ದಾವಣಗೆರೆ : ಪಂಚಮಸಾಲಿಯ ರಾಜ್ಯಾಧ್ಯಕ್ಷ ಆಗಿದ್ದಕ್ಕೆ ಬಿಜೆಪಿಯ ಮಾಜಿ ಸಚಿವ ಮುರುಗೇಶ್ ನಿರಾಣಿಗೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹಣಗವಾಡಿ ಗ್ರಾಮದಲ್ಲಿ ಹರ ಜಾತ್ರೆಯ ವೇಳೆ ಕಾರು ಗಿಫ್ಟ್ ನೀಡಲಾಯಿತು. ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಇಬ್ಬರ ಮೇಲೆ ಕೆಲವರು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.
ಹೌದು ಹರ ಜಾತ್ರೆಯಲಿ ಕಾರು ಗಿಫ್ಟ್ ನೀಡಿದ ವಿಚಾರಕ್ಕೆ ಇದೀಗ ಗಲಾಟೆ ನಡೆದಿದ್ದು, ಮಾಜಿ ಸಚಿವ ಮುರುಗೇಶ್ ನಿರಾಣಿಗೆ ಈ ಒಂದು ಕಾರು ಉಡುಗೊರೆ ನೀಡಲಾಗಿದೆ. ಪಂಚಮಸಾಲಿಯ ರಾಜ್ಯಾಧ್ಯಕ್ಷ ಎಂದು ಕಾರನ್ನು ಗಿಫ್ಟಾಗಿ ನೀಡಲಾಗಿದೆ. ಕಾರು ಕೊಡುಗೆ ಬಗ್ಗೆ ಇಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಕ್ಷೇಪ ವ್ಯಕ್ತಪಡಿಸಿದವರನ್ನು ಕೆಲವರು ಥಳಿಸಿರುವ ಘಟನೆ ಹಣಗವಾಡಿ ಬಳಿಯ ಪಂಚಮಸಾಲಿ ಗುರುಪೀಠದಲ್ಲಿ ಹರ ಜಾತ್ರೆಯ ವೇಳೆ ನಡೆದಿದೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹಣಗವಾಡಿ ಗ್ರಾಮದಲ್ಲಿ ನಡೆದಿದೆ ಮಧ್ಯಪ್ರವೇಶಿಸಿ ಪೊಲೀಸರು ಇಬ್ಬರನ್ನು ಬಿಟ್ಟು ಕಳುಹಿಸಿದ್ದಾರೆ. ಹಲ್ಲೆಗೊಳಗಾದವನಿಗೆ ತಲೆಗೆ ಪೆಟ್ಟಾಗಿ ತೀವ್ರವಾಗಿ ಗಾಯಗೊಂಡಿದ್ದಾನೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.