ಬೆಂಗಳೂರು: ನಿನ್ನೆ ನಿಧನರಾದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಅಂತ್ಯಸಂಸ್ಕಾರವನ್ನು ಇಂದು ಮಂಡ್ಯದ ಹುಟ್ಟೂರಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಗುತ್ತದೆ. ಅವರ ಇಂದಿನ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಈ ಕಳಗಿನಂತಿದೆ.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಂತಿಮ ಸಂಸ್ಕಾರದ ಮಾಹಿತಿ
* ಸೋಮವಾರ ತಡರಾತ್ರಿ ನಿಧನರಾದ ಮಾಜಿ ಮುಖ್ಯಮಂತ್ರಿ, ಹಿರಿಯ ಮುತ್ಸದ್ದಿ ಎಸ್.ಎಂ.ಕೃಷ್ಣ ಅವರ ಅಂತಿಮ ಸಂಸ್ಕಾರ ವಿಧಿಗಳು ಡಿಸೆಂಬರ್ 11ರ ಬುಧವಾರದ ಇಂದು ಜರುಗಲಿವೆ.
* ಇಂದು ಬೆಳಗ್ಗೆ 8 ಗಂಟೆಗೆ ಬೆಂಗಳೂರಿನ ಸದಾಶಿವನಗರ ಸ್ವಗೃಹದಿಂದ ಹೊರಟು ವಾಹನದಲ್ಲಿ ದಿವಂಗತ ಕೃಷ್ಣ ಅವರ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುವುದು.
* ಬೆಂಗಳೂರಿನ ಟೌನ್ ಹಾಲ್, ಮೈಸೂರು ಸರ್ಕಲ್, ರಾಜರಾಜೇಶ್ವರಿ ಆರ್ಚ್ ಮುಖಾಂತರ, ಕೆಂಗೇರಿ, ಬಿಡದಿ, ರಾಮನಗರ, ಚನ್ನಪಟ್ಟಣ ಮೂಲಕ ಸಾಗಲಿದೆ.
*ಇಂದು ಬೆಳಗ್ಗೆ 10.30 ಮದ್ದೂರಿಗೆ ಪಾರ್ಥಿವ ಶರೀರ ತಲುಪಲಿದೆ. ಮೃತರ ಸ್ವಗ್ರಾಮ ಸೋಮನಹಳ್ಳಿಯಲ್ಲಿ ಅಂತಿಮ ದರ್ಶನಕ್ಕೆ ಮಧ್ಯಾಹ್ನ 3 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗುತ್ತದೆ.
* ಮಧ್ಯಾಹ್ನ 3 ಗಂಟೆಯ ನಂತರ ಶ್ರೀರಂಗಪಟ್ಟಣದ ಪುರೋಹಿತರಾದ ಭಾನುಪ್ರಕಾಶ್ ಶರ್ಮ ಅವರು ಒಕ್ಕಲಿಗ ವಿಧಿ ವಿಧಾನಗಳ ಮೂಲಕ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ಅಂತಿಮ ಸಂಸ್ಕಾರದ ವಿಧಿ, ವಿಧಾನಗಳನ್ನು ನೇರವೇರಿಸಲಿದ್ದಾರೆ.