ಬೆಂಗಳೂರು : ಭಾರತ ಒಂದು ಸಂಸ್ಕೃತಿಕ ಹಾಗೂ ಅನೇಕ ವಿಶಿಷ್ಟವಾದಂತಹ ಐತಿಹಾಸಿಕ ಸ್ಥಳಗಳನ್ನು ಒಳಗೊಂಡಿರುವಂತಹ ದೇಶವಾಗಿದೆ. ಈ ಒಂದು ಭಾರತ ದೇಶವನ್ನು ಕಣ್ತುಂಬಿಕೊಳ್ಳಲು ವಿದೇಶಿಗರು ಭಾರತಕ್ಕೆ ಆಗಾಗ ಭೇಟಿ ನೀಡುತ್ತಾರೆ. ಆದರೆ ನಮ್ಮಲ್ಲಿನ ಕೆಲವು ಕಿಡಿಗೇಡಿಗಳು ಅವರ ಜೊತೆ ಅಂಚಿತವಾಗಿ ಬರುತ್ತಿರುವುದಲ್ಲದೆ ಇದೀಗ ವಿದೇಶಿ ಪ್ರಜೆಯೊಬ್ಬನನ್ನು ಅಪಹರಿಸಿ ಹಣವಸೂಲಿ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿರುವ ತನ್ನ ಅಣ್ಣ ಅಮಿತ್ ರಾಣಾನನ್ನು ನೋಡಲು ಆಸ್ಟ್ರೇಲಿಯಾ ಪ್ರಜೆಯಾಗಿರುವ ಅಲೋಕ್ ರಾಣಾ ಬೆಂಗಳೂರಿಗೆ ಆಗಮಿಸಿದ್ದ. ಡ್ರಗ್ಸ್ಗೆ ಅಡಿಕ್ಟ್ ಆಗಿದ್ದ ಅಲೋಕ್ ಆರೋಪಿ ಮೊನೀಶ್ ಜೊತೆ ಸಂಪರ್ಕ ಹೊಂದಿದ್ದನು. ಡಾರ್ಕ್ ವೆಬ್ ಮೂಲಕ ಮೊನೀಶ್ ಬಳಿ ಡಗ್ಸ್ ಖರೀದಿಸುತ್ತಿದ್ದನು. ಮೋನಿಶ್ನಿಂದ ಐದು ಬಾರಿ ಗಾಂಜಾ ಖರೀದಿಸಿದ್ದ.
ಹೌದು ಆಸ್ಟ್ರೇಲಿಯಾ ಪ್ರಜೆಯರನ್ನು ಕಿಡಿಗೇಡಿಗಳು ಅಪಹರಿಸಿ ಸುಮಾರು ರೂ. 1,10,000 ಹಣವನ್ನು ವಸೂಲಿ ಮಾಡಿರುವ ಘಟನೆ ನಡೆದಿದೆ. ಇದೀಗ ಪೊಲೀಸರು ಸಿನಿಮಾ ರೀತಿಯಲ್ಲಿ ಚೇಸ್ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನ ಪ್ರಕರಣದ ಮಾಸ್ಟರ್ ಮೈಂಡ್ ಮೊನೇಶ್, ಲೋಕೇಶ್, ಕಿಶೋರ್, ರವಿ, ದಿಲೀಪ್ ಹಾಗೂ ಸತೀಶ್ ಎಂದು ಹೇಳಲಾಗುತ್ತಿದೆ.
‘ಗೂಗಲ್ ಕ್ರೋಮ್’ ಬಳಕೆದಾರರಿಗೆ ಎಚ್ಚರಿಕೆ ನೀಡಿದ ಕೇಂದ್ರ ಸರ್ಕಾರ : ಕೂಡಲೇ ಈ ಕೆಲಸ ಮಾಡಿ
ವಿದೇಶಿ ಪ್ರಜೆಯನ್ನು ಉಪಹರಿಸಿ ಆರೋಪಿಗಳು ಡಕಾಯಿತಿ ಮಾಡಿದರು ಎಂದು ಹೇಳಲಾಗುತ್ತಿದೆ. ಆಸ್ಟ್ರೇಲಿಯಾ ಪ್ರಜೆ ಅಲೋಕ್ ರಾಣಾ ಎನ್ನುವ ವ್ಯಕ್ತಿಯನ್ನು ಈ ಆರೋಪಿಗಳು ಅಪಹರಿಸಿ ಮನೆಯೊಂದರಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿ ಹಣ ಪೀಕಿದ್ದರು.ಅಲೋಕ್ ರಾಣಾ ಅಕೌಂಟಿಂದ 70 ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದರು.ನಂತರ ಅಲೋಕ್ ಅಣ್ಣ ಅಮಿತ್ ರಾಣಾ ಎನ್ನುವವರ ಖಾತೆಯಿಂದ ಕೂಡ 40 ಸಾವಿರ ವಸೂಲಿ ಮಾಡಿಕೊಂಡು ಒಟ್ಟು 1ಲಕ್ಷ 10 ಸಾವಿರ ಹಣ ಪೀಕಿದ್ದರು ಎಂದು ಹೇಳಲಾಗುತ್ತಿದೆ.
ಲೋಕಸಭಾ ಚುನಾವಣೆಗೆ ‘ಕಾಂಗ್ರೆಸ್’ ಭರ್ಜರಿ ಸಿದ್ಧತೆ : ಪ್ರತಿ ಜಿಲ್ಲೆಯಲ್ಲಿ ‘ಗ್ಯಾರಂಟಿ ಸಮಾವೇಶ’ ಆಯೋಜನೆಗೆ ಪ್ಲಾನ್
ಬಳಿಕ ಆರೋಪಿಗಳ ಕೈಯಿಂದ ತಪ್ಪಿಸಿಕೊಂಡು ಬಂದು ಅಲೋಕ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಡ್ರಗ್ಸ್ ವಿಷಯ ಬಹಿರಂಗವಾಗುತ್ತದೆ ಎಂದು ಯಾರಿಗೂ ಹೇಳದೆ ಸುಮ್ಮನಿದ್ದ ಅಲೋಕ್, ಪ್ರಕರಣ ನಡೆದು 15 ದಿನಗಳಾದ ನಂತರ ಪೊಲೀಸ್ ಅಧಿಕಾರಿಯೊಬ್ಬರಿಗೆ ಮಾಹಿತಿ ನೀಡಿದ್ದು, ಈ ಬಗ್ಗೆ ಬೆಂಗಳೂರು ಆಗ್ನೇಯ ಡಿಸಿಪಿ ಬಾಬಾಗೆ ಮಾಹಿತಿ ನೀಡಲಾಗಿದೆ. ಬಳಿಕ ಬೊಮ್ಮನಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.