ಬೆಂಗಳೂರು: ನಗರದಲ್ಲಿ ಸಿಬಿಐ ಪೊಲೀಸರೆಂದು ವಿದ್ಯಾರ್ಥಿಗಳನ್ನು ಹೆದರಿಸಿ, ಹಣ ಸುಲಿಗೆ ಮಾಡುತ್ತಿದ್ದಂತ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಬೆಂಗಳೂರು ನಗರ ಪೊಲೀಸರು ಮಾಹಿತಿ ಹಂಚಿಕೊಂಡಿದ್ದು, ದಿನಾಂಕ 27-05-2024 ರಂದು ಪಿರಾದುದಾರರು ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಹೆಸರಘಟ್ಟ ಮುಖ್ಯರಸ್ತೆ, ಎ.ಜಿ.ಬಿ ಲೇಔಟ್‌ನ ತಮ್ಮ ನಿವಾಸದಲ್ಲಿ ರಾತ್ರಿ ತನ್ನ ಸ್ನೇಹಿತರೊಂದಿಗೆ ಮನೆಯಲ್ಲಿದ್ದಾಗ ಯಾರೋ 3 ಜನ ಅಪರಿಚಿತರು ಏಕಾಏಕಿ ನಮ್ಮ ರೂಮಿಗೆ ನುಗ್ಗಿ ಸಿಬಿಐ ಪೊಲೀಸರೆಂದು ಹೇಳಿ, ತಮ್ಮ ಬಳಿಯಿದ್ದ ಪಿಸ್ತೂಲ್, ಐ.ಡಿ.ಕಾರ್ಡ್, ಲಾಟಿಗಳನ್ನು ತೋರಿಸಿ ಕೈಗಳಿಂದ ಹೊಡೆದು ಅವರು ತಂದಿದ್ದ ಗಾಂಜಾವನ್ನು ತಮ್ಮಗಳ ಕೈಗೆ ಕೊಟ್ಟು ವಿಡಿಯೋ ಮಾಡಿಕೊಂಡು 3 ಲಕ್ಷ ಹಣವನ್ನು ಕೊಡಿ ಇಲ್ಲವಾದರೆ ವಿಡಿಯೋ ಮಾಡುತ್ತೇವೆಂದು ಹೆದರಿಸಿರುತ್ತಾರೆ ಎಂದು ದೂರು ನೀಡಿದ್ದಾರೆ.
ದೂರಿನಲ್ಲಿ ಪಿದ್ಯಾದಿಯಿಂದ ಮೊಬೈಲ್ ಕಿತ್ತುಕೊಂಡು ಬಂದಿದ್ದ ಅಪರಿಚಿತ ವ್ಯಕ್ತಿಯೊಬ್ಬನ ಯುಪಿಐ ಐಡಿಗೆ ಸುಮಾರು 90,000/- ಗಳ ಹಣವನ್ನು ವರ್ಗಾಹಿಸಿಕೊಂಡು ನಂತರ ಮೊಬೈಲ್ ಫೋನ್‌ಅನ್ನು ಕೊಟ್ಟು ಉಳಿದ ಹಣವನ್ನು ನಾಳೆ ಸಂಜೆಯೊಳಗೆ ನೀಡಬೇಕೆಂದು ಹೇಳಿ ಅಲ್ಲಿಂದ ಪರಾರಿಯಾಗಿದ್ದು, ಪಿತ್ಯಾದಿಯಿಂದ ಹಣ ಸುಲಿಗೆ ಮಾಡಿದ ಆರೋಪಿಗಳ ವಿರುದ್ಧ ನೀಡಿದ ದೂರಿನ ಮೇರೆಗೆ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿರುತ್ತದೆ ಎಂದಿದೆ.
ಈ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಕೃತ್ಯ ನಡೆದ ಸ್ಥಳದ ಅಕ್ಕ ಪಕ್ಕದಲ್ಲಿರುವ ಸಿ.ಸಿ.ಟಿ.ವಿ ಕ್ಯಾಮರಾಗಳನ್ನು ಪರಿಶೀಲಿಸಿ, ಕೃತ್ಯದಲ್ಲಿ ಭಾಗಿಯಾಗಿದ್ದ 4 ಜನ ಅಂತರ ರಾಜ್ಯ ವ್ಯಕ್ತಿಗಳನ್ನು, ಪ್ರಕರಣ ದಾಖಲಾದ 12 ಗಂಟೆಯೊಳಗೆ ವಶಕ್ಕೆ ಪಡೆದುಕೊಂಡಿರುತ್ತಾರೆ. ಅವರುಗಳಿಂದ ಕೃತ್ಯಕ್ಕೆ ಬಳಸಿದ್ದ 1-ಮಹೇಂದ್ರ ಎಕ್ಸ್‌ಯುವಿ ಕಾರು, 1-ಹೊಂಡೆ ಐ20 ಕಾರು, 1-ಏರ್ ಪಿಸ್ತೂಲ್, 1- ಕೈ ಕೋಳ, 1-ಲಾಟಿ, 3-ಸಿಬಿಐ ಟ್ರಸ್ಟ್, ಐ.ಡಿ. ಕಾರ್ಡ್, 1-ಬ್ಯಾಟನ್, 4-ವಿವಿಧ ಕಂಪನಿಯ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ ಎಂದು ತಿಳಿಸಿದೆ.
ಈ ಪ್ರಕರಣದಲ್ಲಿ ವಶಕ್ಕೆ ಪಡೆದಿರುವ ವ್ಯಕ್ತಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಈ ವ್ಯಕ್ತಿಗಳು ಮೂಲತಃ ಕೇರಳ ರಾಜ್ಯದವರಾಗಿದ್ದು, ಅದರಲ್ಲಿ ಒಬ್ಬ ವ್ಯಕ್ತಿ ಕೇರಳ ರಾಜ್ಯದ ತಿರುವನಂತಪುರಂನಲ್ಲಿ ಹೋಟೆಲ್ ಬಿಜಿನೆಸ್ ಮಾಡಿಕೊಂಡಿದ್ದು, ತನ್ನ ತಂಗಿಯನ್ನು ಬೆಂಗಳೂರಿಗೆ ಕೊಟ್ಟು ಮದುವೆ ಮಾಡಿದ್ದು, ಆಕೆಯ ಮನೆಗೆ ಆಗಾಗ್ಗೆ ಬಂದು ಹೋಗುತ್ತಿದ್ದಾಗ ಆತನ ಪಕ್ಕದ ಊರಿನ ಇಬ್ಬರು ವ್ಯಕ್ತಿಗಳು ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದು ಅವರುಗಳ ಪರಿಚಯವಿರುತ್ತದೆ. ಅವನೊಂದಿಗೆ ಕೇರಳದಿಂದ ಮತ್ತೊಬ್ಬ ವ್ಯಕ್ತಿಯನ್ನು ಜೊತೆಯಲ್ಲಿ ಕರೆದುಕೊಂಡು ಬೆಂಗಳೂರಿಗೆ ಬಂದು ಇಲ್ಲಿ ವ್ಯಾಸಂಗ ಮಾಡುತ್ತಿದ್ದ ಆ ಇಬ್ಬರು ವ್ಯಕ್ತಿಗಳ ಜೊತೆಯಲ್ಲಿ ಸೇರಿ 4 ಜನರು ಕೇರಳ ರಾಜ್ಯ ವಿದ್ಯಾರ್ಥಿಗಳು ವಾಸವಿರುವ ಸ್ಥಳಗಳನ್ನು ತಿಳಿದುಕೊಂಡು ಅವರುಗಳನ್ನು ಸಿಬಿಐ ಪೊಲೀಸರೆಂದು ಹೆದರಿಸಿ ಸುಲಭವಾಗಿ ಹಣ ವಸೂಲಿ ಮಾಡಬಹುದೆಂದು ಈ ಕೃತ್ಯವೆಸಗಿರುವುದಾಗಿ ತನಿಖೆಯಿಂದ ತಿಳಿದು ಬಂದಿರುತ್ತದೆ ಎಂದಿದೆ.
ಈ ಪ್ರಕರಣದಲ್ಲಿ ಬೆಂಗಳೂರು ನಗರ, ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಸೈದುಲು ಅಡಾವತ್ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ, ಮೇರಿ ಶೈಲಜ, ಎಸಿಪಿ, ಯಶವಂತಪುರ ಉಪ ವಿಭಾಗ ಮತ್ತು ಜಿ.ಎನ್. ನಾಗೇಶ್, ಪೊಲೀಸ್ ಇನ್ಸ್ಪೆಕ್ಟರ್, ಸೋಲದೇವನಹಳ್ಳಿ ಪೊಲೀಸ್ ಠಾಣೆ ರವರ ನೇತೃತ್ವದ ತಂಡ ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ ಎಂದು ಹೇಳಿದೆ.
BREAKING: ಬೆಂಗಳೂರಲ್ಲಿ ‘ಗ್ಯಾಸ್ ಸಿಲಿಂಡರ್’ ಸ್ಪೋಟಗೊಂಡು ಭೀಕರ ದುರಂತ: ಐವರಿಗೆ ಗಂಭೀರ ಗಾಯ
ಗೂಗಲ್ ನಿಂದ ಮಲೇಷ್ಯಾದಲ್ಲಿ 2 ಬಿಲಿಯನ್ ಡಾಲರ್ ಹೂಡಿಕೆ, 2030ರ ವೇಳೆಗೆ 26,000 ಉದ್ಯೋಗ ಸೃಷ್ಟಿ!