ನವದೆಹಲಿ: ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಉಚಿತವಾಗಿ ಎಲ್ ಪಿ ಜಿ ಸಿಲಿಂಡರ್ ನೀಡಲಾಗುತ್ತಿದೆ. ಇದಕ್ಕಾಗಿ ಪಿಎಂ ಉಜ್ವಲ್ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಹಾಗಾದ್ರೆ ಈ ಯೋಜನೆಯ ಲಾಭ ಪಡೆಯಲು ಅರ್ಹತಾ ಮಾನದಂಡಗಳು ಏನು? ದಾಖಲೆಗಳು ಏನು ಎನ್ನುವ ಬಗ್ಗೆ ಮುಂದೆ ಓದಿ.
ಪಿಎಂ ಉಜ್ವಲ್ ಯೋಜನಾ 2.0 ಅಡಿ, ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು, ಮಹಿಳೆಯರು ನೋಂದಾಯಿಸಿಕೊಳ್ಳಬೇಕಿದೆ. ಹೀಗೆ ನೋಂದಾಯಿಸಿಕೊಂಡಂತ ಅರ್ಹ ಮಹಿಳೆಯರಿಗೆ ಉಚಿತ ಸಿಲಿಂಡರ್ ಮತ್ತು ಒಲೆ ನೀಡಲಾಗುತ್ತದೆ.
ಅರ್ಹತಾ ಮಾನದಂಡಗಳು ಏನು?
- ಅರ್ಜಿದಾರರು ಮಹಿಳೆಯಾಗಿರಬೇಕು.
- ಅರ್ಜಿದಾರ ಮಹಿಳೆಯು ಮನೆಯ ಮುಖ್ಯಸ್ಥೆಯಾಗಿರಬೇಕು
- 18 ವರ್ಷಕ್ಕಿಂತ ಮೇಲ್ಪಟ್ಟವರು ಮಾತ್ರವೇ ಅರ್ಜಿಯನ್ನು ಸಲ್ಲಿಸಬಹುದು.
ದಾಖಲೆಗಳು ಏನೇನು ಬೇಕು?
- ಆಧಾರ್ ಕಾರ್ಡ್
- ಬ್ಯಾಂಕ್ ಖಾತೆಯ ಪಾಸ್ ವಿವರ
- ಮೊಬೈಲ್ ಸಂಖ್ಯೆ
- ಪಾಸ್ ಪೋರ್ಟ್ ಅಳತೆಯ ಪೋಟೋ
- ಪಡಿತರ ಚೀಟಿ
ನೋಂದಣಿ ಮಾಡಿಕೊಳ್ಳುವುದು ಹೇಗೆ?
ಉಜ್ವಲ ಯೋಜನೆ 2.0 ಗಾಗಿ ನೋಂದಾಯಿಸಲು ಹಲವಾರು ಮಾರ್ಗಗಳಿವೆ:
ಜನ ಸೇವಾ ಕೇಂದ್ರ: ನಿಮ್ಮ ಹತ್ತಿರದ ಜನ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಮತ್ತು ನೋಂದಣಿ ಫಾರ್ಮ್ ಅನ್ನು ಭರ್ತಿ ಮಾಡಲು ಸಹಾಯ ಪಡೆಯಿರಿ
ಅಧಿಕೃತ ವೆಬ್ಸೈಟ್: pmuy.gov.in ಅಧಿಕೃತ ಉಜ್ವಲ ಯೋಜನೆ ವೆಬ್ಸೈಟ್ಗೆ ಭೇಟಿ ನೀಡಿ.
“ಉಜ್ವಲ ಯೋಜನೆ 2.0 ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಆಧಾರ್ ಸಂಖ್ಯೆ ಮತ್ತು ಇತರ ಅಗತ್ಯ ವಿವರಗಳನ್ನು ನಮೂದಿಸುವ ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
ಗ್ಯಾಸ್ ಡೀಲರ್: ನೋಂದಣಿ ಫಾರ್ಮ್ ಅನ್ನು ಭರ್ತಿ ಮಾಡಲು ಮತ್ತು ನಿಮ್ಮ ಅರ್ಜಿಯನ್ನು ಸಲ್ಲಿಸಲು ನೀವು ನಿಮ್ಮ ಸ್ಥಳೀಯ ಗ್ಯಾಸ್ ಡೀಲರ್ ಅನ್ನು ಭೇಟಿ ಮಾಡಬಹುದು.
‘ಯಜಮಾನಿ’ಯರಿಗೆ ವಿವಿಧ ರೀತಿಯಲ್ಲಿ ನೆರವಾದ ‘ಗೃಹಲಕ್ಷ್ಮಿ’: ಈ ‘ಯಶೋಗಾಥೆ’ ಓದಿ | Gruhalakshmi Scheme
ಅ. 1ರಂದು ಮೋದಿ ಅಂಡ್ ಕಂಪನಿಗೆ ಜಮ್ಮು-ಕಾಶ್ಮೀರದ ಯುವಕರು ನಿರ್ಗಮನ ದ್ವಾರ ತೋರಿಸಲಿದ್ದಾರೆ: ಖರ್ಗೆ