ಮಂಡ್ಯ : ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಆರೋಪ ಮಾಡಿರುವ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ವಿರುದ್ಧ ಕಾಂಗ್ರೆಸ್ ಶಾಸಕ ರವಿ ಗಣಿಗ ಆಕ್ರೋಶ ಹೊರ ಹಾಕಿದ್ದು, ಈ ಒಂದು ಪ್ರಕರಣದಲ್ಲಿ ಹಾಸನದ ಮಾಜಿ ಶಾಸಕನ ಕೈವಾಡವಿದೆ ಎಂದು ಆರೋಪಿಸಿದರು.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕೈವಾಡವಿದೆ ಎನ್ನುವುದಕ್ಕೆ ಸಾಕ್ಷಿ ತೋರಿಸಲಿ. ಡಿಕೆ ಶಿವಕುಮಾರ್ ಅವರ ಬಳಿ ನಿತ್ಯ ಸಾವಿರಾರು ಜನರು ಬರುತ್ತಾರೆ ಹೋಗುತ್ತಾರೆ. ದೇವರಾಜೇಗೌಡ, ಮಾಜಿ ಶಾಸಕ ಏಕೆ ಷಡ್ಯಂತ್ರ ಮಾಡಿರಬಾರದು? ಎಂದು ಪ್ರಶ್ನಿಸಿದರು.
ದೇವರಾಜೇಗೌಡ ಶಿವರಾಮೇಗೌಡ ಇಬ್ಬರು ಇರಬಹುದು ಅಲ್ಲವೇ? ಶಿವರಾಮೇಗೌಡರನ್ನು ಕಳುಹಿಸಿ ಯಾಕೆ ಷಡ್ಯಂತ್ರ ಮಾಡಿರಬಾರದು? ಪ್ರಜ್ವಲ್ ಸ್ಟೇ ತಂದಾಗ ದೇವರಾಜೇಗೌಡ ಹಾಸನದಲ್ಲಿ ಏನು ಹೇಳಿದರು ಎಲ್ಲವನ್ನು ರಿಲೀಸ್ ಮಾಡುತ್ತೇನೆ ಅಂತ ಹೇಳಿದ್ದರು ಅಲ್ವಾ. ಪೆನ್ ಡ್ರೈವ್ ಕೇಸ್ನಲ್ಲಿ ಹಾಸನದ ಮಾಜಿ ಶಾಸಕನ ಕೈವಾಡ ಇದೆ ಎಂದು ಆರೋಪಿಸದರು.
ಒಂದು ತಿಂಗಳ ದೇವರಾಜೇಗೌಡ ಸ್ಟೇಟ್ಮೇಂಟ್ ನೋಡಿ. ಇದರಲ್ಲಿ ಕೈವಾಡವಿರುವ ಮಾಜಿ ಶಾಸಕನೇ ಕೋಟ್ಯಾಂತರ ರೂ. ಹೂಡಿಕೆ ಮಾಡಿ ಪೆನ್ ಡ್ರೈ ಹಂಚಿದ್ದಾರೆ. ರೇವಣ್ಣ ಕುಟುಂಬದ ಜೊತೆ ರಾಜಕೀಯ ವಿರೋಧಿ ಇದ್ದಾರೆ, ಅವರೇ ಷಡ್ಯಂತ್ರ ಮಾಡಿರೋದು. ಇವಾಗ ಡಿಕೆ ಶಿವಕುಮಾರ್ ಮೇಲೆ ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.
ಈ ಪ್ರಕರಣದಲ್ಲಿ ಮೊಸರು ತಿಂದು ಮೇಕೆ ಬಾಯಿಗೆ ಒರೆಸಿದ ಹಾಗೆ ಮಾಡುತ್ತಿದ್ದಾರೆ. ದೇವರಾಜೇಗೌಡನ ಪೋನ್ ಕಾಲ್ ಟ್ರ್ಯಾಪ್ ಮಾಡಿದ್ರೆ ಎಲ್ಲ ಗೊತ್ತಾಗುತ್ತದೆ. ಇದಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧ ಇಲ್ಲ. ಇದಕ್ಕೆ ನೇರ ಹೊಣೆ ಬಿಜೆಪಿ, ಜೆಡಿಎಸ್ ಪಕ್ಷವನ್ನ ಮುಗಿಸಲು ಬಿಜೆಪಿ ತನ್ನ ಕೋಟೆಯನ್ನ ಭದ್ರಪಡಿಸಿಕೊಳ್ಳುತ್ತಿರುವುದು. ಆದರೆ, ಪವರ್ ಪುಲ್ ಪೀಪಲ್ ಆಗಿರುವ ಡಿಕೆಶಿ ತಲೆಗೆ ಕಟ್ಟಲು ನೋಡ್ತಿದ್ದಾರೆ.