ಬೆಂಗಳೂರು : ನಾಯಿ ಮರಿ..ನಾಯಿ ಮರಿ ಎಂದು ಮನೆ ಮಂದಿಯೆಲ್ಲಾ ನರಿಮರಿಗೆ ಮೊಸರನ್ನ ಹಾಕಿ ನಂತರ ಶಾಕ್ ಆಗಿದ್ದಾರೆ.
ಬೆಂಗಳೂರಿನ ಬನಶಂಕರಿಯಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬರು ತಮ್ಮ ನಾಯಿ ಮನೆಯಿಂದ ನಾಯಿ ಮರಿ ಅಂತ ನರಿ ಮರಿ ತಂದಿದ್ದಾರೆ, ಅದು ನೋಡುವುದಕ್ಕೆ ಥೇಟ್ ನಾಯಿ ಮರಿ ಇದ್ದ ಹಾಗೆ ಇದ್ದರಿಂದ ಯಾರಿಗೂ ಈ ವಿಚಾರ ಗೊತ್ತಾಗಿರಲಿಲ್ಲ. ಸಾಮಾನ್ಯವಾಗಿ ನಾಯಿ ಮರಿಯಂತೆ ಪ್ರೀತಿ ತೋರಿಸಿ ಊಟ ಹಾಕಿದ್ದಾರೆ. ನಾಯಿಗೆ ಕೊಡುವ ಹಾಗೆ ಮೊಸರನ್ನು ಕೊಟ್ಟ ಹಾಗೆ ನರಿಯ ಬಂಡವಾಳ ಬಯಲಾಗಿದೆ.
ಮೊಸರನ್ನ ಊಟ ಸೇರದೇ ಡಿ ಹೈಡ್ರೇಷನ್ ಆಗಿ ನಾಲ್ಕು ದಿನ ನರಿ ಮನೆಯಲ್ಲೇ ಗೋಳಾಡಿದೆ . ಗೋಳಾಟ ಕೇಳದೇ ಅಕ್ಕಪಕ್ಕದ ಮನೆಯವರಿಗೆ ಅನುಮಾನ ಬಂದು ಪ್ರಾಣಿ ಸಂರಕ್ಷಕರಿಗೆ ಕರೆ ಮಾಡಿದ್ದಾರೆ. ಅವರು ನೋಡೋಣ..ನಾಯಿ ಮರಿಯ ಒಂದು ವಿಡಿಯೋ ಕಳುಹಿಸಿ ಎಂದಿದ್ದಾರೆ.ವಿಡಿಯೋ ನೋಡಿದಾಗ ಆಗ ಅದು ನಾಯಿ ಮರಿಯಲ್ಲ, ನರಿ ಮರಿಯೆಂಬುದು ಗೊತ್ತಾಗಿದೆ. ಕೂಡಲೇ ಪೊಲೀಸರು ಬಂದು ನರಿಯನ್ನು ರಕ್ಷಿಸಿ ಕೆಂಗೇರಿ ಬಳಿ ಇರುವ ಪೀಪಲ್ ಫಾರ್ ಅನಿಮಲ್ ನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ.
BREAKING NEWS: ನಾಳೆಯಿಂದ ಉಬರ್, ಓಲೋ ಆಟೋ ಓಡಾಡುವಂತಿಲ್ಲ, 5 ಸಾವಿರದ ತನಕ ದಂಡ ಫಿಕ್ಸ್
BIGG NEWS: ರಸ್ತೆ ಅಪಘಾತಗೊಂಡು ಬಿದಿದ್ದ ಬೈಕ್ ಸವಾರ: ಆಸ್ಪತ್ರೆಗೆ ದಾಖಲಿಸಿ, ಮಾನವೀಯತೆ ಮೆರೆದ ಸಚಿವ ಕೆ.ಗೋಪಾಲಯ್ಯ