ದಾವಣಗೆರೆ : ಕಾಂಗ್ರೆಸ್ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಗೆ ಅರಣ್ಯ ಅಧಿಕಾರಿಗಳು ಧಿಡೀರ್ ಶಾಕ್ ನೀಡಿದ್ದು, ಏಕಾಏಕಿ ಮಲ್ಲಿಕಾರ್ಜುನ್ ಒಡೆತನದ ಕಲ್ಲೇಶ್ವರ ಮಿಲ್ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಇಂದು ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದಾರೆ.
ಜಿಂಕೆ, ಕಾಡು ಹಂದಿ ಸೇರಿ ಇತರೆ ಪ್ರಾಣಿಗಳನ್ನು ಅಕ್ರಮವಾಗಿ ಇಡಲಾಗಿದೆ ಎಂದು ಶಂಕಿಸಿ ಅರಣ್ಯ ಇಲಾಖೆ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಇಂದು ಮಲ್ಲಿಕಾರ್ಜುನ್ ಗೆ ಸೇರಿದ ಕಲ್ಲೇಶ್ವರ ಮಿಲ್ ಗೆ ಒಟ್ಟು 20 ಕ್ಕೂ ಹೆಚ್ಚು ಅಧಿಕ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಧಿಡೀರ್ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳಿಗೆ ಶಾಕ್ ಕೊಟ್ಟ ಪೊಲೀಸ್: 14 ಆಫ್ರಿಕಾ ಮೂಲದ ಪ್ರಜೆ ಬಂಧನ
‘ಬೊಗಳುವ ನಾಯಿ ಕಚ್ಚೋದಿಲ್ಲ’ : ಸಂಜಯ್ ರಾವುತ್ ಹೇಳಿಕೆಗೆ ಸಚಿವ ಅಶೋಕ್ ತಿರುಗೇಟು