖ 14 ಜಲಾಶಯಗಳ ಒಟ್ಟು ಒಟ್ಟು ಸಂಗ್ರಹಣೆ 316.01 ಟಿಎಂಸಿ ಗಳಷ್ಟಿದ್ದು, ಒಟ್ಟು ಒಟ್ಟು ಸಂಗ್ರಹಣೆ ಸಾಮರ್ಥ್ಯದ (895.62 ಟಿಎಂಸಿಯ) ಶೇ.35% ರಷ್ಟಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 95 ಟಿಎಂಸಿ (ಸಾಮರ್ಥ್ಯದ ಸರಿ ಸುಮಾರು 20%) ಸಂಗ್ರಹಣೆ ಇತ್ತು.
  • ಒಟ್ಟಾರೆ ರಾಜ್ಯದ ಪ್ರಮುಖ ಜಲಾಶಯಗಳಿಗೆ 2025ರ ಮೇ 19 ಮತ್ತು ಮೇ 29ರ ನಡುವೆ, ಸುಮಾರು 718,193 ಕ್ಯೂಸೆಕ್‌ಗಳ (05 ಟಿಎಂಸಿಗೆ) ಸಂಚಿತ ಒಳಹರಿವನ್ನು ಕಂಡುಬಂದಿದ್ದು, ಜಲಾನಯನ ಪ್ರದೇಶಗಳಲ್ಲಿನ ವ್ಯಾಪಕ ಮತ್ತು ಭಾರೀ ಮಳೆಯಿಂದಾಗಿ ಮೇ 25ರಿಂದ ಒಳಹರಿವು ಸಾಮಾನ್ಯವಾಗಿ ಹೆಚ್ಚಾಗಿರುವುದು ಕಂಡುಬಂದಿದೆ.
  1. 2025ರ ಮುಂಗಾರು ಹಂಗಾಮು ತುರ್ತು ಪ್ರತಿಕ್ರಿಯೆಗಾಗಿ NDRF ತಂಡದ ಪೂರ್ವ ನಿಯೋಜನೆ:
  • ರಾಜ್ಯದಲ್ಲಿ ಒಟ್ಟು 5 NDRF ತಂಡಗಳಿದ್ದು, ಈ ಪೈಕಿ ಕೊಡಗು, ದಕ್ಷಿಣ ಕನ್ನಡ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ತಲಾ ಒಂದರಂತೆ 4 NDRF ತಂಡಗಳನ್ನು ಈಗಾಗಲೇ ನಿಯೋಜಿಸಲಾಗಿದೆ. ಮತ್ತೊಂದು ತಂಡವು ಬೆಂಗಳೂರಿನಲ್ಲಿದ್ದು, ಇದನ್ನು ಹೊರತು ಪಡಿಸಿ, ಅಗ್ನಿಶಾಮಕ, SDRF ಮತ್ತು ಇನ್ನಿತರ ತುರ್ತು ಸೇವಾ ತಂಡಗಳು ಅಗತ್ಯವಿರುವ ತುರ್ತು ಪ್ರತಿಕ್ರಿಯೆ ಮತ್ತು ರಕ್ಷಣಾ ಕಾರ್ಯಗಳಿಗೆ ಲಭ್ಯವಿರುತ್ತದೆ.
  1. 2025ರ ಏಪ್ರಿಲ್‌ 1 ರಿಂದ 31ನೇ ಮೇ ವರೆಗಿನ ಮಳೆಯಿಂದಾದ ಹಾನಿ ಮತ್ತು ನಷ್ಟದ ವಿವರಗಳು
  • 2025ರ ಏಪ್ರಿಲ್‌ 1 ರಿಂದ 31ನೇ ಮೇ ವರೆಗಿನ ಅವಧಿಯಲ್ಲಿ ರಾಜ್ಯದಲ್ಲಿ ಕಂಡುಬಂದ ಸಿಡಿಲಿನಿಂದ-48, ಮರ ಉರುಳಿ- 9, ಮನೆ ಕುಸಿತ-5, ನೀರಿನಲ್ಲಿ ಮುಳುಗಿ – 4, ಭೂಕುಸಿತ-4,  ವಿದ್ಯುತ್ಪ್ರವಾಹ-1 ಸೇರಿ .ಒಟ್ಟು 71 ಮಾನವ ಜೀವಹಾನಿಯಾಗಿದ್ದು, ಮೃತರ ವಾರಸುದಾರರಿಗೆ ತುರ್ತು ಪರಿಹಾರವಾಗಿ ರೂ.5.00 ಲಕ್ಷದಂತೆ ಪರಿಹಾರ ವಿತರಿಸಲಾಗಿದೆ.
  • 702 ಪ್ರಾಣಿಹಾನಿಗಳು ಸಂಭವಿಸಿದ್ದು, ಈ ಪೈಕಿ 698 ಪ್ರಾಣಿಹಾನಿ ಪ್ರಕರಣಗಳಲ್ಲಿ ಸಂಬಂಧಪಟ್ಟವರಿಗೆ ಈಗಾಗಲೇ ಪರಿಹಾರ ವಿತರಿಸಲಾಗಿದೆ. (ದೊಡ್ಡ ಪ್ರಾಣಿಗಳು-225 ಮತ್ತು ಸಣ್ಣ ಪ್ರಾಣಿಗಳು-477)
  • 2068-ಮನೆ ಹಾನಿಯಾಗಿದ್ದು, ಈ ಪೈಕಿ 1926 ಮನೆಗಳಿಗೆ ಈಗಾಗಲೇ ಪರಿಹಾರ ವಿತರಿಸಲಾಗಿದೆ. (ಸಂಪೂರ್ಣ ಹಾನಿ-75 ಮತ್ತು ಭಾಗಶಃ ಹಾನಿ-1993).
  • ಒಟ್ಟು 15378.32 ಹೆಕ್ಟೇರ್ ಬೆಳೆ ಹಾನಿಯಾಗಿದ್ದು, (ಕೃಷಿ ಬೆಳೆ 11915.66 ಹೆಕ್ಟೇರ್ ಮತ್ತು ತೋಟಗಾರಿಕೆ 3462.66 ಹೆಕ್ಟೇರ್) ಬೆಳೆಹಾನಿ ವಿವರಗಳನ್ನು ಪರಿಹಾರ ತಂತ್ರಾಂಶದಲ್ಲಿ ನಮೂದಿಸಲು ಅವಕಾಶ ಕಲ್ಪಿಸಲಾಗಿದ್ದು, ಪರಿಹಾರ ಪಾವತಿ ಪ್ರಕ್ರಿಯೆ ಪ್ರಗತಿಯಲ್ಲಿದೆ.

BREAKING: ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿಗೆ ಬಿಗ್ ಶಾಕ್: ರಾಜ್ಯ ಸರ್ಕಾರದಿಂದ ರಾಜ್ಯ ಸಚಿವ ಸ್ಥಾನಮಾನ ವಾಪಸ್

BREAKING: ರಾಜ್ಯದಲ್ಲಿಂದು 58 ಜನರಿಗೆ ಕೊರೋನಾ, ಸೋಂಕಿಗೆ ಓರ್ವ ವ್ಯಕ್ತಿ ಬಲಿ | Karnataka Covid19 Update

Share. Facebook Twitter LinkedIn WhatsApp Email

Related Posts

ಮೇ 1ರಿಂದ ಶಿವಮೊಗ್ಗದಲ್ಲಿ ಇಂಡಿಗೋ ವಿಮಾನ ಸೇವೆ ಸ್ಥಗಿತ? ಆತಂಕದಲ್ಲಿ ಪ್ರಯಾಣಿಕರು

14/03/2026 4:02 PM1 Min Read

ರಾಜ್ಯದಲ್ಲಿ 4,824 ಕೋಟಿ ಬಂಡವಾಳ ಹೂಡಿಕೆಗೆ ಸಮ್ಮತಿ: 14,525 ಉದ್ಯೋಗ ಅವಕಾಶ ಸೃಷ್ಟಿ

14/03/2026 3:24 PM2 Mins Read

ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : ನಾಳೆ ಖಾದಿ ಬಟ್ಟೆ ಖರೀದಿಗೆ ಅವಕಾಶ

14/03/2026 3:11 PM1 Min Read
Recent News

ಮೇ 1ರಿಂದ ಶಿವಮೊಗ್ಗದಲ್ಲಿ ಇಂಡಿಗೋ ವಿಮಾನ ಸೇವೆ ಸ್ಥಗಿತ? ಆತಂಕದಲ್ಲಿ ಪ್ರಯಾಣಿಕರು

14/03/2026 4:02 PM

BREAKING : ಹಾರ್ಮುಜ್ ಜಲಸಂಧಿಯ ಮೂಲಕ ‘ಭಾರತೀಯ ತೈಲ’ ಸಾಗಿಸಲು ಅನುಮತಿ ; ಇರಾನ್ ರಾಯಭಾರಿ

14/03/2026 3:57 PM

‘ಭಾರತವನ್ನ ಬೆದರಿಸಿದ್ದಾಯ್ತು, ಈಗ ಜಗತ್ತನ್ನೇ ಬೇಡಿಕೊಳ್ತಿದೆ’ : ರಷ್ಯಾದ ತೈಲದ ವಿಚಾರದಲ್ಲಿ ಟ್ರಂಪ್ ಕೆಣಕಿದ ಇರಾನ್

14/03/2026 3:42 PM

ರಾಜ್ಯದಲ್ಲಿ 4,824 ಕೋಟಿ ಬಂಡವಾಳ ಹೂಡಿಕೆಗೆ ಸಮ್ಮತಿ: 14,525 ಉದ್ಯೋಗ ಅವಕಾಶ ಸೃಷ್ಟಿ

14/03/2026 3:24 PM
State News
KARNATAKA

ಮೇ 1ರಿಂದ ಶಿವಮೊಗ್ಗದಲ್ಲಿ ಇಂಡಿಗೋ ವಿಮಾನ ಸೇವೆ ಸ್ಥಗಿತ? ಆತಂಕದಲ್ಲಿ ಪ್ರಯಾಣಿಕರು

By kannadanewsnow0914/03/2026 4:02 PM KARNATAKA 1 Min Read

ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಜನತೆಗೆ ವಿಮಾನಯಾನ ಸಂಸ್ಥೆ ಇಂಡಿಗೋ ಆಘಾತಕಾರಿ ಸುದ್ದಿಯೊಂದನ್ನು ನೀಡಿದೆ. ಬೆಂಗಳೂರು ಮತ್ತು ಹುಬ್ಬಳ್ಳಿ ಸೇರಿದಂತೆ…

ರಾಜ್ಯದಲ್ಲಿ 4,824 ಕೋಟಿ ಬಂಡವಾಳ ಹೂಡಿಕೆಗೆ ಸಮ್ಮತಿ: 14,525 ಉದ್ಯೋಗ ಅವಕಾಶ ಸೃಷ್ಟಿ

14/03/2026 3:24 PM

ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : ನಾಳೆ ಖಾದಿ ಬಟ್ಟೆ ಖರೀದಿಗೆ ಅವಕಾಶ

14/03/2026 3:11 PM

BIG NEWS: ರಾಜ್ಯದಲ್ಲೊಂದು ಅಮಾನುಷ ಘಟನೆ: ವಿದ್ಯಾರ್ಥಿ ಮೇಲೆ ‘ಮೂವರು ಶಿಕ್ಷಕ’ರು ಹಲ್ಲೆ

14/03/2026 3:10 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.