ಬೆಂಗಳೂರು: ಈಗ ಇರುವಂತ ತೆನೆ ಹೊತ್ತ ಮಹಿಳೆಯು ರಾಜ್ಯ ಜಾತ್ಯಾತೀತ ಜನತಾ ದಳದ ಚಿಹ್ನೆಯಾಗಿದೆ. ಇಂತಹ ಚಿಹ್ನೆಯಲ್ಲಿ ಕೆಲ ಬದಲಾವಣೆ ಮಾಡೋದಕ್ಕೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ನಿನ್ನೆ ಬೆಂಗಳೂರಿನಲ್ಲಿ ನಡೆದಂತ ಜೆಡಿಎಸ್ ಕೋರ್ ಕಮಿಟಿ ಸಭೆಯಲ್ಲಿ ಈ ಪ್ರಸ್ತಾಪವನ್ನು ಮಾಡಿರೋದಾಗಿ ಹೇಳಲಾಗುತ್ತಿದೆ. ಪ್ರಸ್ತುತ ಇರುವಂತ ಜೆಡಿಎಸ್ ಪಕ್ಷದ ತೆನೆ ಹೊತ್ತ ಮಹಿಳೆಯ ಚಿತ್ರದ ಜೊತೆಗೆ ಚಕ್ರದ ಗುರುತನ್ನು ಸೇರಿಸೋದಕ್ಕೆ ಗಂಭೀರ ಚರ್ಚೆಯನ್ನು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ ಜನತಾದಳ ಅವಿಭಜಿತವಾಗಿದ್ದಾಗ ಚಕ್ರವು ಪಕ್ಷದ ಪ್ರಮುಖ ಗುರುತಾಗಿತ್ತು. ಇದೇ ಗುರುತನ್ನು ಈಗಿನ ತೆನೆ ಹೊತ್ತ ಮಹಿಳೆಯ ಜೊತೆಗೆ ಸೇರಿಸೋದಕ್ಕೆ ಮುಂದಾಗಿದೆ ಎನ್ನಲಾಗುತ್ತಿದೆ. ಇದರಿಂದ ರೈತ ಮತ್ತು ಪ್ರಗತಿಯ ಸಂಕೇತಗಳನ್ನು ಒಟ್ಟುಗೂಡಿಸಿದಂತೆ ಆಗಲಿದೆ ಎಂಬುದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರ ಚಿಂತನೆ ಎನ್ನಲಾಗಿದೆ.
ಅಂದಹಾಗೇ ಜೆಡಿಎಸ್ ಪಕ್ಷದ ತೆನೆ ಹೊತ್ತ ಮಹಿಳೆಯ ಚಿಹ್ನೆಯ ಜೊತೆಗೆ ಚಕ್ರವನ್ನು ಸೇರಿಸುವುದರಿಂದ ಪಕ್ಷದ ಇತಿಹಾಸ, ಸಿದ್ಧಾಂತವನ್ನು ಜನರಿಗೆ ತಿಳಿಸಿಕೊಟ್ಟಂತೆ ಆಗಲಿದೆ ಎಂಬುದು ಹಲವು ಮುಖಂಡರ ಅಭಿಪ್ರಾಯ ಕೂಡ ಆಗಿದೆ ಎನ್ನಲಾಗುತ್ತಿದೆ. ಹೀಗಾಗಿ ಪಕ್ಷದ ಚಿಹ್ನೆಯಲ್ಲಿ ಜೆಡಿಎಸ್ ಪರಿಷ್ಠ ಹೆಚ್.ಡಿ ದೇವೇಗೌಡ ಬದಲಾವಣೆಗೆ ಮಾರ್ಪಾಡಿಗೆ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.








