ಮುಂಬೈ: ಮಹಾರಾಷ್ಟ್ರದ ಮಾಜಿ ಸಚಿವ ಅನಿಲ್ ದೇಶಮುಖ್ ಅವರು ಮುಂಬೈನ ಆರ್ಥರ್ ರೋಡ್ ಜೈಲಿನಿಂದ ಇಂದು ಬಿಡುಗಡೆಯಾಗಿದ್ದಾರೆ. ದೇಶಮುಖ್ ಅವರಿಗೆ ಬೆಂಬಲಿಗರು ವೀರೋಚಿತ ಸ್ವಾಗತ ಕೋರಿದರು.
ಅಕ್ಟೋಬರ್ 26 ರಂದು ಬಾಂಬೆ ಹೈಕೋರ್ಟ್ಗೆ ತೆರಳಿದ ನಂತರ ಸಿಬಿಐ ದೇಶಮುಖ್ ಅವರ ಜಾಮೀನು ಅರ್ಜಿಯನ್ನು ನಿರಾಕರಿಸಿತ್ತು.
ಅನಿಲ್ ದೇಶಮುಖ್ ಅವರನ್ನು ಜಾರಿ ನಿರ್ದೇಶನಾಲಯ ನವೆಂಬರ್ 2021 ರಲ್ಲಿ ಬಂಧಿಸಿತ್ತು. ರಾಜ್ಯ ಗೃಹ ಸಚಿವ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಕೆಲವು ಪೊಲೀಸ್ ಅಧಿಕಾರಿಗಳ ಮೂಲಕ ಮುಂಬೈನ ವಿವಿಧ ಬಾರ್ಗಳಿಂದ ₹ 4.70 ಕೋಟಿ ಸಂಗ್ರಹಿಸಿದ್ದಾರೆ ಎಂದು ಸಂಸ್ಥೆ ಹೇಳಿಕೊಂಡಿದೆ.