ರಾಯಚೂರು : ರಾಜ್ಯಸಭಾ ಮಾಜಿ ಸದಸ್ಯ ಅಬ್ದುಲ್ ಸಮದ್ ಸಿದ್ದೀಖಿ (87) ನಿಧನ ಹೊಂದಿದ್ದಾರೆ. ಇವರು ರಾಯಚೂರಿನ ಅಬ್ದುಲ್ ಸಮದ್ ಸಿದ್ದೀಖಿ (Abdul Samad Siddiqui) 1988-1994ರವರೆಗೆ ರಾಜ್ಯ ಸಭಾ ಸದಸ್ಯರಾಗಿದ್ದರು.
BIGG NEWS : ಭಾರತಕ್ಕೆ ಆಗಮಿಸುವ ‘ಅಂತಾರಾಷ್ಟ್ರೀಯ ಪ್ರಯಾಣಿಕ’ರಿಗೆ ಹೊಸ ಮಾರ್ಗಸೂಚಿ | Covid Rules
ಅಲ್ಲದೆ ಜಿಲ್ಲೆಯಲ್ಲಿ ಜನತಾದಳ ಪಕ್ಷ ಕಟ್ಟಲು ಮುಂದಾಳತ್ವ ವಹಿಸಿದ್ದರು. ಇದೀಗ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಹೈದರಾಬಾದ್ (Hyderabad) ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ ಕೊನೆಯುಸಿರೆಳೆದರು.
BIGG NEWS : ಭಾರತಕ್ಕೆ ಆಗಮಿಸುವ ‘ಅಂತಾರಾಷ್ಟ್ರೀಯ ಪ್ರಯಾಣಿಕ’ರಿಗೆ ಹೊಸ ಮಾರ್ಗಸೂಚಿ | Covid Rules
ಅಬ್ದುಲ್ ಸಮದ್ ಸಿದ್ದೀಖಿ ರಾಯಚೂರು ನಗರದಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ನ್ಯೂ ಎಜುಕೇಶನ್ ಸೊಸೈಟಿ ಅಡಿಯಲ್ಲಿ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳನ್ನು ಪ್ರಾರಂಭಿಸಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಾರಣೀಭೂತರಾಗಿದ್ದರು.
BIGG NEWS : ಭಾರತಕ್ಕೆ ಆಗಮಿಸುವ ‘ಅಂತಾರಾಷ್ಟ್ರೀಯ ಪ್ರಯಾಣಿಕ’ರಿಗೆ ಹೊಸ ಮಾರ್ಗಸೂಚಿ | Covid Rules
ಅಲ್ಲದೇ ರಾಯಚೂರಿನಲ್ಲಿ ಸಫೀಯಾ ಸಂಸ್ಥೆ ಮೂಲಕ ಮಹಿಳೆಯರಿಗೆ ಡಿ.ಎಡ್. ಕಾಲೇಜು ಸ್ಥಾಪಿಸಿದ್ದರು.ಜನತಾದಳದಿಂದ 1988 ರಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿ 1994 ರ ವರೆಗೆ ಕಾರ್ಯನಿರ್ವಹಿಸಿದ್ದರು. ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪತ್ರಿಯರು ಮತ್ತು ಮೊಮ್ಮಕ್ಕಳನ್ನು ಬಿಟ್ಟು ಅಗಲಿದ್ದಾರೆ. ಇಂದು ರಾಯಚೂರು ನಗರದ ಶೇಖಮಿಯಾ ಬಾಬಾ ಖಬರಸ್ಥಾನದಲ್ಲಿ ಸಿದ್ದೀಖಿ ಅಂತ್ಯಕ್ರಿಯೆ ನಡೆಯಲಿದೆ
BIGG NEWS : ಭಾರತಕ್ಕೆ ಆಗಮಿಸುವ ‘ಅಂತಾರಾಷ್ಟ್ರೀಯ ಪ್ರಯಾಣಿಕ’ರಿಗೆ ಹೊಸ ಮಾರ್ಗಸೂಚಿ | Covid Rules