ಬೆಂಗಳೂರು: ದೇವರಾಜ ಅರಸು ಟ್ರಕ್ ಟರ್ಮಿನಲ್‌ನಲ್ಲಿ (ಡಿಡಿಯುಟಿಎಲ್) ಸುಮಾರು 47.10 ಕೋಟಿ ಅವ್ಯವಹಾರ ಆರೋಪ ಪ್ರಕರಣದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಎಸ್. ವೀರಯ್ಯ ಜೈಲು ಸೇರಿದ್ದಾರೆ ಎಂದು ತಿಳಿದುಬಂದಿದೆ.
ಹೌದು ಕಳೆದ ಎರಡು ದಿನಗಳ ಹಿಂದೆ ಈ ಒಂದು ಆರೋಪ ವೀರಯ್ಯ ಅವರ ಬಂದಿತ್ತು. ಈ ಹಿನ್ನೆಲೆ CID ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದುಕೊಂಡಿದ್ದರು.ಆರೋಪಿ ವೀರಯ್ಯ ಅವರನ್ನು ಸಿಐಡಿ ಅಧಿಕಾರಿಗಳು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಲಯ ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿತು. ಬಳಿಕ ಸಿಐಡಿ ಅಧಿಕಾರಿಗಳು ಕೇಂದ್ರ ಕಾರಾಗೃಹಕ್ಕೆ ಒಪ್ಪಿಸಿದರು. ಜುಲೈ 12ರಂದು ಸಿಐಡಿ ವೀರಯ್ಯ ಅವರನ್ನು ಬಂಧಿಸಿತ್ತು
ಟರ್ಮಿನಲ್‌ನ ಗುತ್ತಿಗೆ ಅವ್ಯವಹಾರದಲ್ಲಿ ಅಂದಿನ ಅಧ್ಯಕ್ಷರಾಗಿದ್ದ ಡಿ. ಎಸ್. ವೀರಯ್ಯ ಅವರು ಗುತ್ತಿಗೆದಾರರಿಂದ ಮೂರು ಕೋಟಿ ರೂ. ಕಿಕ್ ಬ್ಯಾಕ್ ಪಡೆದು ಅಕ್ರಮದಲ್ಲಿ ಶಾಮೀಲಾಗಿದ್ದರು. ಕಿಕ್ ಬ್ಯಾಕ್ ಹಣದಲ್ಲಿ ಜ್ಞಾನಭಾರತಿ ಉಲ್ಲಾಳುವಿನಲ್ಲಿ ನಿವೇಶನ ಖರೀದಿಸಿದ್ದರು. ಬಳಿಕ ಈ ನಿವೇಶನವನ್ನು ಮಗಳಿಗೆ ದಾನ ಕೊಟ್ಟಿದ್ದರು ಎನ್ನಲಾಗಿದೆ.