ಮಂಡ್ಯ: ಸ್ವಾತಂತ್ರ್ಯವನ್ನ ಕಾಂಗ್ರೆಸ್ ಕೊಟ್ಟಿದ್ದು.ಸ್ವಾತಂತ್ರ್ಯ, ಸಂವಿಧಾನ, ರಾಷ್ಟ್ರಗೀತೆ ಮೇಲೆ ನಮಗೆ ಹಕ್ಕು ಜಾಸ್ತಿ.ನಮ್ಮ ನಾಯಕರುಗಳ ತ್ಯಾಗ, ಹೋರಾಟ, ಬಲಿದಾನದಿಂದ ಸ್ವಾತಂತ್ರ್ಯ ಬಂತು. ಹೀಗಾಗಿ 75ನೇ ಸ್ವಾತಂತ್ರ್ಯ ಅಮೃತಮಹೋತ್ಸವನ್ನು ಸಂಭ್ರಮಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ
ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
BIGG NEWS: ಬೆಳ್ಳಾರೆಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಸಭೆ; ಪ್ರವೀಣ್ ಹತ್ಯೆಯ ಪ್ರಮುಖ ಹಂತಕನ ಬಂಧನ ಕುರಿತು ಚರ್ಚೆ
ಜಿಲ್ಲೆಯಲ್ಲಿ ಮಾತನಾಡಿದ ಅವರು, ಒಂದು ಲಕ್ಷಕ್ಕೂ ಹೆಚ್ಚು ಜನ ರಾಷ್ಟ್ರ ಧ್ವಜ ಹಿಡಿಯಲಿದ್ದಾರೆ.ನಾವು ಕಾರ್ಯಕ್ರಮ ಘೋಷಣೆ ಮಾಡಿದ ಬಳಿಕ ಬಿಜೆಪಿ ಹರ್ ಘರ್ ತಿರಂಗಾ ಘೋಷಣೆ ಮಾಡಿದೆ. 25 ರುಪಾಯಿಗೆ ಬಾವುಟ ಮಾರಿ ಮನೆ ಮೇಲೆ ಹಾರಿಸಲು ಹೇಳಿದ್ದಾರೆ.
ಇದು ಸರ್ಕಾರದ ನಾಚಿಕೆಗೇಡುತನ. ಬಾವುಟವನ್ನು ಉಚಿತವಾಗಿ ನೀಡಬಹುದಿತ್ತು. ನೂರನೇ ವರ್ಷ ಆಚರಿಸುವಾಗ ನಾನು ಬದುಕಿರುತ್ತೇನೋ ಇಲ್ವೋ ಗೊತ್ತಿಲ್ಲ ಎಂದರು.
75ನೇ ವರ್ಷದ ಈ ಸಂಭ್ರಮ ಕಳೆದುಕೊಳ್ಳಬೇಡಿ. ಸ್ವಾತಂತ್ರ್ಯ ನಡಿಗೆ ಇತಿಹಾಸದ ಕೊಡುಗೆ. ಮಂಡ್ಯದವರು ಹೋರಾಟಕ್ಕೆ ಯಾವತ್ತೂ ಹಿಂಜರಿಯುವುದಿಲ್ಲ.
ಮೇಕೆದಾಟು ಪಾದಯಾತ್ರೆಗೆ ಬಂದ ರೀತಿ ಈ ಕಾರ್ಯಕ್ರಮಕ್ಕೂ ಬನ್ನಿ. ರಾಷ್ಟ್ರಧ್ವಜ ಹಿಡಿದು ಸ್ವಾತಂತ್ರ್ಯ ನಡಿಗೆಯಲ್ಲಿ ಪಾಲ್ಗೊಳ್ಳಿ. ಪಕ್ಷದ ಸಂಘಟನೆ, ರಾಷ್ಟ್ರ ಪ್ರೇಮಕ್ಕಾಗಿ ಬನ್ನಿ ಎಂದರು.
BIGG NEWS: ಬೆಳ್ಳಾರೆಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಸಭೆ; ಪ್ರವೀಣ್ ಹತ್ಯೆಯ ಪ್ರಮುಖ ಹಂತಕನ ಬಂಧನ ಕುರಿತು ಚರ್ಚೆ
ಹಳೇ ಮೈಸೂರು ಭಾಗದಲ್ಲಿ ವಿಧಾನ ಪರಿಷತ್ನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಈ ಗೆಲುವು ಕಾಂಗ್ರೆಸ್ ಪಕ್ಷಕ್ಕೆ ಹೊಸ ಉಮ್ಮಸ್ಸು ತರಿಸಿದೆ.
ನಾನು ಹೊಸದೊಂದು ಸರ್ವೆ ಮಾಡಿಸಿದ್ದೀನಿ. ಮದ್ದೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದಾಗಿ ಸರ್ವೆಯಲ್ಲಿ ಬಂದಿದೆ. ಮಂಡ್ಯ, ನಾಗಮಂಗಲ, ಮದ್ದೂರು, ಶ್ರೀರಂಗಪಟ್ಟಣದಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಉಳಿದೆಡೆ ಅಭ್ಯರ್ಥಿಗಳ ಆಯ್ಕೆ ವಿಚಾರ ಗೊಂದಲವಾಗಿದೆ ಎಂದರು.
ಇನ್ನು ಬಿಜೆಪಿ ಸಿಎಂ ಬದಲಾವಣೆ ವಿಚಾರ ಅವರೇ ಸೃಷ್ಟಿ ಮಾಡಿದ್ದು.
ಈ ಕುರಿತು ನಾನು ಹೆಚ್ಚಿಗೆ ಮಾತನಾಡಲ್ಲ.ಮೇಕೆದಾಟು ಪಾದಯಾತ್ರೆ ಬಗ್ಗೆ ಕೆಲ ರೈತರ ಮಕ್ಕಳು ಟೀಕೆ ಮಾಡಿದ್ರು.ಪಾದಯಾತ್ರೆ ಲಾಸ್ ಆಯ್ತಾ.? ಸರ್ಕಾರದ ಘೋಷಣೆ ಮಾಡಲಿಲ್ವಾ.? ಅದರ ಬಗ್ಗೆ ಈಗ ಚರ್ಚೆ ನಡೆಯಲಿಲ್ವಾ. ಉಸಿರು ಇರುವವರೆಗೂ ರೈತರ ಪರ ಹೋರಾಟ. ಮೇಕೆದಾಟು ಪಾದಯಾತ್ರೆ ಟೀಕಿಸಿದ್ದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.