ಟೋಕಿಯೋ: ಜಪಾನಿನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರ ಅಂತ್ಯಕ್ರಿಯೆ ಕಾರ್ಯಕ್ರಮ ಪ್ರಾರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿಶ್ವದಾದ್ಯಂತದ ನಾಯಕರು ಉಪಸ್ಥಿತರಿದ್ದಾರೆ. ಜಪಾನ್ನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಅಂತ್ಯಕ್ರಿಯೆ ಮಂಗಳವಾರ ಟೋಕಿಯೋದ ನಿಪ್ಪಾನ್ ಬುಡೋಕನ್ ಹಾಲ್ನಲ್ಲಿ ಪ್ರಾರಂಭವಾಯಿತು. ಪ್ರಧಾನಿ ನರೇಂದ್ರ ಮೋದಿ, ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೆನ್ಸ್ ಸೇರಿದಂತೆ ಇತರ ನಾಯಕರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿಡಿದ್ದಾರೆ.
ಜಪಾನಿನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಅವರು ಟೋಕಿಯೋಗೆ ಆಗಮಿಸಿದ್ದಾರೆ. ಈ ದುಃಖದ ಸಮಯದಲ್ಲಿ ನಾವು ಇಂದು ಭೇಟಿಯಾಗುತ್ತಿದ್ದೇವೆ ಎಂದು ಪ್ರಧಾನಿ ಮೋದಿ ಅವರು ಕಂಬನಿ ಮಿಡಿದಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿಯವರು ಟ್ವಿಟ್ ಮಾಡಿದ್ದು, ಇಂದು, ಜಪಾನಿಗೆ ಬಂದ ನಂತರ, ನಾನು ಹೆಚ್ಚು ದುಃಖಿತನಾಗಿದ್ದೇನೆ, ಏಕೆಂದರೆ ನಾನು ಕೊನೆಯ ಬಾರಿಗೆ ಬಂದಾಗ, ನಾನು ಅಬೆ ಸಾನ್ ಅವರೊಂದಿಗೆ ಬಹಳ ದೀರ್ಘ ಸಂಭಾಷಣೆ ನಡೆಸಿದೆ ಇಲ್ಲಿಂದ ಹೊರಟುಹೋದ ಬಂದ ನಂತರ ನಾನು ಅವರ ಸಾವಿನ ಸುದ್ದಿ ಕೇಳಿರಲಿಲ್ಲ ಎಂದು ಎಂದಿಗೂ ಯೋಚಿಸಿ ಇರಲಿಲ್ಲ ಅಂತ ಹೇಳಿದ್ದಾರೆ.
BIG NEWS: ಚೀನಾದ ಗಡಿಯ ಬಳಿ ಫೈಟರ್ ಜೆಟ್-ಚಾಪರ್ಗಳನ್ನು ಹಾರಿಸಿದ ಭಾರತದ ಮಹಿಳಾ ಪೈಲಟ್ಗಳು
I will be conveying heartfelt condolences to Prime Minister Kishida and Mrs. Abe on behalf of all Indians. We will continue working to further strengthen India-Japan relations as envisioned by Abe San. @kishida230
— Narendra Modi (@narendramodi) September 26, 2022