ಕೊಪ್ಪಳ: ಬೆಳಗಾವಿ ಸೇನಾ ನೇಮಕಾತಿ ಕಛೇರಿ ವತಿಯಿಂದ “ಅಗ್ನಿಪಥ್ ನೇಮಕಾತಿ ರ್ಯಾಲಿ’ಯನ್ನು ಡಿಸೆಂಬರ್ 05 ರಿಂದ 22 ರವರೆಗೆ ಬೀದರ್ ನೆಹರೂ ಸ್ಟೇಡಿಯಾಂನಲ್ಲಿ ಹಮ್ಮಿಕೊಳ್ಳಲಾಗಿದೆ.

BIGG NEWS : ರಾಜ್ಯದಲ್ಲಿ ಭಾರೀ ಮಳೆ : ಪರಿಹಾರ ಹಾಗೂ ರಕ್ಷಣಾ ಕಾರ್ಯಗಳಿಗೆ ಕ್ರಮ : ಸಿಎಂ ಬಸವರಾಜ ಬೊಮ್ಮಾಯಿ

ಈ ನೇಮಕಾತಿ ರ್ಯಾಲಿಯಲ್ಲಿ ಬೆಳಗಾಂ ಪ್ರಧಾನ ಕಛೇರಿ ಒಳಗೊಂಡ ಏಜಿಸ್ ನೇಮಕಾತಿ ಜೋನ್‌ನಲ್ಲಿ ಬರುವ ಕರ್ನಾಟಕದ ಬೆಂಗಳೂರಿನ ಪುರುಷ ಸ್ವಯಂ ಪ್ರೇರಕರು, ಬೆಳಗಾವಿ, ಬೀದರ್, ಗುಲ್ಬರ್ಗ, ಕೊಪ್ಪಳ, ರಾಯಚೂರು, ಯಾದಗಿರಿ ಭಾಗದ ಅಭ್ಯರ್ಥಿಗಳು ಭಾಗವಹಿಸಬಹುದು.

BIGG NEWS : ರಾಜ್ಯದಲ್ಲಿ ಐಬಿ ಪಾರ್ಕ್ ನಿರ್ಮಾಣಕ್ಕೆ ಕ್ರಮ : ಇಂಧನ ಸಚಿವ ಸುನೀಲ್ ಕುಮಾರ್

ಸೇನಾ ರ‍್ಯಾಲಿಯಲ್ಲಿ ಅಗ್ನಿವೀರ್ ಜನರಲ್ ಡ್ಯುಟಿ, ಅಗ್ನಿವೀರ್ ಟೆಕ್ನಿಕಲ್, ಅಗ್ನಿವೀರ್ ಟ್ರೇಡ್‌ಮನ್, ಅಗ್ನಿವೀರ್ ಟ್ರೇಡ್‌ಮನ್, ಅಗ್ನಿವೀರ್ ಕ್ಲಾರ್ಕ್, ಸ್ಟೋರ್ ಕೀಪರ್ ಟೆಕ್ನಿಕಲ್ ಎಂಬ ವಿಭಾಗಗಳಲ್ಲಿ ನೇಮಕಾತಿ ನೆಡೆಯಲಿದ್ದು, ವಿದ್ಯಾರ್ಹತೆ ಹಾಗೂ ಇತರೆ ಅರ್ಹತೆ ಜತೆಗೆ ವಿಶೇಷ ವಿಭಾಗಗಳಿಗೆ ಸಂಬಂಧಪಟ್ಟ ಮಾಹಿತಿಗಾಗಿ ವೆಬ್‌ಸೈಟ್ ಮೂಲಕ ಪಡೆಯಬಹುದು.

ಕಾಮನ್‌ವೆಲ್ತ್ ಗೇಮ್ಸ್‌: ಲಾನ್ ಬೌಲ್ಸ್‌ನಲ್ಲಿ ಚಿನ್ನ ಗೆದ್ದ ಭಾರತೀಯ ಮಹಿಳಾ ತಂಡವನ್ನು ಅಭಿನಂದಿಸಿದ ಪ್ರಧಾನಿ ಮೋದಿ!

ಆಸಕ್ತ ಅಭ್ಯರ್ಥಿಗಳು ನೋಂದಾಣಿಯನ್ನು ಆಗಸ್ಟ್ 05  ರಿಂದ ಸೆಪ್ಟೆಂಬರ್ 03 ರವರೆಗೆ ಆನ್‌ಲೈನ್ ಮೂಲಕ ವೆಬ್‌ಸೈಟ್  Joinindianarmy.nic.in ನಲ್ಲಿ ನೋಂದಾಣಿಯನ್ನು ಮಾಡಿಸುವುದು ಕಡ್ಡಾಯವಾಗಿದೆ. ಅಭ್ಯರ್ಥಿಗಳಿಗೆ ಪ್ರವೇಶ ಪತ್ರವನ್ನು ಇ-ಮೇಲ್ ಮುಖಾಂತರ ನವೆಂಬರ್ 10 ರಿಂದ 20ರ ವರೆಗೆ ಕಳುಹಿಸಲಾಗುವುದು ಎಂದು ಬೆಳಗಾಂ ಸೇನಾ ನೇಮಕಾತಿ ಕಛೇರಿ ಪ್ರಕಟಣೆಯಲ್ಲಿ ತಿಳಿಸಿದೆ.

Share.
Exit mobile version