ಬೆಂಗಳೂರು : ಇಸ್ರೋದ ಮಾಜಿ ಅಧ್ಯಕ್ಷರಾಗಿದ್ದ ಕೆ.ಕಸ್ತೂರಿ ರಂಗನ್ ಅವರು ಇಂದು ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.ಬೆಂಗಳೂರಿನಲ್ಲಿ ನಿವಾಸದಲ್ಲಿ ಕೆ. ಕಸ್ತೂರಿ ರಂಗನ್ (84) ನಿಧನರಾಗಿದ್ದಾರೆ 1994 ರಿಂದ 2003 ರ ವರೆಗೆ ಇಸ್ರೋ ಅಧ್ಯಕ್ಷರಾಗಿದ್ದರು. ಭಾರತೀಯ ಬಾಹ್ಯಾಕಾಶ ವಿಜ್ಞಾನಿ ಕೃಷ್ಣಸ್ವಾಮಿ ಕಸ್ತೂರಿರಂಗನ್ ಇದೀಗ ನಿಧನರಾಗಿದ್ದಾರೆ.
ಇಸ್ರೋ ಹೇಳಿಕೆಯ ಪ್ರಕಾರ, ಕಸ್ತೂರಿರಂಗನ್ ಅವರು ಬೆಳಿಗ್ಗೆ 10.43 ಕ್ಕೆ ನಿಧನರಾದರು. ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ರಾಮನ್ ಸಂಶೋಧನಾ ಸಂಸ್ಥೆಯಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಇರಿಸಲಾಗುವುದು.ಡಾ. ಕೆ. ಕಸ್ತೂರಿರಂಗನ್ ಅವರು ಆಗಸ್ಟ್ 27, 2003 ರಂದು ತಮ್ಮ ಹುದ್ದೆಯನ್ನು ತ್ಯಜಿಸುವ ಮೊದಲು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಬಾಹ್ಯಾಕಾಶ ಆಯೋಗದ ಅಧ್ಯಕ್ಷರು ಮತ್ತು ಭಾರತ ಸರ್ಕಾರದ ಬಾಹ್ಯಾಕಾಶ ಇಲಾಖೆ ಕಾರ್ಯದರ್ಶಿಯಾಗಿ 9 ವರ್ಷಗಳಿಗೂ ಹೆಚ್ಚು ಕಾಲ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮವನ್ನು ಅದ್ಭುತವಾಗಿ ಮುನ್ನಡೆಸಿದ್ದರು.