ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ಚಿಕ್ಕಬೀಚನಹಳ್ಳಿಯಲ್ಲಿ ಆನೆ ದಾಳಿಗೆ ಸಿಲುಕಿ ಮಹಿಳೆ ಮೃತಪಟ್ಟಿದ್ದು, ಓರ್ವನಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ.
BIGG NEWS: ಮೀಸಲಾತಿ ವಿಚಾರ; ಸರ್ಕಾರ ರಂಗ ಎಂಬ ಪದ ತೆಗೆದು ಮಂಗ ಎಂಬಂತೆ ಮಾಡಿದೆ; ಹೆಚ್.ಡಿ ಕುಮಾರಸ್ವಾಮಿ ಟೀಕೆ
60 ವರ್ಷದ ಸಿದ್ದೇಗೌಡ ಪತ್ನಿ ಚಿಕ್ಕಮ್ಮ ಮೃತ ಮಹಿಳೆ. ಬಿಳಿಕೆರೆ ಗ್ರಾಮದ ರವಿ ಎಂಬುವವರಿಗೆ ಗಂಭೀರ ಗಾಯಗಳಾಗಿವೆ. ಜಮೀನ ಬಳಿ ಹುರುಳಿ ಕಣದಲ್ಲಿ ಚಿಕ್ಕಮ್ಮ ಹಾಗೂ ಪತ್ನಿ ಸಿದ್ದೇಗೌಡ ಕೆಲಸ ಮಾಡುತ್ತಿದ್ದರು, ಈ ವೇಳೆ ಇಬ್ಬರ ಮೇಲೆ ಆನೆ ದಾಳಿ ಮಾಡಿದೆ.
ಸಿದ್ದೇಗೌಡ ಓಡಿಹೋಗಿ ತಪ್ಪಿಸಿಕೊಂಡಿದ್ದಾರೆ, ಆದರೆ ಚಿಕ್ಕಮ್ಮ ಅವರಿಗೆ ಅಲ್ಲಿಂದ ತಕ್ಷಣಕ್ಕೆ ಓಡಿಹೋಗಲು ಸಾಧ್ಯವಾಗದೆ ಆನೆ ಕಾಲಿಗೆ ಸಿಕ್ಕು ಮೃತಪಟ್ಟಿದ್ದಾರೆ.
BIGG NEWS: ಮೀಸಲಾತಿ ವಿಚಾರ; ಸರ್ಕಾರ ರಂಗ ಎಂಬ ಪದ ತೆಗೆದು ಮಂಗ ಎಂಬಂತೆ ಮಾಡಿದೆ; ಹೆಚ್.ಡಿ ಕುಮಾರಸ್ವಾಮಿ ಟೀಕೆ
ಚಿಕ್ಕಬೀಚನಹಳ್ಳಿ ದಾಳಿ ಮಾಡಿದ ಬಳಿಕ ಬಿಳಿಕೆರೆ ಗ್ರಾಮದ ಬಳಿ ರವಿ ಎಂಬುವವರ ಮೇಲು ದಾಳಿ ಮಾಡಿದೆ.
ಮೃತ ಕುಟುಂಬಸ್ಥರ ಭೇಟಿ ಮಾಡಿರುವ ಶಾಸಕ ಜಿ.ಟಿ.ದೇವೆಗೌಡ ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಆನೆ ಸೆರೆ ಹಿಡಿಯುವಂತೆ ಅರಣ್ಯಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.