ಕೋಲಾರ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಉಂಟಾದಂತ ಅಪಘಾತದಲ್ಲಿ ನಾಲ್ವರು ದುರ್ಮರಣ ಹೊಂದಿರುವಂತ ಘಟನೆ ಕೋಲಾರದಲ್ಲಿ ನಡೆದಿದೆ. ಒಂದೇ ಕುಟುಂಬದ ಇಬ್ಬರು ಮಕ್ಕಳು ದುರಂತ ಅಂತ್ಯ ಕಂಡಿದ್ದಾರೆ.
ಕೋಲಾರದಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಅಪಘಾತಗೊಂಡ ಹಿನ್ನಲೆಯಲ್ಲಿ ಗರ್ಭಿಣಿಯ ಹೊಟ್ಟೆಯಲ್ಲಿದ್ದಂತ 8 ತಿಂಗಳ ಮಗು ಹಾಗೂ ಎರಡು ವರ್ಷದ ಮತ್ತೊಬ್ಬ ಮಗು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಒಂದೇ ತಾಯಿಯ ಇಬ್ಬರು ಮಕ್ಕಳು ದುರಂತ ಅಂತ್ಯ ಕಂಡಿದ್ದಾರೆ.
ಇನ್ನೂ 8 ತಿಂಗಳ ಗರ್ಭಿಣಿಯಾಗಿದ್ದಂತ ಸುಶ್ಮಿತಾ ಎಂಬುವರ ಗರ್ಭದಲ್ಲಿದ್ದಂತ ಮಗು ಕೂಡ ಸಾವನ್ನಪ್ಪಿದೆ. ತಾಯಿ ಸುಶ್ಮಿತಾ ಸ್ಥಿತಿ ಗಂಭೀರವಾಗಿದೆ. ಗಾಯಾಳುವನ್ನು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಅಂದಹಾಗೇ ಸುಶ್ಮಿತಾ 7 ವರ್ಷದ ಹಿಂದೆ ಮದುವೆಯಾಗಿದ್ದರು. ಅವರೀಗ 8 ತಿಂಗಳ ಗರ್ಭಿಣಿಯಾಗಿದ್ದರು. ಇಂದು ನಡೆದಂತ ಅಪಘಾತದಲ್ಲಿ ಮಗು ಗರ್ಭದಲ್ಲೇ ಸಾವನ್ನಪ್ಪಿದ್ದರೇ, ಮತ್ತೋರ್ವ 2 ವರ್ಷದ ಮಗು ಕೂಡ ಅವಘಾತದಲ್ಲಿ ಸಾವನ್ನಪ್ಪಿದ್ದಾನೆ. ಈ ದುರಂತ ಕುಟುಂಬಸ್ಥರಿಗೆ ಬರಸಿಡಿಲು ಬಡಿದಂತೆ ಆಗಿದೆ.
ಬೆಂಗಳೂರಿನ ‘ಪೂರ್ವ ನಿಲ್ದಾಣ’ದಿಂದ ಪ್ರಯಾಣಿಕರ ಸಂಚಾರಕ್ಕೆ ತಾತ್ಕಾಲಿಕ ತಡೆ: ನೈರುತ್ಯ ರೈಲ್ವೆ ಮಾಹಿತಿ
BREAKING : ಪತ್ನಿಯ ಕಾಟಕ್ಕೆ ಮತ್ತೊಂದು ಬಲಿ : ಕಲಬುರ್ಗಿಯಲ್ಲಿ ನೇಣು ಬಿಗಿದುಕೊಂಡು ಪತಿ ಆತ್ಮಹತ್ಯೆ ಶರಣು!