ಬೆಂಗಳೂರು : ನಾಲ್ವಡಿ ಕೃಷ್ಣರಾಜ ಒಡೆಯರಿಗಿಂತ ಸಿಎಂ ಸಿದ್ದರಾಮಯ್ಯ ಹೆಚ್ಚು ಅಭಿವೃದ್ಧಿ ಮಾಡಿದ್ದಾರೆ ಹಾಗೂ ಸಿಎಂ ಸಿದ್ದರಾಮಯ್ಯ ಅವರನ್ನು ನಾಲ್ವಡಿ ಕೃಷ್ಣರಾಜ ಅವರಿಗೆ ಹೋಲಿಕೆ ಮಾಡಿದ ವಿಚಾರವಾಗಿ ಇದೀಗ ಬಿಜೆಪಿ ನಾಯಕರು ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಮಾತನಾಡಿ ಯತೀಂದ್ರ ಅವರ ತಾಯಿಯ ಜೊತೆ ಸೇರಿ ಜಾಗ ಲೂಟಿ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯತೀಂದ್ರ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ. ಒಂದು ಮಾತನ್ನು ಮಾತ್ರ ಸ್ವಲ್ಪ ಮಟ್ಟಿಗೆ ಒಪ್ಪಿಕೊಳ್ಳ ಬಹುದು ಅರಸರು ಲೂಟಿ ಮಾಡದೆ ತನ್ನಲ್ಲಿದ್ದನ್ನು ಎಲ್ಲರಿಗೂ ಕೊಟ್ಟರು. ಯತೀಂದ್ರ ಅವರ ಅಪ್ಪ ಇಡೀ ರಾಜ್ಯವನ್ನು ಲೂಟಿ ಮಾಡಿದರು. ತಾಯಿಯ ಜೊತೆ ಸೇರಿ ಜಾಗ ಲೂಟಿ ಮಾಡಲು ಶುರು ಮಾಡಿದರು. ಅದನ್ನು ಅರಸರು ಮಾಡಲಿಲ್ಲ ಹಾಗಾಗಿ ಶಹಬಾಸ್ ಗಿರಿ ಕೊಟ್ಟಿರಬಹುದು ಆ ಮನುಷ್ಯ ಇಡೀ ರಾಜ್ಯದ ಜನರ ಕ್ಷಮೆ ಕೇಳಬೇಕು ಒಡೆಯರ್ ಕುಟುಂಬ ಬಗ್ಗೆ ಮಾತಾಡುವ ಇವರಿಗೆ ಚಾಮುಂಡಿ ಫಲ ಕೊಡಬೇಕಷ್ಟೇ ಎಂದು ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಹೇಳಿಕೆ ನೀಡಿದರು