ಸಿಯೋಲ್: ಕೊರಿಯಾದ ಮಾಜಿ ಅಧ್ಯಕ್ಷ ಮೂನ್ ಜೇ-ಇನ್ ವಿರುದ್ಧ ವಿಮಾನಯಾನ ಸಂಸ್ಥೆಯಲ್ಲಿ ಅಳಿಯನ ಉದ್ಯೋಗಕ್ಕೆ ಸಂಬಂಧಿಸಿದ ಭ್ರಷ್ಟಾಚಾರದ ಆರೋಪ ಹೊರಿಸಲಾಗಿದೆ ಎಂದು ಪ್ರಾಸಿಕ್ಯೂಟರ್ ಗಳು ಗುರುವಾರ ತಿಳಿಸಿದ್ದಾರೆ.
ವಿಮಾನಯಾನ ಸಂಸ್ಥೆಯಲ್ಲಿ ತನ್ನ ಅಳಿಯನ ಉದ್ಯೋಗಕ್ಕೆ ಅನುಕೂಲವಾಗುವಂತೆ 217 ಮಿಲಿಯನ್ ವೋನ್ (150,000 ಯುಎಸ್ಡಿ) ಪಡೆದ ಆರೋಪದ ಮೇಲೆ ಮೂನ್ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಲಾಗಿದೆ ಎಂದು ಜಿಯೋಂಜು ಜಿಲ್ಲಾ ಪ್ರಾಸಿಕ್ಯೂಟರ್ಗಳ ಕಚೇರಿ ಎಎಫ್ಪಿಗೆ ತಿಳಿಸಿದೆ.