ಬಿಹಾರ: ತಾಯಿ ಮೃತಪಟ್ಟಿದ್ದಾಳೆ ಎಂಬುದನ್ನು ಅರಿಯದ ಪುಟ್ಟ ಕಂದಮ್ಮ ಊಟಕ್ಕಾಗಿ ಆಕೆಯ ಬಳಿ ಗೋಗರಿಯುತ್ತಿರುವ ದೃಶ್ಯ ಬಿಹಾರದ ಭಾಗಲ್ಪುರ ರೈಲು ನಿಲ್ದಾಣದಲ್ಲಿ ಕಂಡು ಬಂದಿದೆ.

ತನ್ನ ತಾಯಿ ಇಹಲೋಕದಿಂದ ದೂರ ಹೋಗಿದ್ದಾಳೆ ಎಂಬುದೂ ತಿಳಿಯದ ಐದು ವರ್ಷದ ಮಗು ಆಕೆಯ ದೇಹಕ್ಕೊರಗಿ, ʻನನಗೆ ಹಸಿವಾಗುತ್ತಿದೆ ಅಮ್ಮಾ ಎದ್ದೇಳು ಊಟ ಕೊಡುʼ ಎಂದು ಮೃತಪಟ್ಟಾಕೆಯನ್ನು ಎತ್ತಲು ಪ್ರಯತ್ನಿಸಿದೆ. ಆದ್ರೆ, ಅವಳು ಸ್ವಲ್ಪವೂ ಕದಲಲಿಲ್ಲ. ಅಮ್ಮ ನಿದ್ದೆಗೆ ಜಾರಿದ್ದಾಳೆ ಎಂದು ಮುಗ್ಧ ಯೋಚಿಸಿ ತಾನೂ ಹಸಿವಿನಿಂದ ಅಳುತ್ತಾ ಮಲಗಿದ್ದ.

ಗಂಟೆಗಟ್ಟಲೆ ರೈಲ್ವೆ ನಿಲ್ದಾಣದಲ್ಲಿದ್ದ ಜಿಆರ್‌ಪಿ ಸಿಬ್ಬಂದಿ ಮಹಿಳೆಯ ದೇಹದಲ್ಲಿ ಯಾವುದೇ ಚಲನವಲನ ಇಲ್ಲದಿರುವುದು ಮತ್ತು ಅಮಾಯಕರು ಮಲಗಿದ್ದನ್ನು ಕಂಡು ಬೆಚ್ಚಿಬಿದ್ದರು. ಆಕೆಯನ್ನು ವೈದ್ಯರ ಬಳಿಗೆ ಕರೆದೊಯ್ಯಲು ಸಿದ್ಧತೆ ನಡೆಸಿದಾಗ ಮಹಿಳೆ ಮೃತಪಟ್ಟಿರುವುದು ತಿಳಿದು ಬಂದಿದೆ.

ಮೃತಪಟ್ಟಾಕೆ ಭಿಕ್ಷುಕಿಯಾಗಿದ್ದು, ರೈಲ್ವೆ ನಿಲ್ದಾಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಿಕ್ಷೆ ಬೇಡುತ್ತಾ ಜೀವನ ನಡೆಸುತ್ತಿದ್ದಳು ಎಂದು ಹೇಳಲಾಗುತ್ತಿದೆ.

ಘಟನೆಯ ಬಗ್ಗೆ ಜಿಆರ್‌ಪಿ ಅಧಿಕಾರಿಗಳಿಗೆ ಮಾಹಿತಿ ನೀಡಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸದ್ಯ ಐದು ವರ್ಷದ ಮಗುವನ್ನು ಚೈಲ್ಡ್ ಲೈನ್ ತಂಡಕ್ಕೆ ಒಪ್ಪಿಸಲಾಗಿದೆ. ಮಗುವಿಗೆ ಏನನ್ನೂ ಮಾತನಾಡಲು ಸಾಧ್ಯವಾಗುತ್ತಿಲ್ಲ. ಹಲವು ದಿನಗಳಿಂದ ಸರಿಯಾದ ಆಹಾರ ಸಿಗದ ಕಾರಣ ಅಪೌಷ್ಟಿಕತೆಯೂ ಕಾಣುತ್ತಿದೆ. ಹೀಗಾಗಿ, ಅವನನ್ನು ಸದರ್ ಆಸ್ಪತ್ರೆಯಲ್ಲಿ ಕರೋನಾ ಮತ್ತು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಈಗ ಅವರ ಸ್ಥಿತಿ ಮೊದಲಿಗಿಂತ ಉತ್ತಮವಾಗಿದೆ ಎನ್ನಲಾಗಿದೆ.

BIGG NEWS : ರಾಜ್ಯಾದ್ಯಂತ ವರುಣಾರ್ಭಟಕ್ಕೆ 11 ಬಲಿ : 550 ಕ್ಕೂ ಹೆಚ್ಚು ಮನೆಗಳು ಜಲಾವೃತ

BIGG NEWS : ಡಿಸೆಂಬರ್ 5 ರಿಂದ 22 ರವರೆಗೆ ಬೀದರ್ ನಗರದಲ್ಲಿ `ಅಗ್ನಿಪಥ್ ನೇಮಕಾತಿ Rally’

BIGG NEWS : ರಾಜ್ಯದಲ್ಲಿ ಐಬಿ ಪಾರ್ಕ್ ನಿರ್ಮಾಣಕ್ಕೆ ಕ್ರಮ : ಇಂಧನ ಸಚಿವ ಸುನೀಲ್ ಕುಮಾರ್

Share.
Exit mobile version