ಬೈರುತ್: ಲೆಬನಾನ್ ನ ಬೈರುತ್ ನಲ್ಲಿ ಸೋಮವಾರ ಮುಂಜಾನೆ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದಾರೆ. ಸಂಘರ್ಷ ಉಲ್ಬಣಗೊಂಡ ನಂತರ ಇದೇ ಮೊದಲ ಬಾರಿಗೆ ಇಸ್ರೇಲ್ ಬೈರುತ್ ನ ವಸತಿ ಪ್ರದೇಶದ ಮೇಲೆ ದಾಳಿ ನಡೆಸಿದೆ.
ಬೈರುತ್ನ ಕೋಲಾ ಜಿಲ್ಲೆಯ ಅಪಾರ್ಟ್ಮೆಂಟ್ನ ಮೇಲಿನ ಮಹಡಿಯಲ್ಲಿ ಈ ದಾಳಿ ನಡೆದಿದೆ.
ಕೋಲಾ ಜಿಲ್ಲೆಯಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ತನ್ನ ಮೂವರು ನಾಯಕರು ಸಾವನ್ನಪ್ಪಿದ್ದಾರೆ ಎಂದು ಪ್ಯಾಲೆಸ್ತೀನ್ ಉಗ್ರಗಾಮಿ ಗುಂಪು ಪಾಪ್ಯುಲರ್ ಫ್ರಂಟ್ ಫಾರ್ ದಿ ಲಿಬರೇಶನ್ ಆಫ್ ಪ್ಯಾಲೆಸ್ಟೈನ್ (ಪಿಎಫ್ಎಲ್ಪಿ) ಹೇಳಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಭಾನುವಾರ ಸಂಜೆಯಿಂದ ಬೈರುತ್ನ ಉಪನಗರಗಳಲ್ಲಿ ಇಸ್ರೇಲಿ ಡ್ರೋನ್ಗಳು ದಾಳಿ ನಡೆಸುತ್ತಿವೆ ವರದಿಯಾಗಿದೆ.
ಬೈರುತ್ ಮೇಲೆ ದಾಳಿ ನಡೆಸಿದ ನಂತರ ಅವರು ಲೆಬನಾನ್ ನ ಬೆಕಾ ಪ್ರದೇಶದಲ್ಲಿ ದಾಳಿ ನಡೆಸುತ್ತಿದ್ದಾರೆ ಎಂದು ಇಸ್ರೇಲ್ ಸೇನೆಯನ್ನು ಉಲ್ಲೇಖಿಸಿ ಇಸ್ರೇಲ್ ಪತ್ರಿಕೆ ಇಸ್ರೇಲ್ ಹಯೋಮ್ ವರದಿ ಮಾಡಿದೆ.
ಇಸ್ರೇಲ್-ಹಿಜ್ಬುಲ್ಲಾ ಯುದ್ಧ- ಇತ್ತೀಚಿನ ಬೆಳವಣಿಗೆಗಳು
ಭಾನುವಾರ ಸಂಜೆ ಪಶ್ಚಿಮ ಗೆಲಿಲಿ ಮತ್ತು ಹೈಫಾ ಸೇರಿದಂತೆ ಉತ್ತರ ಇಸ್ರೇಲ್ನ ಹಲವಾರು ನಗರಗಳಲ್ಲಿ ಸೈರನ್ಗಳು ಕೇಳಿಸಿದವು.
ಲೆಬನಾನ್ ನಿಂದ ಉಡಾಯಿಸಲಾದ ಒಂದೇ ಕ್ಷಿಪಣಿಯಿಂದ ಸೈರನ್ ಗಳನ್ನು ಪ್ರಚೋದಿಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಹೇಳಿದೆ, ಇದನ್ನು ವಾಯು ರಕ್ಷಣಾ ವ್ಯವಸ್ಥೆ ಯಶಸ್ವಿಯಾಗಿ ತಡೆದಿದೆ.