ಬೆಂಗಳೂರು : ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಈ ವೇಳೆ ಕೋರ್ಟ್ ಎರಡು ಕಡೆಯ ವಕೀಲದಿಂದ ಕೆಲವು ಸ್ಪಷ್ಟೀಕರಣ ಕೇಳಿತು. ತೀರ್ಪನ್ನು ಆಗಸ್ಟ್ 1ಕ್ಕೆ ಮುಂದೂಡಿಕೆ ಮಾಡಲಾಗಿದೆ.
ಗೂಗಲ್ ಮ್ಯಾಪ್ ಅನ್ನು ಸಾಕ್ಷಿಯಾಗಿ ಪರಿಗಣಿಸಬಹುದೇ? ಸ್ಯಾಮ್ಸಂಗ್ ಜೆ ಫೋರ್ ಮೊಬೈಲ್ ಸೀಜ್ ಮಾಡಿರುವ ಬಗ್ಗೆ ಕೋರ್ಟ್ ವಕೀಲರಿಗೆ ವಿವರಣೆ ಕೇಳಿತು. ಹೊಳೆನರಸೀಪುರದ ಫಾರ್ಮ ಹೌಸ್ ಸ್ಥಳ ತೋರಿಸಲು ಗೂಗಲ್ ಮ್ಯಾಪ್ ಆಧರಿಸಿ ಎರಡು ಕಡೆ ವಕೀಲರು ವಾದಿಸಿದ್ದರು. ಗೂಗಲ್ ಸಂಸ್ಥೆಯಿಂದ ಅಧಿಕೃತ ಮಾಹಿತಿ ಇಲ್ಲದ ದಾಖಲೆ ಪರಿಗಣಿಸಬಹುದೇ ಎಂದು ಜಡ್ಜ್ ಸಂತೋಷ ಗಜಾನನ ಭಟ್ ಈ ಬಗ್ಗೆ ಪ್ರಶ್ನಿಸಿದರು.ವಿವರಣೆ ನೀಡುವಂತೆ ಸೂಚಿಸಿ ವಿಚಾರಣೆಯನ್ನು ಕೆಲಕಾಲ ಮುಂದೂಡಿತು.ಇದೆ ವೇಳೆ ಕೋರ್ಟ್ ಮುಂದೆ ಪ್ರಜ್ವಲ್ ರೇವಣ್ಣ ಹಾಜರಾಗಿದ್ದರು. ಪದೇ ಪದೇ ಕಣ್ಣು ಮುಚ್ಚಿ ಪ್ರಜ್ವಲ್ ರೇವಣ್ಣ ಮಂತ್ರ ಪಠಿಸುತ್ತಿದ್ದರು.
ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಇಂದು ಮಹತ್ವದ ದಿನವಾಗಿದೆ. ಕೆ.ಆರ್ ನಗರ ಮಹಿಳೆಯ ಅತ್ಯಾಚಾರ ಪ್ರಕರಣದ ಸಂಬಂಧ ಇಂದು ತೀರ್ಪನ್ನು ಕೋರ್ಟ್ ಪ್ರಕಟಿಸಲಿದೆ. ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ.ಈ ನಡುವೆ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಕೆ.ಆರ್ ನಗರ ಮಹಿಳೆಯ ಅತ್ಯಾಚಾರ ಪ್ರಕರಣದ ವಾದ ಪ್ರತಿ ವಾದವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಡೆಸಿತ್ತು. ಇದೀಗ ಈ ಪ್ರಕರಣದಲ್ಲಿ ಕಾಯ್ದಿರಿಸಿದ್ದಂತ ತೀರ್ಪನ್ನು ಆಗಸ್ಟ್ 1 ಕ್ಕೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಪ್ರಕಟಿಸಲಿದೆ.