ಚಿತ್ರದುರ್ಗ: ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲೇ ಎಣ್ಣೆ ಮಿಕ್ಸ್ ಮಾಡಿ, ಪಾರ್ಟಿ ಮಾಡಿದಂತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಹಿನ್ನಲೆಯಲ್ಲಿ ನಾಲ್ವರು ಸಿಬ್ಬಂದಿಗಳನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಆದೇಶಿಸಿದ್ದಾರೆ.
ಚಿತ್ರದುರ್ಗದ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಮದ್ಯ ಸೇವನೆ ಹಾಗೂ ಪಾರ್ಟಿ ಮಾಡಿದಂತ ಆರೋಪದ ವೀಡಿಯೋ ವೈರಲ್ ಆಗಿತ್ತು. ಇದನ್ನು ಗಮನಿಸಿದಂತ ಡಿಡಿಪಿಐ ಎಂ.ಆರ್ ಮಂಜುನಾಥ್ ಅವರು, ತನಿಖೆ ನಡೆಸಿ ನಾಲ್ವರು ಸಿಬ್ಬಂದಿಯ ಅಮಾನತಿಗೆ ಡಿಸಿಗೆ ಪತ್ರದಲ್ಲಿ ಶಿಫಾರಸ್ಸು ಮಾಡಿದ್ದರು.
ಈ ಹಿನ್ನಲೆಯಲ್ಲಿ ಚಿತ್ರದುರ್ಗ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯ ಅಧೀಕ್ಷಕ ಸುನೀಲ್ ಕುಮಾರ್, ಪ್ರಥಮ ದರ್ಜೆ ಸಹಾಯಕ ಸ್ವಾಮಿ, ಡಿ ದರ್ಜೆಯ ನೌಕರ ತಿಪ್ಪೇಸ್ವಾಮಿ ಹಾಗೂ ವಾಹನ ಚಾಲಕ ರವಿ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಅಂದಹಾಗೇ ವೈರಲ್ ಆಗಿದ್ದಂತ ವೀಡಿಯೋದಲ್ಲಿ ಕಚೇರಿಯಲ್ಲೇ ಸುಮಾರು 20 ಲೀಟರ್ ಕ್ಯಾನಿನ ಅರ್ಧದಷ್ಟು ನೀರಿಗೆ ಮದ್ಯವನ್ನು ಸುರಿದು ಮಿಕ್ಸ್ ಮಾಡುತ್ತಿರುವುದು ಕಂಡು ಬಂದಿತ್ತು. ಅಲ್ಲದೇ ಅದನ್ನು ವಾಹನಕ್ಕೂ ಸಾಗಿಸಿದ್ದರು. ಇದಲ್ಲದೇ ಕೆಲವರು ಅಲ್ಲಿಯೇ ಮದ್ಯ ಸೇವಿಸಿ ಎಣ್ಣೆ ಪಾರ್ಟಿಯನ್ನು ಶಿಕ್ಷಣ ಇಲಾಖೆಯ ಕಚೇರಿಯಲ್ಲೇ ಮಾಡಿದ್ದರು. ಈ ಹಿನ್ನಲೆಯಲ್ಲಿ ನಾಲ್ವರನ್ನು ಸಸ್ಪೆಂಡ್ ಮಾಡಲಾಗಿದೆ.
BREAKING: ಇನ್ಮುಂದೆ ‘SSLC ಪರೀಕ್ಷೆ’ಯಲ್ಲಿ 35 ಅಲ್ಲ, 33 ಅಂಕ ತೆಗೆದ್ರೂ ಪಾಸ್: ಶಾಲಾ ಶಿಕ್ಷಣ ಇಲಾಖೆ ಅಧಿಕೃತ ಆದೇಶ
BREAKING: ರಾಜ್ಯದ ‘ಪೊಲೀಸ್ ಇಲಾಖೆ’ಯಲ್ಲಿ ಖಾಲಿ ಇರುವ ‘2032 ಹುದ್ದೆ’ಗಳ ಭರ್ತಿಗೆ ಸರ್ಕಾರ ಆದೇಶ | JOB ALERT
ಸಾಗರದ ‘ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನ’ದ ಹಾಲಿ ಸಮಿತಿ ವಿರುದ್ಧ ‘ನ್ಯಾಯಾಂಗ ನಿಂದನೆ’ ಅರ್ಜಿ