ಉತ್ತರಕನ್ನಡ: ಹಣಕಾಸಿನ ವಿಚಾರಕ್ಕಾಗಿ ಸ್ನೇಹಿತರೇ ಇಬ್ಬರು ಅಣ್ಣ-ತಮ್ಮಂದಿರನ್ನು ಧಾರುಣವಾಗಿ ಹತ್ಯೆ ಮಾಡಿದಂತ ಘಟನೆ ಹೊನ್ನಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹಣದ ವಿಚಾರಕ್ಕಾಗಿ ಇಬ್ಬರು ಅಣ್ಣ-ತಮ್ಮಂದಿರಿಗೆ ಮದ್ಯದ ಜೊತೆಗೆ ವಿಷ ಬೆರೆಸಿ ಕುಡಿಸಿ, ಹತ್ಯೆ ಮಾಡಿ, ಕಾರು ಸಹಿತ ಸುಟ್ಟು ಹಾಕಿದಂತ ಮೂವರನ್ನು ಹೊನ್ನಾವರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕಳೆದ ಜನವರಿ.6, 7ರಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪೊಲೀಸ್ ಠಾಣೆ ವ್ಯಾಪ್ತಿಯ ಸುರಳಿ ಮುರ್ಕಿ ಬಳಿಯಲ್ಲಿ ಮಾರುತಿ ಜೆನ್ ಕಾರೊಂದು ಅಪಘಾತಗೊಂಡು, ಅದರಲ್ಲಿ ಸುಟ್ಟ ಸ್ಥಿತಿಯಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿತ್ತು. ಈ ಬಗ್ಗೆ ಹೊನ್ನಾವರ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಸಿದ್ದರಾಮೇಶ್ವರ ಅಂಡ್ ಟೀಂ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಆರಂಭದಲ್ಲಿ ಅಪಘಾತ ಪ್ರಕರಣ ದಾಖಲಿಸಿಕೊಂಡಿತ್ತು.
ಅಪಘಾತದ ಬಳಿಕ ಕಾರು ಸುಟ್ಟ ಸ್ಥಿತಿಯ ಬಗ್ಗೆ, ಅದರಲ್ಲಿ ಇಬ್ಬರ ಮೃತದೇಹ ಇರೋ ಬಗ್ಗೆ ಅನುಮಾನಗೊಂಡ ಪಿಐ ಸಿದ್ಧರಾಮೇಶ್ವರ ಸಾಹೇಬ್ರು, ಇದು ಅಪಘಾತವಲ್ಲ. ಬದಲಾಗಿ ಕೊಲೆ ಎಂಬುದಾಗಿ ಅನುಮಾನಿಸಿ ತನಿಖೆಗೆ ಇಳಿಯುತ್ತಾರೆ. ಆಗ ಮೃತರನ್ನು ಸಿದ್ಧಾಪುರ ತಾಲ್ಲೂಕಿನ ಕುಡಗುಂದ ಗ್ರಾಮದ ಮಂಜುನಾಥ್ ವೀರಭದ್ರ ಹಸ್ಲರ್ ಹಾಗೂ ಚಂದ್ರಶೇಖರ ವೀರಭದ್ರ ಹಸ್ಲರ್ ಎಂಬುದು ತಿಳಿದು ಬರುತ್ತದೆ.
ಮಂಜುನಾಥ್, ಚಂದ್ರಶೇಖರ್ ಕಾರು ಅಪಘಾತವಾಗಿತ್ತೋ ಅಥವಾ ಕೊಲೆ ಮಾಡಲಾಗಿತ್ತೋ ಎನ್ನುವ ಬಗ್ಗೆ ವಿವಿಧ ಆಯಾಮಗಳಲ್ಲಿ ಹೊನ್ನಾವರ ಠಾಣೆಯ ಪೊಲೀಸರು ತನಿಖೆಗೆ ಇಳಿಯುತ್ತಾರೆ. ಆಗ ಸಿಕ್ಕಿದ್ದೇ ಹಣಕಾಸಿನ ವಿಚಾರಕ್ಕಾಗಿ ಇಬ್ಬರನ್ನು ಮರ್ಡರ್ ಮಾಡಲಾಗಿದೆ ಎನ್ನುವ ವಿಚಾರ. ಈ ಸಂಬಂಧ ಪ್ರಮೋದ್ ನಾಯಕ್, ಸಣ್ಯ ನಾಯಕ್ ಹಾಗೂ ಹೇಮಂತ್ ನಾಯಕ್ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮರ್ಡರ್ ಮಿಸ್ಟರಿಯೇ ರಿವೀಲ್ ಆಗಿದೆ.
ಮಂಜುನಾಥ್, ಚಂದ್ರಶೇಖರ್ ಕೊಲೆ ಮಾಡಿ ಅಪಘಾತವೆನ್ನುವಂತೆ ಬಿಂಬಿಸಿದ್ದೇಗೆ ಗೊತ್ತಾ?
ಹಣಕಾಸಿನ ವಿಚಾರಕ್ಕಾಗಿ ಚಂದ್ರಶೇಖರ್ ಹಾಸ್ಲರ್ ಹಾಗೂ ಸ್ನೇಹಿತನಾಗಿದ್ದಂತ ಚಂದ್ರ ಘಟ್ಟಗಿ ಗ್ರಾಮ ಪ್ರಮೋದ್ ಗಣಪತಿ ನಾಯಕ್ ನಡುವೆ ಜಗಳ ಉಂಟಾಗಿತ್ತು. ಈ ಕಾರಣಕ್ಕೆ ಚಂದ್ರಶೇಖರ್ ಹಾಸ್ಲರ್ ಮರ್ಡರ್ ಗೆ ಪ್ಲಾನ್ ಮಾಡಿದ್ದನು. ಅದರಂತೆ ದಿನಾಂಕ 06-01-2026ರಂದು ಮಧ್ಯಾಹ್ನ ಅಣ್ಣ-ತಮ್ಮಂದಿರಾದಂತ ಮಂಜುನಾಥ್ ಹಾಗೂ ಚಂದ್ರಶೇಖರ್ ಕರೆದೊಯ್ದಂತ ಪ್ರಮೋದ್ ಗಣಪತಿ ನಾಯಕ್, ಅವರಿಗೆ ಮದ್ಯದಲ್ಲಿ ವಿಷ ಬೆರೆಸಿ ಕುಡಿಸಿದ್ದನು. ವಿಷ ಬೆರೆಸಿದ್ದಂತ ಮದ್ಯವನ್ನು ಕುಡಿದಂತ ಮಂಜುನಾಥ್, ಚಂದ್ರಶೇಖರ್ ಕಾರಿನಲ್ಲೇ ನರಳಿ ನರಳಿ ಪ್ರಾಣ ಬಿಟ್ಟಿದ್ದರು.
ಹೀಗೆ ಮೃತಪಟ್ಟಿದ್ದಂತ ಮಂಜುನಾಥ್ ಹಾಗೂ ಚಂದ್ರಶೇಖರ್ ಅವರನ್ನು ಅವರದ್ದೇ ಕಾರಿನಲ್ಲಿ ಪ್ರಮೋದ್ ನಾಯಕ್ ಸ್ನೇಹಿತರಾದಂತ ನಂದಿ ಸಾಲು ಗ್ರಾಮದ ಹೇಮಂತ್ ಗಣಪತಿ ನಾಯಕ್, ಹಾಲಳ್ಳಿ ಗ್ರಾಮದ ಸಣ್ಯ ನಾಯಕ್ ಸಹಾಯದಿಂದ ಮಾವಿನಗುಂಡಿಯ ಬಳಿ ಇರುವಂತ ನಯರಾ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಖರೀದಿಸಿದ್ದರು. ಪ್ರಮೋದ್ ನಾಯಕ್ ಶವಗಳಿದ್ದಂತ ಕಾರನ್ನು, ಹೊನ್ನಾವರ ತಾಲ್ಲೂಕಿನ ಸುರಳಿ ಮುರ್ಕಿ ವರೆಗೆ ಡ್ರೈವ್ ಮಾಡಿಕೊಂಡು ತೆರಳಿದ್ದನು.
ಯಾರಿಗೂ ಅನುಮಾನ ಬಾರದೇ ಇರಲಿ ಎನ್ನುವ ಕಾರಣಕ್ಕಾಗಿ ಹೊನ್ನಾವರ ಪೊಲೀಸ್ ಠಾಣೆ ವ್ಯಾಪ್ತಿಯ ಸುರಳಿ ಮುರ್ಕಿ ಬಳಿ ರಸ್ತೆ ಪಕ್ಕದ ಹಳ್ಳಕ್ಕೆ ಕಾರು ತಳ್ಳಿದ್ದಂತ ಆರೋಪಿಗಳು, ಆ ಬಳಿಕ ಕಾರು, ಅದರಲ್ಲಿದ್ದಂತ ಮಂಜುನಾಥ್, ಚಂದ್ರಶೇಖರ್ ಮೃತದೇಹದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಅದೊಂದು ಕಾರು ಅಪಘಾತದ ಬಳಿಕ ಬೆಂಕಿ ತಗುಲಿ ಸಾವನ್ನಪ್ಪಿರಬಹುದು ಎನ್ನುವಂತೆ ಬಂಬಿಬಿಸಿದ್ದರು.
ಸುಳಿವು ನೀಡಿದ ಆರೋಪಿಗಳ ಸುಟ್ಟ ಗಾಯ
ಅಂದಹಾಗೇ ಹೊನ್ನಾವರ ಪೊಲೀಸ್ ಠಾಣೆ ವ್ಯಾಪ್ತಿಯ ಸುರಳಿ ಮುರ್ಕಿ ಬಳಿಯಲ್ಲಿ ಮಂಜುನಾಥ್, ಚಂದ್ರಶೇಖರ್ ಕಾರು ಅಪಘಾತವೆಂದು ಬಿಂಬಿಸುವಂತಿದ್ದರು, ತನಿಖೆಗೆ ಇಳಿದಂತ ಪಿಐ ಸಿದ್ಧರಾಮೇಶ್ವರಗೆ ಅದು ಕೊಲೆ ಎಂಬ ಸುಳಿವು ಸಿಕ್ಕಿತ್ತು. ವಿವಿಧ ಆಯಾಮಗಳು, ತಾಂತ್ರಿಕ ದಾಖಲೆಗಳು ಸೇರಿದಂತೆ ಇತರೆ ಮಹತ್ವದ ಸುಳಿವು ಆಧರಿಸಿ ಪ್ರಮೋದ್ ನಾಯಕ್ ವಶಕ್ಕೆ ಪಡೆದು ವಿಚಾರಣೆ ನಡೆಸೋದಕ್ಕೆ ತೊಡಗಿದ್ದಾಗ ಆತನಿಗೂ ಸುಟ್ಟ ಗಾಯವಾಗಿದ್ದನ್ನು ಕಂಡು, ಇವರೇ ಕೊಲೆ ಮಾಡಿ, ಮೃತದೇಹವನ್ನು ಸುಟ್ಟು ಹಾಕಿರೋ ಖಚಿತ ಮಾಹಿತಿ ಸಿಕ್ಕಿತ್ತು. ತೀವ್ರ ವಿಚಾರಣೆಗೆ ಒಳಪಡಿಸಿದಾಗ ಕೊಲೆ ರಹಸ್ಯವನ್ನು ಪ್ರಮೋದ್ ನಾಯಕ್ ಬಾಯಿ ಬಿಟ್ಟಿದ್ದರು.
ಈ ಎಲ್ಲಾ ಖಚಿತ ಮಾಹಿತಿ ಆಧರಿಸಿ ಪ್ರಮೋದ್ ನಾಯಕ್ ಗೆ ಕೊಲೆಗೆ ಸಹಾಯ ಮಾಡಿದಂತ ಗಣಪತಿ ನಾಯಕ್, ಸಣ್ಯ ನಾಯಕ್ ಸೇರಿದಂತೆ ಮೂವರು ಆರೋಪಿಗಳನ್ನು ಜನವರಿ.23, 2026ರ ನಿನ್ನೆ ಹೊನ್ನಾವರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಅವರ ವಿರುದ್ಧ ಕೊಲೆ ಹಾಗೂ ಅಟ್ರಾಸಿಟಿ ಕೇಸ್ ದಾಖಲಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿ, ಕಂಬಿ ಏಣಿಸುವಂತೆ ಮಾಡಿದ್ದಾರೆ. ಆ ಮೂಲಕ ಕಾರು ಅಪಘಾತವೆಂದು ಕೊಲೆ ಕೇಸ್ ಬಿಂಬಿಸಲು ಹೊರಟವರಿಗೆ ಪ್ರಕರಣ ಬೇಧಿಸಿದಂತ ಹೊನ್ನಾವರ ಠಾಣೆಯ ಪಿಐ ಸಿದ್ದರಾಮೇಶ್ವರ ಜೈಲಿಗಟ್ಟಿದ್ದಾರೆ.
ಆರೋಪಿಗಳನ್ನು ಬಂಧಿಸೋದಕ್ಕೆ ಮತ್ತು ತನಿಖೆ ವೇಳೆಯಲ್ಲಿ ಹೊನ್ನಾವರ ಠಾಣೆಯ ಪಿಎಸ್ಐ ಮಂಜುನಾಥ್, ಎಸ್ ಐ ಮಾರುತಿ ನಾಯಕ್, ಎಚ್ ಸಿ ಹಮೀದ್, ರಮಾನಂದ ರಾಜು ನಾಯಕ್, ಗಜಾನ ನಾಯಕ್, ಪ್ರಶಾಂತ್ ನಾಯಕ್, ರವಿ ನಾಯಕ್, ವಿಟ್ಟಲ್ ಗೌಡ, ಮನೋಜ್, ರವಿ ನಾಯಕ್, ಶಿವಾನಂದ್ ಅಂಗಡಿ, ಕಿರಣ್, ಚಾಲಕರಾದ ಚಂದ್ರಶೇಖರ್ ನಾಯಕ್, ಸಂತೋಷ್ ನಾಯಕ್ ಸಾಥ್ ನೀಡಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು








