ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು 2023ರ ಚುನಾವಣೆಯಲ್ಲಿ ಬಾದಾಮಿ (Badami) ಬದಲಾಗಿ ವರುಣಾ (Varuna) ಕ್ಷೇತ್ರದಲ್ಲೇ ಸ್ಪರ್ಧೆ ಮಾಡುವ ಸಾಧ್ಯತೆ ಬಹುತೇಕ ಸ್ಪಷ್ಟವಾಗುತ್ತಿದೆ. ಸ್ಪರ್ಧೆ ಕುರಿತಾಗಿ ಸಿದ್ದರಾಮಯ್ಯ ಅಧಿಕೃತವಾಗಿ ಖಚಿತಪಡಿಸದೇ ಇದ್ದರೂ, ಸಿದ್ದರಾಮಯ್ಯ ಪುತ್ರ ಯತೀಂದ್ರ (Yathindra) ಅವರು ನೀಡಿರುವ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ.
ಎಚ್ಚರ..ಪೋಷಕರೇ ಎಚ್ಚರ : ಮಕ್ಕಳನ್ನು ಆಡಲು ಬಿಡುವ ಮುನ್ನ ಈ ಸುದ್ದಿ ಓದಿ
ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಬಾದಾಮಿ ಹಾಗೂ ಚಾಮುಂಡೇಶ್ವರಿಯಲ್ಲಿ ಸ್ಪರ್ಧೆ ನಡೆಸಿದ್ದರು. ಆದರೆ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋಲು ಅನುಭವಿಸಿದ್ದರು. ಈ ಸೋಲು ಸಿದ್ದರಾಮಯ್ಯ ಅವರಿಗೆ ಅಘಾತ ಉಂಟು ಮಾಡಿತ್ತು.
ಎಚ್ಚರ..ಪೋಷಕರೇ ಎಚ್ಚರ : ಮಕ್ಕಳನ್ನು ಆಡಲು ಬಿಡುವ ಮುನ್ನ ಈ ಸುದ್ದಿ ಓದಿ
ಈ ನಡುವೆ ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಬಾದಾಮಿಯಲ್ಲಿಯೇ ಸ್ಪರ್ಧೆ ಮಾಡುತ್ತಾರಾ? ಅಥವಾ ಬಾದಾಮಿಗೆ ಗುಡ್ ಬೈ ಹೇಳುತ್ತಾರಾ? ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದರ ಜೊತೆಗೆ ಸಿದ್ದರಾಮಯ್ಯ ಚಾಮರಾಜಪೇಟೆ ಅಥವಾ ಕೋಲಾರದಲ್ಲಿ ಸ್ಪರ್ಧೆ ನಡೆಸುತ್ತಾರೆ ಎಂಬ ಮಾತುಗಳೂ ಕೇಳಿ ಬರುತ್ತಿದೆ. ಆದರೆ ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬುದು ಅಧಿಕೃತಗೊಂಡಿಲ್ಲ.
ಎಚ್ಚರ..ಪೋಷಕರೇ ಎಚ್ಚರ : ಮಕ್ಕಳನ್ನು ಆಡಲು ಬಿಡುವ ಮುನ್ನ ಈ ಸುದ್ದಿ ಓದಿ
ಆದರೆ ಈ ಬಾರಿಯ ಚುನಾವಣೆಯಲ್ಲಿ ಸಿದ್ದರಾಮಯ್ಯ ಬಾದಾಮಿ, ಕೋಲಾರ, ಚಾಮರಾಜಪೇಟೆ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆ ನಡೆಸದೆ, ವರುಣಾ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಎಚ್ಚರ..ಪೋಷಕರೇ ಎಚ್ಚರ : ಮಕ್ಕಳನ್ನು ಆಡಲು ಬಿಡುವ ಮುನ್ನ ಈ ಸುದ್ದಿ ಓದಿ
ವರುಣಾ ಕ್ಷೇತ್ರ ಆಯ್ಕೆ ಏಕೆ?
* ಸೋಲಿನ ಭೀತಿ ಕಾಡುತ್ತಿದ್ದೀಯಾ ವಿಪಕ್ಷ ನಾಯಕ ಸಿದ್ದರಾಮಯ್ಯಗೆ?
* ಮುಂದಿನ ಸಿಎಂ ಜಟಾಪಟಿಗೆ ಸೇಫ್ ಕ್ಷೇತ್ರ ನೋಡುತ್ತಿರುವ ಸಿದ್ದರಾಮಯ್ಯ
* ಸಿದ್ದರಾಮಯ್ಯಗೆ ವಿರೋಧ ಪಕ್ಷಕ್ಕಿಂತ ಸ್ವಪಕ್ಷೀಯರದ್ದೇ ಆತಂಕ
* 2018ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಳ ಏಟು ಅನುಭವಿಸಿದ್ದ ಸಿದ್ದರಾಮಯ್ಯ
* 2013ರ ಚುನಾವಣೆಯಲ್ಲಿ ಸೋಲಿನಿಂದ ಪರಮೇಶ್ವರ್ಗೆ ಕೈ ತಪ್ಪಿದ್ದ ಸಿಎಂ ಸ್ಥಾನ
* ಹಿಂದಿನ ಅನುಭವಗಳಿಂದ ಎಚ್ಚರಿಕೆ ಹೆಜ್ಜೆ ಇಡಲು ಮುಂದಾದ ಸಿದ್ದರಾಮಯ್ಯ
* ಚಾಮರಾಜಪೇಟೆ, ಕೋಲಾರದಲ್ಲಿ ಸ್ಪರ್ಧೆ ಮಾಡಿ, ರಿಸ್ಕ್ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿರುವ ಸಿದ್ದರಾಮಯ್ಯ
* ಬೇರೆ ಯಾವುದೇ ಕ್ಷೇತ್ರದಲ್ಲೂ ಸ್ಪರ್ಧೆ ಮಾಡಿದ್ರೆ, ಸ್ವಪಕ್ಷ ಹಾಗೂ ವಿಪಕ್ಷದವರು ಸೋಲಿಸಬಹುದು ಎಂಬ ಆತಂಕ
* ಒಂದು ವೇಳೆ ಸೋಲು ಕಂಡರೆ ಸಿದ್ದರಾಮಯ್ಯ ರಾಜಕೀಯ ಭವಿಷ್ಯಕ್ಕೆ ಮಾರಕವಾಗುವ ಆತಂಕ
* ಕಾಂಗ್ರೆಸ್ ಜಯಗಳಿಸಿ, ಸ್ಥಾನದಲ್ಲಿ ಸೋತರೆ ಸಿಎಂ ಸ್ಥಾನವೂ ಕೈ ತಪ್ಪುವ ಆತಂಕ. ಈ ಹಿನ್ನೆಲೆಯಲ್ಲಿ ವರುಣ ಕ್ಷೇತ್ರದಲ್ಲೇ ಸ್ಪರ್ಧೆ ಮಾಡುವುದೇ ಅಂತಿಮ ಆಗುವ ಸಾಧ್ಯತೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ನಡೆ ಕುತೂಹಲ ಕೆರಳಿಸಿದೆ. ಆದರೆ ಅವರ ಅಂತಿಮ ನಿರ್ಧಾರ ಏನು? ಎಂಬುದು ಇನ್ನೂ ಅಧಿಕೃತಗೊಂಡಿಲ್ಲ. ಸದ್ಯ ಕ್ಷೇತ್ರ ಬದಲಾವಣೆಯ ಗುಟ್ಟನ್ನು ಸಿದ್ದರಾಮಯ್ಯ ಬಿಟ್ಟುಕೊಟ್ಟಿಲ್ಲ.
* ವರುಣ ಕ್ಷೇತ್ರವೇ ಸೇಫ್ ಎಂದು ವರದಿ ನೀಡಿರುವ ಸಿದ್ದರಾಮಯ್ಯ ಆಪ್ತರು
* ವರುಣದಿಂದ ಸ್ಪರ್ಧೆ ಮಾಡಿದ್ರೆ ಪುತ್ರ ಯತೀಂದ್ರ ಕ್ಷೇತ್ರ ನೋಡಿಕೊಳ್ಳುತ್ತಾರೆ. ಸುಲಭವಾಗಿ ಸಿದ್ದರಾಮಯ್ಯ ರಾಜ್ಯ ಪ್ರವಾಸ ಮಾಡಬಹುದು ಎಂಬ ಲೆಕ್ಕಾಚಾರ.
ಎಚ್ಚರ..ಪೋಷಕರೇ ಎಚ್ಚರ : ಮಕ್ಕಳನ್ನು ಆಡಲು ಬಿಡುವ ಮುನ್ನ ಈ ಸುದ್ದಿ ಓದಿ