ಹೈದರಾಬಾದ್: ನಾಲ್ವರು ಮಕ್ಕಳು ಕೆರೆಯಲ್ಲಿ ಈಜಲು ಹೋಗಿ ನೀರುಪಾಲಾದ ಘಟನೆ ರಂಗಾರೆಡ್ಡಿ ಜಿಲ್ಲೆಯ ಯಾಚರಂ ಮಂಡಲದ ತಾಡಿಪರ್ತಿ ಗ್ರಾಮದಲ್ಲಿ ಭಾನುವಾರ ಈ ದುರ್ಘಟನೆ ನಡೆದಿದೆ.
ಕಳೆದ ವಾರ ರಂಗಾರೆಡ್ಡಿ ಜಿಲ್ಲೆಯಲ್ಲಿ ಸಾಹಸೋದ್ಯಮಕ್ಕೆಂದು ಅಗೆದಿದ್ದ ಹೊಂಡಕ್ಕೆ ಮೂವರು ಮಕ್ಕಳು ಬಿದ್ದು ಮೃತಪಟ್ಟಿದ್ದರು. ಈ ಘಟನೆ ಮಾಸುವ ಮುನ್ನವೇ ಒಂದು ವಾರದ ನಂತರ, ಈ ದುರಂತ ಸಂಭವಿಸಿದೆ.
ಈ ನಾಲ್ವರು ಮನೆಗೆ ಹೋಗುವ ವೇಳೆ ಎರ್ರಗುಂಟಾ ಹೊಂಡಕ್ಕೆ ಈಜಲು ಇಳಿದಿದ್ದಾರೆ. ಇವರಿಗೆ ಈಜು ಬರದ ಕಾರಣ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಮೃತರನ್ನು ಇಮ್ರಾನ್(9), ರೆಹಾನ್(10), ಖಾಲಿದ್ (12) ಮತ್ತು ಸಮ್ರೀನ್ (14) ಎಂದು ಗುರುತಿಸಲಾಗಿದೆ.
ಮಕ್ಕಳ ಸಾವಿನ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಕೆರೆಯಲ್ಲಿ ಆಟವಾಡಲು ಹೋಗಿದ್ದ ಮಕ್ಕಳು ಹೆಣವಾಗಿ ಹೊರ ಬಂದಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
BIGG NEWS : ರಾಜ್ಯದ ಜನತೆಗೆ ಇಂಧನ ಸಚಿವರಿಂದ ಗುಡ್ ನ್ಯೂಸ್ : ವಿದ್ಯುತ್ ದರ ಏರಿಕೆ ನಿಯಮ ವಾಪಸ್ ಗೆ ಚಿಂತನೆ
BREAKING NEWS : ರಾಯಚೂರಿನಲ್ಲಿ ಮಳೆಯಿಂದಾಗಿ ಘೋರ ದುರಂತ : ಮನೆಗೋಡೆ ಕುಸಿದು ಮೂವರು ಸ್ಥಳದಲ್ಲೇ ಸಾವು