ಬೆಳಗಾವಿ: ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ತೆರಳುತ್ತಿದ್ದಂತ ಕಾರು ಗೂಡ್ಸ್ ವಾಹನಕ್ಕೆ ಡಿಕ್ಕಿಯಾಗಿ ಅಪಘಾತಕ್ಕೀಡಾಗಿದೆ. ಈ ಅಪಘಾತದಲ್ಲಿ ಲಕ್ಷ್ಮಣ್ ಸವದಿಯವರು ಪ್ರಾಣಾಪಾಯದಿಂದ ಪಾರಾಗಿರುವುದಾಗಿ ತಿಳಿದು ಬಂದಿದೆ.
ಬೆಳಗಾವಿಯ ದರೂರ್ ಬಳಿಯಲ್ಲಿ ಗೂಡ್ಸ್ ವಾಹನಕ್ಕೆ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಅವರ ಕಾರು ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಲಕ್ಷ್ಮಣ್ ಸವದಿಯವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿರುವುದಾಗಿ ಹೇಳಲಾಗುತ್ತಿದೆ.
ಲಕ್ಷ್ಮಣ್ ಸವದಿಯವರು ಗೋಕಾಕ್ ನಿಂದ ಬೆಂಗಳೂರಿಗೆ ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಬೆಳಗಾವಿಯ ದರೂರ್ ಬಳಿಯಲ್ಲಿ ಅವರ ಕಾರಿಗ ಗೂಡ್ಸ್ ವಾಹನ ಡಿಕ್ಕಿಯಾಗಿ ಅಪಘಾತ ಉಂಟಾಗಿದೆ. ಅಪಘಾತದ ಬಳಿಕ ಅವರ ಕಾರು ಜಖಂಗೊಂಡಿದ್ದು, ಅಲ್ಲಿಂದ ಬೇರೆ ವಾಹನದಲ್ಲಿ ತೆರಳಿದ್ದಾಗಿ ತಿಳಿದು ಬಂದಿದೆ.
ಬೆಂಗಳೂರಿನ ಜನತೆಗೆ ಮಹತ್ವದ ಮಾಹಿತಿ: ಜು.1ರಿಂದ ‘ಕಟ್ಟಡ ನಕ್ಷೆ’ ಮಂಜೂರಾತಿಗೆ ‘ಇ-ಖಾತಾ’ ಕಡ್ಡಾಯ
ಜೂನ್.9ರಿಂದ ದ್ವಿತೀಯ PUC ಪರೀಕ್ಷೆ-3 ಆರಂಭ: BMTC ಬಸ್ಸಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ