ಗುರುಗ್ರಾಮ: ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಕ್ರೇನ್‌ನಿಂದ ಬಿದ್ದು ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದು, ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ
ಇಲ್ಲಿನ ರೆಸಿಡೆನ್ಶಿಯಲ್ ಸೊಸೈಟಿಯೊಂದರಲ್ಲಿ ಮಂಗಳವಾರ ನಡೆದಿದೆ.

ಸೆಕ್ಟರ್ 77 ರ ರೆಸಿಡೆನ್ಶಿಯಲ್ ಸೊಸೈಟಿ ಎಮಾರ್ ಪಾಮ್ ಹೈಟ್ಸ್ ನಿರ್ಮಾಣ ಸ್ಥಳದಲ್ಲಿ ನಿನ್ನೆ ಸಂಜೆ 5.10 ರ ಸುಮಾರಿಗೆ ಈ ಘಟನೆ ನಡೆದಿದೆ. ಐವರು ಕಾರ್ಮಿಕರು ನಿರ್ಮಾಣ ಹಂತದಲ್ಲಿರುವ ಕಟ್ಟಡದ 17 ನೇ ಮಹಡಿಗೆ ಸಮೀಪವಿರುವ ಟವರ್ ಕ್ರೇನ್ ಅನ್ನು ಸರಿಪಡಿಸುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಶಟರಿಂಗ್‌ನ ಕಬ್ಬಿಣದ ತುಂಡು ಮುರಿದು ಬಿದ್ದ ಪರಿಣಾಮ ನಾಲ್ವರು ಕಾರ್ಮಿಕರು ನೆಲಕ್ಕೆ ಅಪ್ಪಳಿಸಿ ಸಾವನ್ನಪ್ಪಿದರೆ, ಒಬ್ಬರು ಕಟ್ಟಡದ 12 ನೇ ಮಹಡಿಯಲ್ಲಿ ಸಿಲುಕಿಕೊಂಡು ತೀವ್ರವಾಗಿ ಗಾಯಗೊಂಡಿದ್ದಾರೆ.

ಘಟನೆ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಕಾರ್ಮಿಕರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದ್ರೆ, ಅವರಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಮತ್ತೊಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಬಿಹಾರದ ಕಿಶನ್‌ಗಂಜ್ ನಿವಾಸಿ ಮೊಹಮ್ಮದ್ ತಹ್ಮಿದ್, ಗೋಪಾಲ್‌ಗಂಜ್ ನಿವಾಸಿಗಳಾದ ಕಾಮೋದ್, ನವೀನ್ ಮತ್ತು ಪರ್ಮೇಸರ್ ಎಂದು ಗುರುತಿಸಲಾಗಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ನಿರ್ಲಕ್ಷ್ಯದ ಪರಿಣಾಮವಾಗಿ ಈ ಘಟನೆ ಸಂಭವಿಸಿದೆ ಎನ್ನಲಾಗಿದ್ದು, ಕಾರ್ಮಿಕರು, ಎಲ್ಲಾ ವೆಲ್ಡರ್‌ಗಳು ಯಾವುದೇ ಸುರಕ್ಷತಾ ವಸ್ತುಗಳನ್ನು ಧರಿಸಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ʻಅಮ್ಮಾ ನನಗೆ ಹಸಿವಾಗ್ತಿದೆ, ಎದ್ದೇಳು ಊಟ ಕೊಡುʼ: ಮೃತಪಟ್ಟ ತಾಯಿಯ ಬಳಿ ಗೋಗರೆದ ಬಾಲಕ

BIGG NEWS : ಡಿಸೆಂಬರ್ 5 ರಿಂದ 22 ರವರೆಗೆ ಬೀದರ್ ನಗರದಲ್ಲಿ `ಅಗ್ನಿಪಥ್ ನೇಮಕಾತಿ Rally’

BIGG NEWS : ರಾಜ್ಯದಲ್ಲಿ ಭಾರೀ ಮಳೆ : ಪರಿಹಾರ ಹಾಗೂ ರಕ್ಷಣಾ ಕಾರ್ಯಗಳಿಗೆ ಕ್ರಮ : ಸಿಎಂ ಬಸವರಾಜ ಬೊಮ್ಮಾಯಿ

Share.
Exit mobile version