ನವದೆಹಲಿ: ಭಾರತೀಯ ವೈದ್ಯಕೀಯ ಸಂಘ (IMA) ಆರ್ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರ ಸದಸ್ಯತ್ವವನ್ನ ರದ್ದುಗೊಳಿಸಿದೆ ಎಂದು ವರದಿಯಾಗಿದೆ.
ಆಗಸ್ಟ್ 9ರಂದು ಸರ್ಕಾರಿ ಆಸ್ಪತ್ರೆಯ ಸೆಮಿನಾರ್ ಹಾಲ್’ನಲ್ಲಿ 31 ವರ್ಷದ ತರಬೇತಿ ವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಕೆಲವು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.
ಘಟನೆ ನಡೆದ ಒಂದು ದಿನದ ನಂತರ, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ನಾಗರಿಕ ಸ್ವಯಂಸೇವಕ ಸಂಜಯ್ ರಾಯ್ ಬಂಧಿಸಲಾಗಿದೆ. ಘಟನೆ ನಡೆದ ದಿನ ಮುಂಜಾನೆ 4.03ಕ್ಕೆ ರಾಯ್ ಸೆಮಿನಾರ್ ಹಾಲ್ ಪ್ರವೇಶಿಸುವುದನ್ನ ವೀಡಿಯೊ ತೋರಿಸಿದೆ.
ರಾಜ್ಯದ ಜನತೆಗೆ ಗುಡ್ ನ್ಯೂಸ್: ‘ಸರ್ಕಾರಿ ಆಸ್ಪತ್ರೆ’ಗಳಲ್ಲಿ ‘ರೋಬೋಟಿಕ್’ ಸೌಲಭ್ಯ | Government Hospital
ರಾಜ್ಯದ ಜನತೆಗೆ ಗುಡ್ ನ್ಯೂಸ್: ‘ಸರ್ಕಾರಿ ಆಸ್ಪತ್ರೆ’ಗಳಲ್ಲಿ ‘ರೋಬೋಟಿಕ್’ ಸೌಲಭ್ಯ | Government Hospital