ಅಂಬಾಲಾ(ಹರಿಯಾಣ): ಸೋಮವಾರ ಸಂಜೆ ಅಂಬಾಲಾದ ನಗ್ಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಭಾಕ್ರಾ ಕಾಲುವೆಗೆ ಪಂಜಾಬಿ ಕುಟುಂಬದ ನಾಲ್ವರು ಪ್ರಯಾಣಿಸುತ್ತಿದ್ದ ಕಾರು ಬಿದ್ದ ಪರಿಣಾಮ ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನರ್ವಾನಾ ಶಾಖೆಯಿಂದ ಪಂಜಾಬಿ ಕುಟುಂಬದ ನಾಲ್ವರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ.
ಭಾನುವಾರ ಬೆಳಗ್ಗೆ ಪಂಜಾಬಿ ಕುಟುಂಬದವರು ಪ್ರಯಾಣಿಸುತ್ತಿದ್ದ ಕಾರು ಕಾಲುವೆಗೆ ಬಿದ್ದಿದೆ. ಸೋಮವಾರ ಕಾಲುವೆಯಲ್ಲಿ ಶವಗಳು ಪತ್ತೆಯಾದಾಗ ಘಟನೆ ಬೆಳಕಿಗೆ ಬಂದಿದೆ. ಮಾಹಿತಿ ಪಡೆದ ಅಂಬಾಲ ಪೊಲೀಸರು ಮತ್ತು ಲಾಲ್ರು ಪೊಲೀಸರು ಸ್ಥಳಕ್ಕೆ ಧಾವಿಸಿ ನಾಲ್ವರ ಮೃತದೇಹಗಳನ್ನು ಹೊರತೆಗೆದಿದ್ದಾರೆ.
ಮೃತರನ್ನು ಲಾಲ್ರುವಿನ ತಿವಾನಾ ಗ್ರಾಮದ ಕುಲ್ಬೀರ್ ಸಿಂಗ್ (40), ಅವರ ಪತ್ನಿ ಕಮಲ್ಜಿತ್ (38), ಅವರ ಮಕ್ಕಳಾದ ಜಶನ್ಪ್ರೀತ್ (16) ಮತ್ತು ಖುಷ್ಪ್ರೀತ್ (11) ಎಂದು ಗುರುತಿಸಲಾಗಿದೆ.
ಮೃತದೇಹಗಳನ್ನು ಅಂಬಾಲಾದ ಸಿವಿಲ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ನಗ್ಗಲ್ ಪೊಲೀಸ್ ಠಾಣೆಯ ಎಸ್ಎಚ್ಒ ಅನಂತ್ ರಾಮ್ ತಿಳಿಸಿದ್ದಾರೆ.