ಬೆಂಗಳೂರು: ನಗರದಲ್ಲಿ ಐಪಿಎಲ್ ಟಿಕೆಟ್ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಂತ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದ ಬಳಿಯಲ್ಲಿ ಐಪಿಎಲ್ ಟಿಕೆಟ್ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಂತ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಚರಣ್ ರಾಜ್, ಹರ್ಷವರ್ಧನ್ ಸಕ್ಲೇಚ, ವಿನಯ್, ವೆಂಕಟಸಾಯಿ ಎಂಬುದಾಗಿ ಗುರುತಿಸಲಾಗಿದೆ. ನಿನ್ನೆ ಬಂಧಿಸಿ 32 ಟಿಕೆಟ್, 1 ಲಕ್ಷ ನಗದು ಜಪ್ತಿ ಮಾಡಲಾಗಿತ್ತು. 1,200 ಬೆಲೆಯ ಟಿಕೆಟ್ 12 ಸಾವಿರ ರೂಪಾಯಿಗೆ ಚರಣ್ ಗೆ ಮಾರಾಟ ಮಾಡಲಾಗಿತ್ತು.
10,500 ರೂಪಾಯಿ ನೀಡಿ ಹರ್ಷವರ್ಧನ್ ನಿಂದ ಐಪಿಎಲ್ ಟಿಕೆಟ್ ಅನ್ನು ಚರಣ್ ಖರೀದಿಸಿದ್ದರು. ಈ ಕುರಿತಂತೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಳಿಕ ವಿನಯ್ ಹಾಗೂ ವೆಂಕಟಸಾಯಿ ಬಂಧಿಲಾಗಿತ್ತು. ಆರ್ ಸಿ ಬಿ, ಸಿ ಎಸ್ ಕೆ ಪಂದ್ಯದ ಟಿಕೆಟ್ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದರು. ಈ ಮಾಹಿತಿ ಆಧರಿಸಿ ಇಂದು ದಾಳಿ ನಡೆಸಿ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ರಕ್ತಕ್ಕೆ ರಕ್ತವೇ ಉತ್ತರ, ಸುಹಾಸ್ ಹತ್ಯೆ ಬಳಿಕ ಪ್ರತೀಕಾರದ ಪೋಸ್ಟ್: 12 ಎಫ್‌ಐಆರ್ ದಾಖಲು
ದ್ವಿತೀಯ ಪಿಯುಸಿ ಪಾಸ್ ಆಗಿದ್ದೀರಾ.? ಈ ಫ್ಯಾಶನ್ ಡಿಸೈನ್ ಪದವಿ ಕೋರ್ಸ್ ಗೆ ಅರ್ಜಿ ಸಲ್ಲಿಸಿ